12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್​​

ಉತ್ತರ ಪ್ರದೇಶ : 12 year old rapes minor : ಮಹಿಳೆಯರಿಗೆ ದೇಶದಲ್ಲಿ ಭದ್ರ ವಾತಾವರಣ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತರುತ್ತೆ. ಪೊಲೀಸ್​ ಪಡೆಗಳು ಕೂಡ ಯಾವುದೇ ಅಮಾನವೀಯ ಘಟನೆಗಳು ಸಮಾಜದಲ್ಲಿ ಸಂಭವಿಸಬಾರದು ಅಂತಾ ಹದ್ದಿನ ಕಣ್ಣು ಇಟ್ಟಿರುತ್ತೆ. ಆದರೂ ಕೂಡ ಮಹಿಳೆಯರೂ ಇಂದಿಗೂ ಹೆದರಿಕೊಂಡೇ ಬಾಳುವಂತಹ ಪರಿಸ್ಥಿತಿ ನಮ್ಮಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು, ಕೌಟುಂಬಿಕ ದೌರ್ಜನ್ಯ , ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ಸಾಕಷ್ಟು ಪಿಡುಗುಗಳು ಇನ್ನೂ ನಮ್ಮ ಸಮಾಜದಲ್ಲಿ ಜೀವಂತವಾಗಿಯೇ ಉಳಿದಿದೆ.


ಉತ್ತರ ಪ್ರದೇಶ ರಾಜ್ಯ ಬುದೌನ್​​ನ ಉಗಾಹೈತಿ ಎಂಬ ಗ್ರಾಮದಲ್ಲಿ ಹನ್ನೆರಡು ವರ್ಷದ ಬಾಲಕ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಹಾಗೂ ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಉಗಾಹೈತಿ ಪೊಲೀಸ್​ ಠಾಣೆ ಅಧಿಕಾರಿ ರಾಜೀವ್​ ಕುಮಾರ್ ತೋಮರ್​ ಮಾಹಿತಿ ನೀಡಿದ್ದಾರೆ.


ಭಾನುವಾರದಂದು ಈ ಘಟನೆ ಸಂಭವಿಸಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷದ ಬಾಲಕಿಯು ತನ್ನ ಮನೆಯ ಹೊರಗಡೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅದೇ ಜಾಗಕ್ಕೆ ಬಂದ 12 ವರ್ಷದ ಬಾಲಕ ಆಕೆಯನ್ನು ಪುಸಲಾಯಿಸಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಜ್ಞಾತ ಸ್ಥಳದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ, ಬಾಲಕಿಯ ಪೋಷಕರು ನೀಡಿದ ದೂರನ್ನು ಆಧರಿಸಿ ಪೊಲೀಸರು ಬಾಲಕನನ್ನು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.


ವಿವಸ್ತ್ರವಾಗಿದ್ದ ಬಾಲಕಿಯು ಸೀದಾ ಮನೆಗೆ ಬಂದಿದ್ದಾಳೆ. ಹಾಗೂ ಆಕೆಯು ತನ್ನ ಪೋಷಕರಿಗೆ ನಡೆದ ಎಲ್ಲಾ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಪೋಷಕರು ಠಾಣೆಗೆ ಆಗಮಿಸಿ ಬಾಲಕನ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡ ಬಳಿಕ ನಾವು ಆರೋಪಿ ಬಾಲಕನನ್ನು ಬಂಧಿಸಿದ್ದೇವೆ ಎಂದು ಉಗಾಹೈತಿ ಪೊಲೀಸ್ ಠಾಣೆ ಅಧಿಕಾರಿ ರಾಜೀವ್​ ಕುಮಾರ್​ ತೋಮರ್​ ಹೇಳಿದರು.

ಇದನ್ನು ಓದಿ : Ravan Dahan : ಧಗಧಗನೇ ಉರಿಯುತ್ತಿದ್ದ ರಾವಣ ಜನರ ಮೇಲೆಯೇ ಬಿದ್ದ ಮುಂದೇನಾಯ್ತು ನೋಡಿ

ಇದನ್ನೂ ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

Uttar Pradesh: 12-year-old rapes minor girl

Comments are closed.