Langya henipavirus : ಚೀನಾದಲ್ಲಿ ಮತ್ತೊಂದು ಹೊಸ ವೈರಸ್​ ಪತ್ತೆ : ಏನಿದರ ಲಕ್ಷಣ ಇಲ್ಲಿದೆ ಮಾಹಿತಿ

ಚೀನಾ : Langya henipavirus : ಚೀನಾದಿಂದ ಬಂದ ಕೊರೊನಾ ವೈರಸ್​ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ. ಇನ್ನೂ ಕೊರೊನಾ ವೈರಸ್​​​ನಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್​ ಹುಟ್ಟುಕೊಂಡಿದೆ. ಚೀನಾದಲ್ಲಿ ಲಾಂಗ್ಯಾ ಹೆನಿಪಾವೈರಸ್​​​ನ 35 ಪ್ರಕರಣಗಳು ವರದಿ ಮಾಡಿವೆ. ಇದು ಪ್ರಾಣಿಗಳಿಂದ ಮನುಷ್ಯನಿಗೆ ಬರುವ ಕಾಯಿಲೆಯಾಗಿದ್ದು ಮೂತ್ರಪಿಂಡ ಹಾಗೂ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.

ತೈವಾನ್​​ನ ಸೆಂಟರ್ಸ್ ಫಾರ್​ ಡಿಸೀಸ್​ ಕಂಟ್ರೋಲ್​​ನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು ಶಾನ್​ಡಾಂಗ್​ ಹಾಗೂ ಹೆನಾನ್​ ಪ್ರಾಂತ್ಯಗಳಲ್ಲಿ ತೀವ್ರವಾದ ಲ್ಯಾಂಗ್ಯಾ ಹೆನಿಪಾವೈರಸ್​​ನ 35 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 26 ಮಂದಿ ಸೋಂಕಿತರಿಗೆ ಯಾವುದೇ ಇತರೆ ರೋಗಕಾರಕಗಳು ಕಂಡು ಬಂದಿಲ್ಲ.

ವೈದ್ಯಕೀಯ ವರದಿಗಳು ನೀಡಿರುವ ಮಾಹಿತಿಯ ಪ್ರಕಾರ, ಹೆನಿಪಾ ವೈರಸ್​ಗಳು ಬಾವಲಿಗಳಿಂದ ಹರಡುವ ಕಾಯಿಲೆಯಾಗಿದ್ದು ಆಸ್ಟ್ರೇಲಿಯಾ ಹಾಗೂ ಏಷ್ಯಾಗಳಲ್ಲಿ ಹೆಚ್ಚುತ್ತಿರುವ ಝೂನೋಟಿಕ್ ರೋಗಗಳ ಜೊತೆಯಲ್ಲಿ ಸಂಬಂಧವನ್ನು ಹೊಂದಿದೆ. ನಿಫಾ ವೈರಸ್​ ಕೂಡ ಇದೇ ಕುಟುಂಬಕ್ಕೆ ಸೇರಿದೆ ಎನ್ನಲಾಗಿದೆ.


ಆಗಸ್ಟ್​ ನಾಲ್ಕರಂದು ನ್ಯೂ ಇಂಗ್ಲೆಂಡ್​ ಜರ್ನಲ್​ ಆಫ್​ ಮೆಡಿಸಿನ್​​ನಲ್ಲಿ ಪ್ರಕಟವಾದ ಎ ಝೂನೋಟಿಕ್​​ ಹೆನಿಪಾವೈರಸ್​ ಇನ್ ಫೆಬ್ರೈಲ್ ಪೇಷಂಟ್ಸ್ ಇನ್ ಚೀನಾ ಅಧ್ಯಯನದಲ್ಲಿ ಜ್ವರವನ್ನು ಉಂಟುಮಾಡುವ ಮಾನವನ ಅನಾರೋಗ್ಯಕ್ಕೆ ಸಂಬಂಧಿಸಿದ ಹೊಸ ಹೆನಿಪಾವೈರಸ್ ಅನ್ನು ಚೀನಾದಲ್ಲಿ ಗುರುತಿಸಲಾಗಿದೆ ಎಂದು ಹೇಳಿದೆ.


ಲಕ್ಷಣಗಳು :
ಈ ಸೋಂಕಿಗೆ ಒಳಗಾದ 26 ರೋಗಿಗಳು ಜ್ವರ, ಆಯಾಸ, ಕೆಮ್ಮು, ಅಜೀರ್ಣ, ಸ್ನಾಯು ನೋವು, ವಾಕರಿಕೆ, ತಲೆನೋವು ಮತ್ತು ವಾಂತಿ ಸೇರಿದಂತೆ ಅನೇಕ ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಲ್ಯಾಂಗ್ಯಾ ಹೆನಿಪಾವೈರಸ್ ಸೋಂಕಿಗೆ ಒಳಗಾದವರಲ್ಲಿ ಬಿಳಿ ರಕ್ತಕಣಗಳ ಕುಸಿತ, ಕಡಿಮೆ ಪ್ಲೇಟ್​ಲೆಟ್​​, ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯವನ್ನು ಅನುಭವಿಸುತ್ತಿರುವುದು ವರದಿಯಾಗಿದೆ .
ಆಗಸ್ಟ್​ 7ರಂದು ನಡೆಸಲಾದ ಸೆರೋಲಾಜಿಕಲ್ ಸಮೀಕ್ಷೆಯ ಪ್ರಕಾರ 2 ಪ್ರತಿಶತ ಮೇಕೆಗಳು ಹಾಗೂ 5 ಪ್ರತಿಶತ ನಾಯಿಗಳಲ್ಲಿ ಈ ಸೋಂಕು ಕಂಡುಬಂದಿದೆ ಎಂದು ತಿಳಿದುಬಂದಿದೆ.


25 ಕಾಡು ಪ್ರಾಣಿಗಳ ಪ್ರಭೇದಗಳ ಮೇಲೆ ಈ ಸೋಂಕಿನ ಬಗ್ಗೆ ಪರೀಕ್ಷೆಯನ್ನು ನಡೆಸಲಾಗಿದ್ದು ಶ್ರೂ ಎಂಬ ಪ್ರಾಣಿಯು ಲ್ಯಾಂಗ್ಯಾ ಹೆನಿಪಾವೈರಸ್​​ನ ಮೂಲವಾಗಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ 27 ಪ್ರತಿಶತ ಶ್ರೂಗಳಲ್ಲಿ ಈ ವೈರಸ್​ ಕಂಡುಬಂದಿದೆ ಎಂದು ಸಿಡಿಸಿ ಡೆಪ್ಯೂಟಿ ಡಿಜಿ ಹೇಳಿದ್ದಾರೆ.


ಲ್ಯಾಂಗ್ಯಾ ವೈರಸ್​ ಅತ್ಯಂತ ಹೊಸದಾಗಿ ಪತ್ತೆಯಾಗಿರುವ ಸೋಂಕಾಗಿರುವುದರಿಂದ ತೈವಾನ್​ನ ಪ್ರಯೋಗಾಲಯಗಳಿಗೆ ವೈರಸ್​ ಬಗ್ಗೆ ಇನ್ನಷ್ಟು ಅಧ್ಯಯನ ಕೈಗೊಳ್ಳಲು ಪ್ರಮಾಣಿತ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದರಿಂದ ಮನುಷ್ಯನ ಮೇಲೆ ಸೋಂಕಿನ ಪ್ರಮಾಣ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಅಧ್ಯಯನ ಮಾಡಬಹುದಾಗಿದೆ.

ಇದನ್ನು ಓದಿ : 3rd CM proposal : ಮತ್ತೆ ಮೂರನೇ ಸಿಎಂ ಪ್ರಸ್ತಾಪ : ಬೆಚ್ಚಿ ಬಿದ್ದ ಬಿಜೆಪಿ ಶಾಸಕರು

ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

All about Langya henipavirus that has infected 35 people in China

Comments are closed.