multi specialty hospital :ಉತ್ತರ ಕನ್ನಡ ಜಿಲ್ಲಾ ಜನತೆಗೆ ಮತ್ತೆ ನಿರಾಶೆ : ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಗದ ಮಂಜೂರಾತಿ

ಬೆಂಗಳೂರು : multi specialty hospital : ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಅಂದರೆ ಸಾಕು ಮೊದಲು ನೆನಪಾಗೋದೇ ಉತ್ತರ ಕನ್ನಡ ಜಿಲ್ಲೆಯ ಜನತೆ. ಜಿಲ್ಲೆಯಲ್ಲೊಂದು ಅಪಘಾತ ನಡೆದರೆ ಸಾಕು ಹುಬ್ಬಳ್ಳಿಗೋ ಇಲ್ಲವೇ ಮಣಿಪಾಲಕ್ಕೋ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯನ್ನು ಹುಡುಕಿಕೊಂಡು ಅಲೆಯಬೇಕಾದ ಸ್ಥಿತಿ ಈ ಜಿಲ್ಲೆಯ ಜನರದ್ದಾಗಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಕಟ್ಟಿಕೊಡಬೇಕು ಅಂತಾ ಉತ್ತರ ಕನ್ನಡ ಜಿಲ್ಲೆಯ ಜನತೆ ಅನೇಕ ವರ್ಷಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನವನ್ನು ನಡೆಸಲುತ್ತಲೇ ಇದ್ದಾರೆ. ಈ ಬಾರಿಯಂತೂ ಫ್ರಿಡಂ ಪಾರ್ಕ್​ನಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು. ಆದರೂ ಸಹ ಉತ್ತರ ಕನ್ನಡ ಜನತೆಯ ಒಕ್ಕೊರಲ ಕೂಗಿಗೆ ರಾಜ್ಯ ಸರ್ಕಾರ ಕಿವಿಗೊಟ್ಟಂತೆ ಕಾಣುತ್ತಿಲ್ಲ.


ಎರಡು ತಿಂಗಳ ಹಿಂದೆ ಶಿರೂರು ಟೋಲ್​ಗೇಟ್​ನಲ್ಲಿ ವೇಗವಾಗಿ ಬಂದ ಆಂಬುಲೆನ್ಸ್​​ ಟೋಲ್​ಗೆ ಗುದ್ದಿದ ಪರಿಣಾಮ ಆಂಬುಲೆನ್ಸ್​ನ ಒಳಗಿದ್ದ ರೋಗಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಸಾಗಿಸುವ ಮಧ್ಯದಲ್ಲಿ ಈ ಅಪಘಾತ ಸಂಭವಿಸಿತ್ತು. ನಮ್ಮ ಜಿಲ್ಲೆಯಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲವೆಂದು ಉತ್ತರ ಕನ್ನಡ ಜಿಲ್ಲೆಯ ಜನತೆ ಆಕ್ರೋಶ ಹೊರಹಾಕಿದ್ದರು.


ಉತ್ತರ ಕನ್ನಡ ಜಿಲ್ಲಾ ಜನತೆಯ ಆಕ್ರೋಶದ ಬಳಿಕ ಸಚಿವ ಡಾ.ಕೆ ಸುಧಾಕರ್​ ಹಾಗೂ ಸಿಎಂ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತೆಂಬ ಭರವಸೆ ನೀಡಿದ್ದರು. ಹೀಗಾಗಿ ಸರ್ಕಾರದಿಂದ ಶುಭಸುದ್ದಿಯ ನಿರೀಕ್ಷೆಯಲ್ಲಿದ್ದ ಉತ್ತರ ಕನ್ನಡ ಜನತೆಗೆ ಮತ್ತೊಮ್ಮೆ ನಿರಾಶೆಯಾಗಿದೆ. ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒದಗಿಸು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ.


ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವ ಜಾಗ, ಸಿಬ್ಬಂದಿ ಸಂಖ್ಯೆ, ಬೇಕಾಗುವ ಉಪಕರಣಗಳು ಸೇರಿದಂತೆ ಸಂಪೂರ್ಣ ಖರ್ಚು ವೆಚ್ಚಗಳ ವಿವರವನ್ನು ಆರೋಗ್ಯ ಇಲಾಖೆ ಆರ್ಥಿಕ ಇಲಾಖೆಗೆ ನೀಡಿತ್ತು. ಆರ್ಥಿಕ ಇಲಾಖೆ ಈ ಪ್ರಸ್ತಾವನೆಯನ್ನು ಒಪ್ಪಿದರೆ ಮಾತ್ರ ಆಸ್ಪತ್ರೆ ನಿರ್ಮಾಣ ಸಾಧ್ಯ. ಆದರೆ ಆರ್ಥಿಕ ಇಲಾಖೆ ಇದನ್ನು ತಳ್ಳಿ ಹಾಕಿದ್ದು ಇದರಿಂದಾಗಿ ಆರೋಗ್ಯ ಇಲಾಖೆ ಇದೀಗ ಮತ್ತೊಮ್ಮೆ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ.

ಇದನ್ನು ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?

ಇದನ್ನೂ ಓದಿ : crores spent on various hospitality programs :ತಲೆತಿರುಗಿಸುತ್ತೆ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಸರ್ಕಾರದಿಂದಾದ ಖರ್ಚು

Disappointment again for the people of Uttara Kannada district: Sanction not received for multi specialty hospital

Comments are closed.