ತಾನೇ ಅಪ್ಘಾನ್‌ ಅಧ್ಯಕ್ಷನೆಂದು ಘೋಷಿಸಿಕೊಂಡ ಉಪಾಧ್ಯಕ್ಷ ಅಮರುಲ್ಲಾ ಸಲೇಹ್

ಕಾಬೂಲ್‌ : ತಾಲಿಬಾನ್‌ ಅಟ್ಟಹಾಸಕ್ಕೆ ಬೆದರಿ ಅಪ್ಘಾನಿಸ್ತಾನ್‌ ಅಧ್ಯಕ್ಷ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶದ ತೊರೆದ ಬೆನ್ನಲ್ಲೇ ತಾಲಿಬಾನ್‌ ಆಡಳಿತ ಶುರುವಾಗಿದೆ. ಈ ನಡುವಲ್ಲೇ ಅಪ್ಘಾನ್‌ ಉಪಾಧ್ಯಕ್ಷ ಅಮರುಲ್ಲಾ ಸಲೇಹ್‌ ತಾನೇ ಅಪ್ಘಾನಿಸ್ತಾನ್‌ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾನೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮರುಲ್ಲಾ ಸಲೇಹ್‌, ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ, ಅಧ್ಯಕ್ಷರ ಅನುಪಸ್ಥಿತಿಯಲ್ಲಿ (ರಾಜೀನಾಮೆ, ಮರಣದ ನಂತರ) ಉಪಾಧ್ಯಕ್ಷ ನಾಗಿರುವವನು ದೇಶದ ಹಂಗಾಮಿ ಅಧ್ಯಕ್ಷನಾಗುತ್ತಾನೆ. ಇದೀಗ ನಾನು ಪ್ರಸ್ತುತ ನನ್ನ ದೇಶದೊಳಗೆ ಇದ್ದೇನೆ. ಅಲ್ಲದೇ ನ್ಯಾಯ ಸಮ್ಮತವಾಗಿ ದೇಶದ ರಕ್ಷಣೆಗೆ ಸಿದ್ದನಾಗಿದ್ದೇನೆ. ಎಲ್ಲಾ ನಾಯಕರನ್ನೂ ಸಂಪರ್ಕಿಸುತ್ತಿದ್ದ. ಅವರ ಬೆಂಬಲ ಮತ್ತು ಒಮ್ಮತವನ್ನು ಪಡೆದುಕೊಳ್ಳಲಿದ್ದೇನೆ ಎಂದಿದ್ದಾರೆ. ಭಾನುವಾರ ಭೂಗತವಾಗಿದ್ದ ಸಲೇಹ್ ತಾನು ಎಂದಿಗೂ ತಾಲಿಬಾನ್ ಗೆ ತಲೆಬಾಗುವುದಿಲ್ಲ. ಅವರೊಂದಿಗೆ ಕೈ ಜೋಡಿಸುವುದೂ ಇಲ್ಲಅವರು ಟ್ವಿಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ತಜಕಿಸ್ತಾನಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮುಹಿಬ್ ಮತ್ತು ಅಧ್ಯಕ್ಷ ಫಝಲ್‌ ಮಹಮೂದ್ ಫಝಲಿಯ ಆಡಳಿತ ಕಚೇರಿಯ ಮುಖ್ಯಸ್ಥರೊಂದಿಗೆ ರಾಷ್ಟ್ರವನ್ನು ತೊರೆದಿದ್ದರೆ, ಅಫ್ಘಾನಿಸ್ತಾನದ ಕೆಲವು ಶಾಸಕರು ಇಸ್ಲಾಮಾಬಾದ್‌ಗೆ ಪಲಾಯನ ಮಾಡಿದ್ದರು. ಅಲ್ಲದೇ ಅಫ್ಘಾನ್ ಸಂಸತ್ತಿನ ಸ್ಪೀಕರ್ ಮೀರ್ ರಹಮಾನ್ ರಹಮಾನಿ, ಯೂನುಸ್ ಕಾನುನಿ, ಮುಹಮ್ಮದ್ ಮುಹಕೆಕ್, ಕರೀಂ ಖಲೀಲಿ, ಅಹ್ಮದ್ ವಾಲಿ ಮಸೂದ್ ಮತ್ತು ಅಹ್ಮದ್ ಜಿಯಾ ಮಸೂದ್ ಇಸ್ಲಾಮಾಬಾದ್ ಗೆ ಪಲಾಯನ ಮಾಡಿದ್ದಾರೆ ಎಂದು ಅಫ್ಘಾನ್ ಮಾಧ್ಯಮ ವರದಿ ಮಾಡಿದೆ.

ಎರಡು ದಶಕಗಳ ನಂತರ ಅಮೇರಿಕಾ ತನ್ನ ಸೈನ್ಯವನ್ನು ವಾಪಾಸ್‌ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು. ಅಫ್ಘಾನ್ ಭದ್ರತಾ ಪಡೆಗಳು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ತರಬೇತಿ ಪಡೆದು ಸಜ್ಜುಗೊಂಡಿದ್ದರಿಂದ ದಂಗೆಕೋರರು ಕೆಲವೇ ದಿನಗಳಲ್ಲಿ ಎಲ್ಲಾ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ತಾಲಿಬಾನ್‌ಗೆ ಹೆದರಿ ದೇಶ ತೊರೆದ ಅಫ್ಗಾನಿಸ್ತಾನ ಅಧ್ಯಕ್ಷ : 129 ಭಾರತೀಯರನ್ನು ಹೊತ್ತು ಬಂದ AIR INDIA ವಿಮಾನ ….!‌

ಇದನ್ನೂ ಓದಿ : Afghanistan Taliban : ತಾಲಿಬಾನ್‌ ಅಟ್ಟಹಾಸಕ್ಕೆ ಶರಣಾಗತಿಯಾದ ಅಪ್ಘಾನಿಸ್ತಾನ

Comments are closed.