ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 5 ಕೋಟಿ : ಸಚಿವ ನಾರಾಯಣ ಗೌಡ

ಬೆಂಗಳೂರು : ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಓಲಂಪಿಕ್ಸ್ ನಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನ ಗೆದ್ರೆ 5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಘೋಷಿಸಿದ್ದಾರೆ.

ಕರ್ನಾಟಕದ ಇಬ್ಬರು ಕ್ರೀಡಾಪಟುಗಳಾದ ಪವರ್ ಲಿಪ್ಟಿಂಗ್ಟ್ ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ ನಿರಂಜನ್ ಮುಕುಂದನ್ ಭಾಗವಹಿಸುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಈಗಾಗಲೇ ಅವರಿಗೆ ಪ್ರೋತ್ಸಾಹ ಧನವಾಗಿ ರೂ. 10 ಲಕ್ಷ ನೀಡಿ ಪ್ರೋತ್ಸಾಹಿಸಲಾಗಿದೆ.

ನಂತರ ಮಾತನಾಡಿದ ಸಚಿವರು, ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ ಸರ್ಕಾರದಿಂದ 5 ಕೋಟಿ ರೂಪಾಯಿ , ಬೆಳ್ಳಿ ಗೆದ್ದರೆ 3 ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದರೆ 2 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಟೋಕಿಯೋ ಪ್ಯಾರಾ ಓಲಂಪಿಕ್ಗೆಸ ಆಯ್ಕೆಯಾಗಿರುವ ಶಕೀನ್ ಖಾತುನ್ ಏಕಲವ್ಯ ಪ್ರಶಸ್ತಿ ವಿಜೇತರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : ಸುಮ್ಮನೇ ದಕ್ಕಿದ್ದಲ್ಲ ಚಿನ್ನ…!! ನೀರಜ್‌ ಚೋಪ್ರಾ ಕಣ್ಣೀರ ಕಥೆ ನಿಮಗೆ ಗೊತ್ತಾ ..!!

ಇದನ್ನೂ ಓದಿ : Neeraj Chopra : ಚಿನ್ನದ ಹುಡುಗ ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಇದನ್ನೂ ಓದಿ : KL Rahul : ಕನ್ನಡಿಗನ ಭರ್ಜರಿ ಕಂ ಬ್ಯಾಕ್‌ : ಪಂದ್ಯಶ್ರೇಷ್ಠ ಪ್ರಶಸ್ತಿ ಧಕ್ಕಿಸಿಕೊಂಡ ರಾಹುಲ್‌

Comments are closed.