African variant covid : ದಕ್ಷಿಣ ಆಫ್ರಿಕಾದ ಕೊರೊನಾ ಭೀತಿ : 6 ಆಫ್ರಿಕನ್ ದೇಶಗಳಿಂದ ವಿಮಾನ ನಿಷೇಧಿಸಿದ ಬೆಹರಿನ್‌

ಬೆಹರಿನ್‌ : ವಿಶ್ವದ ಹಲವು ರಾಷ್ಟ್ರಗಳಲ್ಲಿ ಹೊಸ ಕೋವಿಡ್‌ ರೂಪಾಂತರವು ವ್ಯಾಪಕವಾಗಿ ಹರಡುತ್ತಿದೆ. ಅದ್ರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಅಪಾಯಕಾರಿ ಕೋವಿಡ್‌ ರೂಪಾಂತರಿ ಸೋಂಕು (African variant covid) ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಬಹ್ರೇನ್ ಆರು ಆಫ್ರಿಕನ್ ದೇಶಗಳಿಂದ ವಿಮಾನಗಳನ್ನು ನಿಷೇಧಿಸಿದೆ ಬಹ್ರೇನ್ ದಕ್ಷಿಣ ಆಫ್ರಿಕಾ, ನಮೀಬಿಯಾ, ಲೆಸೊಥೋ, ಸ್ವಾತಿನಿ, ಜಿಂಬಾಬ್ವೆ ಮತ್ತು ಬೋಟ್ಸ್ವಾನಾದಿಂದ ವಿಮಾನಗಳನ್ನು ಸ್ಥಗಿತಗೊಳಿಸಿದೆ.

ಕೊರೊನಾ ಮೊದಲ ಹಾಗೂ ಎರಡನೇ ಅಲೆಯ ವೇಳೆಯಲ್ಲಿ ಯುಕೆ, ಯುರೋಪಿಯನ್ ಯೂನಿಯನ್ ಮತ್ತು ಫ್ರಾನ್ಸ್‌ನಂತಹ ದೇಶಗಳು ಸಹ ವಿಮಾನಯಾನ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದ್ದವು. ದಕ್ಷಿಣ ಆಫ್ರಿಕಾದಲ್ಲಿ 30 ಕ್ಕೂ ಹೆಚ್ಚು ತಳಿಯ ರೂಪಾಂತರಿ ವೈರಸ್‌ ಸೋಂಕು ಕಂಡು ಬಂದಿದೆ. ಅದ್ರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ಕೊರೊನಾ ವೈರಸ್ ರೂಪಾಂತರವನ್ನು B1.1.529 ಎಂದು ಹೆಸರಿಸಲಾಗಿದೆ. ಬ್ರಿಟಿಷ್ ಹೆಲ್ತ್ ಸೇಫ್ಟಿ ಏಜೆನ್ಸಿಯು ಲಸಿಕೆಗಳು, ಚಿಕಿತ್ಸೆಗಳು ಮತ್ತು ಹರಡುವ ಸಂಭಾವ್ಯತೆಯ ಕುರಿತು ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ರೂಪಾಂತರ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ.

ಹೊಸ ರೂಪಾಂತರ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ದಕ್ಷಿಣ ಆಫ್ರಿಕಾದಲ್ಲಿ ತುರ್ತು ಸಭೆಯನ್ನು ಕರೆದಿದೆ. ದೇಶದಾದ್ಯಂತ ಕೈಗೊಳ್ಳಬೇಕಾಗಿರುವ ಅಗತ್ಯ ಹಾಗೂ ತುರ್ತು ಕ್ರಮಗಳ ಕುರಿತು ಚರ್ಚೆಯನ್ನು ನಡೆಸಲಿದೆ. ಅಲ್ಲದೇ ವಿಶ್ವದಾದ್ಯಂತ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : Jansale : ಸತೀಶ್‌ ಪಟ್ಲರಿಗಾದ ಅನ್ಯಾಯ ರಾಘವೇಂದ್ರ ಜನ್ಸಾಲೆ ಅವರಿಗೂ ಆಯ್ತಾ ?

ಇದನ್ನೂ ಓದಿ : Covid Bommai Meeting : ಶಾಲೆ, ಕಾಲೇಜುಗಳಲ್ಲಿ ಕೊರೊನಾ ಆರ್ಭಟ : ಹೊಸ ರೂಪಾಂತರಿ ಭಯ, ಸಿಎಂ ಬೊಮ್ಮಾಯಿ ಮಹತ್ವದ ಸಭೆ

( South African variant covid fear: Beharin banned flights from 6 African countries )

Comments are closed.