Yuvraj Singh picks India’s playing XI: ಟಿ20 ವಿಶ್ವಕಪ್’ಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI ಪ್ರಕಟಿಸಿದ ಯುವರಾಜ್ ಸಿಂಗ್, ಯಾರಿಗೆಲ್ಲಾಸ್ಥಾನ ?

T20 World Cup Yuvraj Singh India playing XI : ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ (ICC t20 World Cup) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಚುಟುಕು ಕ್ರಿಕೆಟ್’ನ ಮಹಾಯುದ್ಧಕ್ಕಿನ್ನು ಐದೇ ದಿನಗಳು ಬಾಕಿ.

T20 World Cup Yuvraj Singh India playing XI : ನ್ಯೂ ಯಾರ್ಕ್: ಐಸಿಸಿ ಟಿ20 ವಿಶ್ವಕಪ್ (ICC t20 World Cup) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಚುಟುಕು ಕ್ರಿಕೆಟ್’ನ ಮಹಾಯುದ್ಧಕ್ಕಿನ್ನು ಐದೇ ದಿನಗಳು ಬಾಕಿ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ.

Yuvraj Singh announced India strongest playing India XI for the T20 World Cup who will be there
Image Credit to Original Source

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಭಾನುವಾರ ನ್ಯೂ ಯಾರ್ಕ್ ತಲುಪಿದೆ.

ಇದನ್ನೂ ಓದಿ : Team India Head Coach : ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

https://x.com/BCCI/status/1794949148502032604

ಭಾರತದ ಮಾಜಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಯಾರು ಕಣಕ್ಕಿಳಿದರೆ ಉತ್ತಮ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಯುವರಾಜ್ ಸಿಂಗ್ ತಮ್ಮ ಆಯ್ಕೆಯ ಪ್ಲೇಯಿಂಗ್ XI ಹೆಸರಿಸಿದ್ದು, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದಾರೆ.

Yuvraj Singh announced India strongest playing India XI for the T20 World Cup who will be there
Image Credit to Original Source

ಟಿ20 ವಿಶ್ವಕಪ್”ಗೆ ಯುವರಾಜ್ ಸಿಂಗ್ ಆಯ್ಕೆ ಮಾಡಿದ ಭಾರತದ ಪ್ಲೇಯಿಂಗ್ XI
1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಹಾರ್ದಿಕ್ ಪಾಂಡ್ಯ
7. ಶಿವಂ ದುಬೆ
8. ಯುಜ್ವೇಂದ್ರ ಚಹಲ್
9. ಮೊಹಮ್ಮದ್ ಸಿರಾಜ್
10. ಜಸ್ಪ್ರೀತ್ ಬುಮ್ರಾ
11. ಅರ್ಷದೀಪ್ ಸಿಂಗ್

ಇದನ್ನೂ ಓದಿ : Yuvraj Singh 2.0 Loading: ಯುವರಾಜ್‌ ಸಿಂಗ್ ತಯಾರು ಮಾಡಿದ ಹುಡುಗ‌ ಅಭಿಷೇಕ್‌ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!

ಐಸಿಸಿ ಟಿ20 ವಿಶ್ವಕಪ್-2024 ಟೂರ್ನಿಗೆ ಆಯ್ಕೆಯಾಗಿರುವ 15 ಮಂದಿ ಸದಸ್ಯರ ಭಾರತ ತಂಡ:
1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಹಾರ್ದಿಕ್ ಪಾಂಡ್ಯ
7. ರವೀಂದ್ರ ಜಡೇಜ
8. ಕುಲ್ದೀಪ್ ಯಾದವ್
9. ಜಸ್ಪ್ರೀತ್ ಬುಮ್ರಾ
10. ಮೊಹಮ್ಮದ್ ಸಿರಾಜ್
11. ಅರ್ಷದೀಪ್ ಸಿಂಗ್
12. ಅಕ್ಷರ್ ಪಟೇಲ್
13. ಯುಜ್ವೇಂದ್ರ ಚಹಲ್
14. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
15. ಶಿವಂ ದುಬೆ

ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?

ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ (ICC Men’s T20 World Cup 2024)
ಜೂನ್ 05: ಭಾರತ Vs ಐರ್ಲೆಂಡ್ (ನ್ಯೂಯಾರ್ಕ್, ರಾತ್ರಿ 7.30ಕ್ಕೆ)
ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)

Yuvraj Singh announced India strongest playing India XI for the T20 World Cup who will be there ?

Comments are closed.