Bangladesh ISKCON : ಬಾಂಗ್ಲಾದ ಇಸ್ಕಾನ್ ದೇವಾಲಯದ ಮೇಲೆ ದಾಳಿ : 3 ಜನ ಸಾವು

ಡಾಕಾ : ಬಾಂಗ್ಲಾದೇಶ ಹಲವು ವರ್ಷಗಳ ಹಿಂದೆ ಭಾರತದ ಒಂದು ಭಾಗವಾಗಿತ್ತು. ಅಲ್ಲಿ ಭಾರತದಂತೆ ಹಿಂದೂ ದೇವಸ್ಥಾನಗಳು ಇದ್ದವು ಆದರೆ ದೇವಾಲಯ ವಿಧ್ವಂಸಕತೆಯಿಂದ ಎಲ್ಲಾ ವಿನಾಶದ ಅಂಚಿಗೆ ಬಂದಿವೆ. ಬಾಂಗ್ಲಾದೇಶದಲ್ಲಿ, ಪ್ರಧಾನಿ ಶೇಖ್ ಹಸೀನಾ ಅವರ ಎಚ್ಚರಿಕೆಯ ನಂತರವೂ, ದೇವಾಲಯ ವಿಧ್ವಂಸಕತೆಗಳು ಮತ್ತು ಹಿಂದೂಗಳ ಮೇಲಿನ ದಾಳಿ ಪ್ರಕರಣಗಳು ಮುಂದುವರೆದಿದೆ.

ಬಾಂಗ್ಲಾದೇಶದ ನವಾಖಲಿಯಲ್ಲಿ ಗುಂಪೊಂದು ಇಸ್ಕಾನ್ ದೇವಾಲಯದ (ISKON Temple) ಮೇಲೆ ದಾಳಿ ಮಾಡಿ ದರೋಡೆ ನಡೆಸಿತು ಮತ್ತು ದೇವಾಲಯದಲ್ಲಿನ ಭಕ್ತರ ಮೇಲೂ ಹಲ್ಲೆ ನಡೆಸಲಾಗಿದೆ. ದಾಳಿಯ ಬಗ್ಗೆ ಇಸ್ಕಾನ್ ಟ್ವೀಟ್ ಮಾಡಿದ್ದು, ದಾಳಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ. ಬಾಂಗ್ಲಾದೇಶದ ನವಾಖಾಲಿಯಲ್ಲಿ ಇಂದು ಇಸ್ಕಾನ್ ದೇವಾಲಯ ಮತ್ತು ಭಕ್ತರ ಮೇಲೆ ಗುಂಪುಗಳು ಹಿಂಸಾತ್ಮಕವಾಗಿ ಹಲ್ಲೆ ನಡೆಸಿವೆ.

ಇದನ್ನೂ ಓದಿ :Kandahar Blast : ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ : 32 ಸಾವು, 53 ಮಂದಿಗೆ ಗಾಯ

ದಾಳಿಯಿಂದಾಗಿ ಇಸ್ಕಾನ್‌ ದೇವಾಲಯಕ್ಕೆ ಸಾಕಷ್ಟು ಹಾನಿಯಾಗಿದೆ. ಅಲ್ಲದೇ ಅನೇಕ ಭಕ್ತರ ಸ್ಥಿತಿ ಗಂಭೀರವಾಗಿದೆ. ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಪರಾಧಿಗಳನ್ನು ನ್ಯಾಯದ ಬಳಿಗೆ ತರಲು ನಾವು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇವೆ. ಎಂದು ಬರೆದಿದ್ದಾರೆ.

ದುರ್ಗಾ ಪೆಂಡಾಲ್ ಗಳು ಮತ್ತು ದೇವಾಲಯಗಳ ಮೇಲೆ ದಾಳಿ : ಬಾಂಗ್ಲಾದೇಶದಲ್ಲಿ, ದಾಳಿಕೋರರು ಚಿತ್ತಗಾಂಗ್ ವಿಭಾಗದ ಕೊಮಿಲಾ ಪ್ರದೇಶದ ಹಲವಾರು ಸ್ಥಳಗಳಲ್ಲಿ ದುರ್ಗಾ ಪೂಜಾ ಪೆಂಡಾಲ್ ಗಳ ಮೇಲೆ ಕುರಾನ್ ಗೆ ಅವಮಾನದ ಸುದ್ದಿಯನ್ನು ಹರಡುವ ಮೂಲಕ ದಾಳಿ ನಡೆಸಿದರು. ಅಷ್ಟೇ ಅಲ್ಲ, ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಯಿತು. ಈ ಅವಧಿಯಲ್ಲಿ ಹಿಂದೂಗಳನ್ನು ಸಹ ಗುರಿಯಾಗಿಸಿಕೊಳ್ಳಲಾಯಿತು. ಈ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಹಿಂದೂಗಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ :Afghanistan : ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ 100ಕ್ಕೆ ಏರಿಕೆ

ಶೇಖ್ ಹಸೀನಾ ಅವರ ಎಚ್ಚರಿಕೆಯ ನಂತರವೂ ದಾಳಿಗಳು ಮುಂದುವರೆದಿವೆ : ಆಘಾತಕಾರಿ ಸಂಗತಿಯೆಂದರೆ, ಪ್ರಧಾನಿ ಶೇಖ್ ಹಸೀನಾ ಅವರ ಎಚ್ಚರಿಕೆಯ ನಂತರವೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಿಲ್ಲುತ್ತಿಲ್ಲ. ದಾಳಿಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಶೇಖ್ ಹಸೀನಾ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದರು. ಅವರು ಯಾವ ಧರ್ಮದ ಜನರು ಎಂಬುದು ಮುಖ್ಯವಲ್ಲ ಎಂದು ಶೇಖ್ ಹಸೀನಾ ಹೇಳಿದರು.

(3 killed in attack on ISKCON temple in Bangladesh)

Comments are closed.