China Lockdown : ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ : ಶಾಲೆಗಳು ಬಂದ್‌, ವಿಮಾನ ಹಾರಾಟ ಸ್ಥಗಿತ

ಬೀಜಿಂಗ್‌ : ಕೊರೊನಾ ವೈರಸ್‌ ಸೋಂಕಿನ ಹುಟ್ಟೂರು ಚೀನಾದಲ್ಲೀಗ ಮತ್ತೆ ಕೊರೊನಾ ಆರ್ಭಟ ಶುರುವಾಗಿದೆ. ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸೋಂಕಿನ ಪ್ರಮಾಣ ಇದೀಗ ಏಕಾಏಕಿಯಾಗಿ ಏರಿಕೆಯಾಗಿದ್ದು, ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಿಮಾನ ಹಾರಾಟವನ್ನು ಬಂದ್‌ ಮಾಡಲಾಗಿದೆ.

ವಿಶ್ವದಲ್ಲಿಯೇ ಮೊದಲ ಬಾರಿಗೆ ಚೀನಾದಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಸ್ವಲ್ಪ ಸಮಯದಲ್ಲಿಯೇ ಹೆಮ್ಮಾರಿ ಕೊರೊನಾ ವಿಶ್ವದಾದ್ಯಂತ ಆರ್ಭಟಿಸಿತ್ತು. ಕೊರೊನಾ ಲಸಿಕೆಯ ಬೆನ್ನಲ್ಲೇ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಚೀನಾದಲ್ಲಿ ಕೊರೊನಾ ಮರಣ ಮೃದಂಗ ಬಾರಿಸಿದ್ದರೂ ಕೂಡ ತದನಂತರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಹಬದಿಗೆ ಬಂದಿತ್ತು. ಆದ್ರೀಗ ಕೊರೊನಾ ಸೋಂಕು ಮತ್ತೆ ಏರಿಕೆ ಕಾಣುತ್ತಿದೆ.

ಚೀನಾದಲ್ಲಿನ ಶಾಲೆ, ಮಾಲ್‌, ಪ್ರವಾಸಿ ತಾಣಗಳು, ಮನೋರಂಜನಾ ತಾಣಗಳು ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್‌ ಹಾಕಲಾಗಿದೆ. ಚೀನಾದ ಕ್ಸಿಯಾನ್‌, ಗನ್ಸು ಹಾಗೂ ಲಾನ್ಸೋ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿಮಾನ ಸೇವೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ನಗರಕ್ಕೆ ಹೊರಗಿನವರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ : ‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !

ಕೊರೊನಾ ಲಸಿಕೆಯ ಬೆನ್ನಲ್ಲೇ ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರವಾಸಿಕ್ಕೆ ಬಂದಿದ್ದ ವೃದ್ದ ದಂಪತಿಗಳಿಂದಾಗಿ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಈ ದಂಪತಿ ಚೀನಾದ ಬಹುತೇಕ ಕಡೆಗಳಲ್ಲಿ ಓಡಾಟವನ್ನು ನಡೆಸಿದ್ದಾರೆ. ಹೀಗಾಗಿಯೇ ಚೀನಾದ ಬಹುತೇಕ ಕಡೆಗಳಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.

r

ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಸೋಂಕಿನಿಂದ ತತ್ತರಿಸಿದ್ದರೂ ಕೂಡ ಲಸಿಕೆ ನೀಡಿದ್ದರ ಪರಿಣಾಮದಿಂದಾಗಿ ಕೊರೊನಾ ಸೋಂಕು ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ ಚೀನಾದಲ್ಲಿ ಮಾತ್ರ ಸೋಂಕು ಹೆಚ್ಚುತ್ತಿದ್ದು ಲಾಕ್‌ಡೌನ್‌ ಹೇರಿಕೆಯ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : 80 ಲಕ್ಷ ಪೋನ್ ಸ್ಚಿಚ್ ಆಫ್, ಶೇ.80 ರಷ್ಟು ಜನರೇ ನಾಪತ್ತೆ : ವಿಶ್ವದೆದುರು ಸುಳ್ಳು ಹೇಳಿದ್ಯಾಕೆ ಚೀನಾ !

ಇದನ್ನೂ ಓದಿ : 20,000 ರೋಗಿಗಳ ಹತ್ಯೆಗೆ ಚೀನಾ ಸ್ಕೆಚ್ : ಕೊರೊನಾ ಮುಚ್ಚಿಟ್ಟರೆ ಮರಣದಂಡನೆ !

ಇದನ್ನೂ ಓದಿ : ನವೆಂಬರ್ ನಲ್ಲಿ ಮತ್ತೆ ವ್ಯಾಪಿಸುತ್ತೆ ಕೊರೊನಾ, ಚೀನಾಗೆ ಶುರುವಾಗಿದೆ ಆತಂಕ !!

China Covid cases outbreak schools closed flight ban

Comments are closed.