China Omicron sub-variants BF.7 : ಚೀನಾದಲ್ಲಿ ಪತ್ತೆಯಾಯ್ತು ಹೊಸ Omicron BF.7, BA.5.1.7 ತಳಿ : 24 ಗಂಟೆಯಲ್ಲಿ 1900ಕ್ಕೂ ಅಧಿಕ ಪ್ರಕರಣ ದಾಖಲು

ನವದೆಹಲಿ : China Omicron sub-variants BF.7 : ಕೋವಿಡ್ ವೈರಸ್ ಸೋಂಕಿನ ಆರ್ಭಟ ತಣ್ಣಗಾಯ್ತು ಅನ್ನೋ ಹೊತ್ತಲ್ಲೇ ಕೊರೊನಾ ಹುಟ್ಟೂರು ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಚೀನಾ ಹೊಸ Omicron ಉಪ-ರೂಪಾಂತರಗಳಾದ BF.7 ಮತ್ತು BA.5.1.7 ಅನ್ನು ಪತ್ತೆ ಮಾಡಿದ್ದು, 24 ಗಂಟೆಗಳಲ್ಲಿ 1900 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಹೊಸ ತಳಿ ಚೀನಾದ ಹಲವು ಪ್ರಾಂತ್ಯಗಳಿಗೆ ವ್ಯಾಪಿಸಿದೆ. ಇದರಿಂದಾಗಿ ಚೀನಾದಲ್ಲಿ ಹೊಸ ಆತಂಕ ಶುರುವಾಗಿದೆ.

ಅಕ್ಟೋಬರ್ 4 ರಂದು ಯಾಂಟೈ ಮತ್ತು ಶಾವೊಗುವಾನ್ ನಗರದಲ್ಲಿ ಹೊಸ ತಳಿ BF.7 ಪತ್ತೆಯಾಗಿದೆ. ಬಿಎಫ್ 7 ಕೋವಿಡ್ ಮತ್ತು ಒಮಿಕ್ರಾನ್ ನ ಪ್ರಬಲ ರೂಪಾಂತರದ ಉಪವಿಭಾಗವಾಗಿದೆ ಎಂದು ಚೀನಾ ಮಾಧ್ಯಮ ವರದಿ ಹೇಳಿದೆ. ಕೋವಿಡ್ ಹಾಗೂ ಒಮಿಕ್ರಾನ್ ನ ಇತರ ರೂಪಾಂತರಗಳಿಗೆ ಹೋಲಿಕೆ ಮಾಡಿದ್ರೆ ಇದು ಪ್ರಬಲವಾಗಿರುವುದು ಮಾತ್ರವಲ್ಲ ವೇಗವಾಗಿ ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ.

ಬಿಎಫ್ 7 ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂಠಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ ಚೀನಾದಲ್ಲಿ ಮಾತ್ರವಲ್ಲದೇ ಬಿಎಫ್ 7 ಉಪ ರೂಪಾಂತರವು ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಡೆನ್ಮಾರ್ಕ್ ಮತ್ತು ಇಂಗ್ಲೆಂಡ್‌ನಲ್ಲಿಯೂ ವೇಗವಾಗಿ ಹರಡುತ್ತಿದೆ.USನ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೇರಿಕಾದಲ್ಲಿ ನಲ್ಲಿನ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಬಿಎಫ್ 7 4.6% ರಷ್ಟಿದೆ. ಬಿಎ.5 ಮತ್ತು ಬಿಎ.4.6 ಮೊದಲ ಎರಡು ಅತ್ಯಂತ ಸಾಂಕ್ರಾಮಿಕ ಕೋವಿಡ್ ರೂಪಾಂತರಗಳಾಗಿ ಉಳಿದಿವೆ, ಬಿಎಫ್ 7 ಮೂರನೇ ಸ್ಥಾನದಲ್ಲಿದೆ. ಈ ಉಪ ರೂಪಾಂತರಗಳನ್ನು ಹೊರತುಪಡಿಸಿ, ಬಿಎ.2.75 ಮತ್ತು ಬಿಎ.4 ಗಳು 1.8% ಮತ್ತು 0.8% ಅಮೇರಿಕಾ ನಲ್ಲಿನ ಒಟ್ಟು ಪ್ರಕರಣಗಳು ಬಿಎಫ್ 7 ಅತೀ ಹೆಚ್ಚು ಸಂಖ್ಯೆಯಲ್ಲಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO)ಯು ಓಮಿಕ್ರಾನ್ ನ ಪ್ರಬಲ ರೂಪಾಂತರ ಹರಡುವಿಕೆಯ ಕುರಿತು ಅಕ್ಟೋಬರ್ 4ರಂದು ಹೇಳಿಕೆನ್ನು ನೀಡಿತ್ತು. ಹೊಸ ರೂಪಾಂತರವು ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಬೆಲ್ಜಿಯಂನಲ್ಲಿ ಬಿಎಫ್ 7 ಪ್ರಕರಣ ಪಾಲು 25% ರಷ್ಟಿದ್ದರೆ, ಅಮೇರಿಕಾದಲ್ಲಿ 4.6% ರಷ್ಟಿದೆ. ಚೀನಾದಲ್ಲಿ ಭಾನುವಾರ 1,700 ಕ್ಕೂ ಹೆಚ್ಚು ಪ್ರಕರಣ ವರದಿಯಾಗಿತ್ತು. ಬೀಜಿಂಗ್ ನಲ್ಲಿ ಕೋವಿಡ್ ಹೊಸ ರೂಪಾಂತರ ತಡೆಗಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಭಾರತದಲ್ಲಿ ನಿತ್ಯವೂ 2,000 ಕ್ಕಿಂತ ಕಡಿಮೆ COVID ಪ್ರಕರಣ ದಾಖಲಾಗುತ್ತಿದೆ. ದೇಶದಲ್ಲಿ ಕೋವಿಡ್‌ ಸಕ್ರೀಯ ಪ್ರಕರಣಗಳ ಸಂಖ್ಯೆ 27,374 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,654 ಚೇತರಿಕೆಗಳೊಂದಿಗೆ, ಚೇತರಿಕೆಯ ಪ್ರಮಾಣವು 98.75% ರಷ್ಟಿದೆ. ಭಾರತದಲ್ಲಿಯೂ ಒಮಿಕ್ರಾನ್ ನ ಉಪ ರೂಪಾಂತರವಾಗಿರುವ ಬಿಎ. 2.75 ಅತೀ ಹೆಚ್ಚು ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕೋವಿಡ್ ವೈರಸ್ ಸೋಂಕಿನ ಹುಟ್ಟೂರು ಎನಿಸಿಕೊಂಡಿರುವ ಚೀನಾದಲ್ಲಿ ಉಪ ರೂಪಾಂತರ ಪತ್ತೆಯಾಗಿರುವುದು ಆತಂಕವನ್ನು ಮೂಡಿಸಿದೆ. ಕೋವಿಡ್ ವೈರಸ್ ಸೋಂಕಿನ ಆರ್ಭಟಕ ಕಡಿಮೆಯಾಗಿದ್ದರೂ ಕೂಡ ಹೊಸ ರೂಪಾಂತರ ಮೂಲಕ ಪತ್ತೆಯಾಗುತ್ತಲೇ ಇದೆ. ಚೀನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೋವಿಡ್ ವೈರಸ್ ಸೋಂಕು ನಂತರದಲ್ಲಿ ವಿಶ್ವದಾದ್ಯಂತ ಆತಂಕವನ್ನು ಸೃಷ್ಟಿಸಿತ್ತು.

ಇದನ್ನೂ ಓದಿ : Aircraft Crashed MiG-29K : ವಿಮಾನ ಅಪಘಾತ; ಗೋವಾದಲ್ಲಿ MiG-29K ಯುದ್ಧ ವಿಮಾನ ಪತನ

ಇದನ್ನೂ ಓದಿ : Bihar Accident :ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ, ಮೂವರು ಸಾವು, ಓರ್ವ ಸಜೀವ ದಹನ

China detects new Omicron sub-variants BF.7 and BA.5.1.7, with over 1900 cases reported in 24 hours

Comments are closed.