Rahul Gandhi Police Cases: ರಾಹುಲ್ ಗಾಂಧಿ ವಿರುದ್ಧ 1,000ಕ್ಕೂ ಹೆಚ್ಚು ದೂರು ದಾಖಲು

ಗುವಾಹಟಿ, ಫೆ 14 (ಪಿಟಿಐ) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಟ್ವೀಟ್ ಒಂದರ ವಿರುದ್ಧ  ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು (Rahul Gandhi Police Cases) ದಾಖಲಿಸಲಾಗಿದೆ ಎಂದು ಅಸ್ಸಾಂ ಬಿಜೆಪಿ ಯುವ ಮೋರ್ಚಾ ಸೋಮವಾರ, ಫೆಬ್ರವರಿ 14ರಂದು ಹೇಳಿಕೊಂಡಿದೆ. ಕಳೆದ ವಾರದಿಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ “ಸ್ಪಿರಿಟ್ ಆಫ್ ಇಂಡಿಯಾ” (Spirit Of India Tweet) ಟ್ವೀಟ್ ಕುರಿತು ಅಸ್ಸಾಂ ಬಿಜೆಪಿ (Assam BJP) ಮತ್ತು ವಿವಿಧ ಸಂಘಟನೆಗಳು ಈ ಪ್ರಕರಣಗಳನ್ನು ದಾಖಲಿಸಿವೆ ಎಂದು ತಿಳಿದಬಂದಿದೆ.

ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ “ತಂದೆ-ಮಗ” ಎಂದು ವಾಗ್ದಾಳಿ ನಡೆಸಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಪ್ರತಿಭಟನೆಯನ್ನು ಆರಂಭಿಸಿರುವ ಸಮಯದಲ್ಲಿ ಈ ಘಟನೆ ನಡೆದಿದೆ.  ಕಾಂಗ್ರೆಸ್‌ನ ವಿದ್ಯಾರ್ಥಿ ಮತ್ತು ಯುವ ಘಟಕಗಳು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿವೆ. ಈ ಬೆನ್ನಲ್ಲೇ ಬಿಜೆಪಿ ಮತ್ತು ಅದರ ಘಟಕಗಳು ಅಸ್ಸಾಂನಲ್ಲಿ ರಾಹುಲ್ ಗಾಂದಿ ವಿರುದ್ಧ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾಗಿ ಹೇಳಿಕೊಂಡಿವೆ.

ಬಿಜೆಪಿ ಸದಸ್ಯರು ತಮ್ಮ ಟ್ವೀಟ್‌ನಲ್ಲಿ ಯಾವುದೇ ಈಶಾನ್ಯ ರಾಜ್ಯಗಳನ್ನು ಉಲ್ಲೇಖಿಸದೆ, ದೇಶದ ಇತರ ಭಾಗಗಳಿಂದ ಪ್ರತ್ಯೇಕಿಸಿ ಅಸಂಗತತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿಯವರ ಟ್ವೀಟ್ ಈರೀತಿಯಿತ್ತು-
ನಮ್ಮ ಒಕ್ಕೂಟದಲ್ಲಿ ಶಕ್ತಿ ಇದೆ.
ನಮ್ಮ ಸಂಸ್ಕೃತಿಗಳ ಒಕ್ಕೂಟ.
ನಮ್ಮ ವೈವಿಧ್ಯತೆಯ ಒಕ್ಕೂಟ.
ನಮ್ಮ ಭಾಷೆಗಳ ಒಕ್ಕೂಟ.
ನಮ್ಮ ಜನರ ಒಕ್ಕೂಟ.
ನಮ್ಮ ರಾಜ್ಯಗಳ ಒಕ್ಕೂಟ.

ಕಾಶ್ಮೀರದಿಂದ ಕೇರಳದವರೆಗೆ. ಗುಜರಾತ್‌ನಿಂದ ಪಶ್ಚಿಮ ಬಂಗಾಳಕ್ಕೆ. ಭಾರತವು ತನ್ನ ಎಲ್ಲಾ ಬಣ್ಣಗಳಲ್ಲಿ ಸುಂದರವಾಗಿದೆ. ಭಾರತದ ಚೈತನ್ಯವನ್ನು ಅವಮಾನಿಸಬೇಡಿ” ಎಂದು ಫೆಬ್ರವರಿ 10 ರಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕುರಿತು ಬಿಜೆಪಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.

ರಾಹುಲ್ ಗಾಂಧಿಯವರ ಟ್ವೀಟ್ ರಾಜ್ಯದ ವಿರುದ್ಧ ಸಮರ ಸಾರಿದೆ ಎಂದು ಬಿಜೆಪಿ ದೂರಿದೆ. ಅವರು ದೇಶದ ಪ್ರಾದೇಶಿಕ ಗಡಿಯಲ್ಲಿ ಚೀನಾದ ಅಜೆಂಡಾಕ್ಕೆ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಅಸ್ಸಾಂ ಬಿಜೆಪಿ ಯುವ ಮೋರ್ಚಾ ತನ್ನ ಕಾರ್ಯಕರ್ತರು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ ಎಂದು ಹೇಳಿಕೊಂಡಿದೆ. ಆದರೂ ಈ ದೂರುಗಳ ವಿರುದ್ಧ ಯಾವುದೇ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿದೆಯೇ ಎಂಬುದು ತಕ್ಷಣವೇ ತಿಳಿದಿಲ್ಲ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(Rahul Gandhi Police Cases more than thousand filled by Assam BJP)

Comments are closed.