China’s Spy Balloon: ಆಕಾಶದಲ್ಲಿ ಹಾರಾಡೋ ಬಲೂನ್‌ಗೆ ಗುಂಡು!

ಆಕಾಶದಲ್ಲಿ ಏನಾದ್ರೂ ಹಾರಾಡ್ತಾ ಇರೋದು ಕಂಡ್ರೆ ಈಗ ಸುಮ್ನೆ ಇರೋಕಾಗಲ್ಲ, ಯಾಕಂದ್ರೆ ಅದು ಚೀನಾದಿಂ ಹಾರಾಡ್ತಾ ಬಂದ ಬಲೂನೂ ಇರಬಹುದು, ಬರೀ ಬಲೂನ್ ಆಗಿದ್ರೆ ಸಮಸ್ಯೆ ಇರ್ತಿರ್ಲಿಲ್ವೇನೋ, ಆದ್ರೆ ಬೇಹುಗಾರಿಕೆ (Spy Balloons) ಮಾಡೋ ಬಲೂನ್ ಆಗಿರೋದೇ ದೊಡ್ಡ ಆತಂಕಕ್ಕೆ ಕಾರಣವಾಗಿರೋದು. ಇತ್ತೀಚಿಗಷ್ಟೇ ಆಕಾಶದಲ್ಲಿ ಹಾರಾಡುತ್ತಿದ್ದ ಬಲೂನ್‌ಗಳನ್ನು ಗುಂಡಿಕ್ಕಿ ಕೆಡವಿದ ಅಮೆರಿಕಾ ಅವು ಚೀನಾ ಹಾರಿಸಿದ ಗೂಢಚಾರಿಕೆ ಬಲೂನ್‌ಗಳಾಗಿದ್ದವು (Chinas spy balloons) ಎಂದು ಬಹಳ ಗಂಭೀರ ಆರೋಪ ಮಾಡಿದೆ. ಈ ಬಲೂನ್‌ಗಳು

ದಕ್ಷಿಣ ಕೆರೊಲಿನಾದ ಕಡಲತೀರದ ಸಮುದ್ರದ ಬಳಿ ಅಮೆರಿಕಾ ಈ ಬಲೂನ್‌ಗಳಿಗೆ ಗುಂಡಿಕ್ಕಿದೆ. ಜೊತೆಗೆ ಇನ್ನೊಂದು ಆತಂಕದ ವಿಷಯ, ಭಾರತ, ಜಪಾನ್ ಸೇರಿದಂತೆ ಹಲವು ದೇಶಗಳನ್ನು ಗುರಿಯಾಗಿಸಿಕೊಂಡು ಚೀನಾ ಬಲೂನ್‌ಗಳ (Chinas spy balloons) ಮೂಲಕ ಬೇಹುಗಾರಿಕೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಬಲೂನ್ ಅವಶೇಷಗಳ ಪರೀಕ್ಷೆ

18,000 ಮೀಟರ್ (58,000 ಅಡಿ) ಮತ್ತು 19,800 ಮೀಟರ್‌ಗಳ ಎತ್ತರದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಲಾಕ್‌ಹೀಡ್ ಮಾರ್ಟಿನ್ ಎಫ್ -22 ರಾಪ್ಟರ್ ಜೆಟ್ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಒಂದೇ AIM-9X ಕ್ಷಿಪಣಿಯೊಂದಿಗೆ ನಾಶಪಡಿಸಿತು. ಕಳೆದ ವಾರ ಫೈಟರ್ ಜೆಟ್‌ನಿಂದ ಚೀನಾದ ಬೇಹುಗಾರಿಕಾ ಬಲೂನ್‌ಗಳನ್ನು ಹೊಡೆದುರುಳಿಸಿದ ಬಲೂನ್‌ನ ಅವಶೇಷಗಳನ್ನು ಚೀನಾ ಪರೀಕ್ಷೆಗೆ ಒಳಪಡಿಸಿದೆ. ಅಷ್ಟೊಂದು ಎತ್ತರದಲ್ಲಿ ಹಾರಾಡುತ್ತಿದ್ದ ಬಲೂನ್‌ಗಳನ್ನು ಹೊಡೆದುರುಳಿಸಿದ್ದರಿಂದ ಹೆಚ್ಚಿನ ಅವಶೇಷಗಳು ಅನೇಕ ಚದರ ಕಿಲೋಮೀಟರ್‌ಗಳಷ್ಟು ಪ್ರದೇಶದಲ್ಲಿ ಹರಡಿ ಬಿದ್ದಿದ್ದವು.

ಆರು ಏರೋಸ್ಪೇಸ್ ಕಂಪನಿಗಳಿಗೆ ನಿರ್ಬಂಧ

ಚೀನಾದ ಬೇಹುಗಾರಿಕಾ ಬಲೂನ್ ಬೆಂಬಲಿಸುತ್ತಿರುವ ಆರು ಚೀನೀ ಏರೋಸ್ಪೇಸ್ ಕಂಪನಿಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕಾ ವಾಣಿಜ್ಯ ಇಲಾಖೆ ಹಲವು ನಿರ್ಬಂಧಗಳನ್ನು ಘೋಷಿಸಿದೆ. ಈ ಸಂಸ್ಥೆಗಳು ಚೀನಾ ಮೂಲದ ಬೆಳೆಯುತ್ತಿರುವ ಕಂಪನಿಗಳ ಪಟ್ಟಿಗೆ ಸೇರಿವೆ. ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಗಳನ್ನು ಉಂಟುಮಾಡುವ ಚೀನಾದ ಯೋಜನೆಗಳಿಗೆ ಈ ಕಂಪನಿಗಳು ಬೆಂಬಲ ವ್ಯಕ್ತಪಡಿಸಿದ್ದವು. ಹೀಗಾಗಿ ಈ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಯುಎಸ್ ತಿಳಿಸಿದೆ.

ಇದನ್ನೂ ಓದಿ : Mandir of Mother India: ಕರಾವಳಿಯಲ್ಲಿ ಲೋಕಾರ್ಪಣೆಯಾಗಲಿದೆ ಮತ್ತೊಂದು ಭವ್ಯ ಮಂದಿರ: ಇದರ ವಿಶೇಷತೆಯೇನು ಗೊತ್ತಾ?

ಇದನ್ನೂ ಓದಿ : ಮುಸ್ಲಿಂ ಮತಬುಟ್ಟಿಗೆ ಕೈಹಾಕಿದ ಪ್ರಧಾನಿ ಮೋದಿ

Comments are closed.