“ಪುಷ್ಪ 2” ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲ ಕಾರಣವೇನು ಗೊತ್ತಾ ?

2021ರಲ್ಲಿ ತೆರೆಕಂಡು ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದ್ದ ಸುಕುಮಾರ್ ನಿರ್ದೇಶನದ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೈಸ್ ಸಿನಿಮಾದ ಮುಂದುವರಿದ ಭಾಗ ಪುಷ್ಪ ದ ರೂಲ್ ಸಿನಿಮಾದ (Pushpa 2 ) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಪುಷ್ಪ ಸಿನಿಮಾಕ್ಕೂ ಮುನ್ನ ತೆಲುಗು ಸಿನಿರಂಗದಲ್ಲಿ ಹೆಸರು ಮಾಡಿದ್ದ ರಶ್ಮಿಕಾ ಮಂದಣ್ಣ ಖ್ಯಾತಿಯನ್ನು ಈ ಸಿನಿಮಾ ದುಪ್ಪಟ್ಟು ಮಾಡಿದ್ದು ಸುಳ್ಳಲ್ಲ. ಈ ಸಿನಿಮಾದಲ್ಲಿ ಹೆಚ್ಚು ಪ್ರಾಶಸ್ತ್ಯ ಇದ್ದ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದ್ದ ರಶ್ಮಿಕಾ ಮಂದಣ್ಣ ದೇಶವ್ಯಾಪಿ ಆಗಿದ್ದರು. ಸಿನಿಮಾದಲ್ಲಿ ಎಮೋಷನಲ್ ದೃಶ್ಯಗಳು ಹಾಗೂ ಹಾಡುಗಳನ್ನೂ ಸಹ ಹೊಂದಿದ್ದ ರಶ್ಮಿಕಾ ಮಂದಣ್ಣಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿತ್ತು. ಆದರೆ ಪುಷ್ಪ ಎರಡನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ (Pushpa 2 – Rashmika Mandanna) ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲ ಎನ್ನಲಾಗುತ್ತಿದೆ.

ಹೌದು, ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ನಿರ್ವಹಿಸುತ್ತಿರುವ ಪುಷ್ಪ ಪಾತ್ರ ಮತ್ತೊಂದು ಹಂತಕ್ಕೆ ಬೆಳೆಯುವ ಕಥೆ ಇರಲಿದ್ದು, ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಪಾತ್ರಗಳಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇರಲಿದೆ. ಈ ಎರಡು ಪಾತ್ರಗಳ ಜತೆ ಸಹ ನಟರ ಪಾತ್ರಗಳು ಮತ್ತು ಹೆಚ್ಚಾಗಿ ವಿಲನ್ ಪಾತ್ರಗಳಿಗೆ ಎರಡನೇ ಭಾಗದಲ್ಲಿ ಹೆಚ್ಚು ಪ್ರಾಶಸ್ತ್ಯ ಇರಲಿದೆ ಎಂಬ ಸುದ್ದಿ ಇದೆ. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿರಂಗಕ್ಕೂ ಸಹ ಕಾಲಿಟ್ಟಿದ್ದು, ಈಕೆ ನಟನೆಯ ಮೊದಲ ಸಿನಿಮಾ ಗುಡ್ ಬೈ ಬಾಕ್ಸ್ ಆಫೀಸ್‌ನಲ್ಲಿ ಮಲಗಿದರೆ, ಎರಡನೇ ಹಿಂದಿ ಸಿನಿಮಾ ಮಿಷನ್ ಮಜ್ನು ಓಟಿಟಿಯಲ್ಲಿ ತೆರೆಕಂಡಿದೆ.

ಇದನ್ನೂ ಓದಿ : ಎನ್‌ಟಿಆರ್‌ ಕುಟುಂಬಕ್ಕೆ ಮತ್ತೊಂದು ಆಘಾತ : ನಂದಮೂರಿ ರಾಮಕೃಷ್ಣ ಕಾರು ಅಪಘಾತ

ಇದನ್ನೂ ಓದಿ : ಈ ನಟನ ಜೊತೆ ಇನ್ಮುಂದೆ ನಟಿಸಲಾರೆ ಎಂದ ನಯನತಾರಾ

ಇದನ್ನೂ ಓದಿ : Urvashi Rautela : ಕಾಂತಾರ 2 ಸಿನಿಮಾದಲ್ಲಿ ಐರಾವತ ನಟಿ : ವೈರಲ್ ಆಯ್ತು ರಿಷಬ್ ಜೊತೆಗಿನ ಪೋಟೋ

ಇನ್ನು ರಶ್ಮಿಕಾ ಮಂದಣ್ಣ ಇದೇ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿರಂಗದ ಹಾಡುಗಳ ಬಗ್ಗೆ ಕೇವಲವಾಗಿ ಮಾತನಾಡಿ ಸೌತ್ ಸಿನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಹಾಗೂ ಕನ್ನಡಿಗರಿಗೆ ಹಿಂದಿನಿಂದಲೂ ರಶ್ಮಿಕಾ ಮಂದಣ್ಣ ಎಂದರೆ ಇಷ್ಟವಿಲ್ಲ ಎಂಬುದು ತಿಳಿದಿರುವುದೇ. ಈ ಎಲ್ಲಾ ವೈರತ್ವದಿಂದ ರಶ್ಮಿಕಾ ಮಂದಣ್ಣ ಫೇಮ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದೂ ಸಹ ಮಾತುಗಳು ಕೇಳಿಬರುತ್ತಿದೆ. ಆದರೂ ನ್ಯಾಷನಲ್‌ ಕ್ರಶ್‌ ಎನಿಸಿಕೊಂಡ ರಶ್ಮಿಕಾ ಮಂದಣ್ಣ ಅವರಿಗೆ ಅವರದೇ ಆದ ಫ್ಯಾನ್ಸ್‌ ಇರುವುದರಿಂದ ಅವರ ಕ್ರೇಜ್‌ ಇನ್ನು ಕಡಿಮೆ ಆಗಿರುವುದಿಲ್ಲ. ಇನ್ನು “ಪುಷ್ಪ 2” ಸಿನಿಮಾದಲ್ಲಿ ನಟಿ ರಶ್ಮಿಕಾ ನಟನೆಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Do you know the reason why actress Rashmika Mandanna’s role is not preferred in Pushpa 2 movie?

Comments are closed.