ಮಂಗಳವಾರ, ಏಪ್ರಿಲ್ 29, 2025
HomeWorldಈ ದೇಶದಲ್ಲಿ ಚಿನ್ನಕ್ಕಿಂತ ದುಬಾರಿ ಕಾಂಡೋಮ್ : ಕಾರಣವೇನು ಇಲ್ಲಿದೆ ಡಿಟೇಲ್ಸ್ !

ಈ ದೇಶದಲ್ಲಿ ಚಿನ್ನಕ್ಕಿಂತ ದುಬಾರಿ ಕಾಂಡೋಮ್ : ಕಾರಣವೇನು ಇಲ್ಲಿದೆ ಡಿಟೇಲ್ಸ್ !

- Advertisement -

ನವದೆಹಲಿ : ಭಾರತ ಸೇರಿದಂತೆ ವಿಶ್ವದ ಹಲವು ದೇಶದಲ್ಲಿಕಾಂಡೋಮ್ ಒಂದು ಸಾಮಾನ್ಯ ದರಕ್ಕೆ ಮಾರಾಟವಾಗ್ತಿದೆ. ಅಷ್ಟೇ ಅಲ್ಲ ಎಷ್ಟೋ ಸಾಂಕ್ರಾಮಿಕ ರೋಗಗಳ ತಡೆಗೆ ಹಲವು ಸಂದರ್ಭದಲ್ಲಿ ಉಚಿತವಾಗಿ ಕೂಡ ಕಾಂಡೋಮ್ ವಿತರಿಸಲಾಗುತ್ತದೆ. ಆದರೆ ಇದೊಂದು ದೇಶದಲ್ಲಿ ಒಂದು ಕಾಂಡೋಮ್ ಬೆಲೆ ಚಿನ್ನದ ಬೆಲೆಗಿಂತ ಜಾಸ್ತಿ ಇದೆ. ವಿಚಿತ್ರವಾದರೂ ಇದು ಸತ್ಯ. ಆ ದೇಶದಲ್ಲಿ ಒಂದು ಕಾಂಡೋಮ್ ಖರೀದಿಸೋ ಬೆಲೆಗೆ ಇಲ್ಲಿ 10 ಗ್ರಾಂ ಚಿನ್ನ ಖರೀದಿಸಬಹುದು. ಅದ್ಯಾವ ರಾಷ್ಟ್ರದಲ್ಲಿ ಕಾಂಡೋಮ್ ಬೆಲೆ ಇಷ್ಟು ಜಾಸ್ತಿ (Condoms are more expensive) ಅನ್ನೋ ಕುತೂಹಲ ನಿಮಗಿದ್ಯಾ ಈ ಸ್ಟೋರಿ ಓದಿ.

ಕಾಂಡೋಮ್ ಒಂದು ತುರ್ತು ಜನಸಂಖ್ಯಾ ನಿಯಂತ್ರಕ ಅನ್ನೋದು ಎಲ್ಲರಿಗೂ ಗೊತ್ತು. ಭಾರತದಂತಹ ದೇಶದಲ್ಲಿ ಇಂದಿಗೂ ಕಾಂಡೋಮ್ ಬಳಕೆಯು ಮುಜುಗರದ ಚೌಕಟ್ಟು ದಾಟಿದಂತಿಲ್ಲ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇವುಗಳ ಬಳಕೆ ಕಾಮನ್. ಹೀಗಾಗಿ ದರವೂ ಸಾಮಾನ್ಯ ಮಟ್ಟದಲ್ಲೇ ಇದೆ. ಆದರೆ ಪ್ರಸ್ತುತ ವೆನೆಜುವೆಲಾದಲ್ಲಿ ಮಾತ್ರ ಒಂದು ಪ್ಯಾಕ್ ಕಾಂಡೋಮ್ ದರ ಬರೋಬ್ಬರಿ 60 ಸಾವಿರ ರೂಪಾಯಿ ಮೀರಿದೆ.

ವೆನೆಜುವೆಲಾ (venezuela) ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇಲ್ಲಿನ ಆರ್ಥಿಕತೆ ಕುಸಿದಿದ್ದು ಅಲ್ಲಿನ ರಾಜಕೀಯ ಮೇಲಾಟದಿಂದ ಹಣದುಬ್ಬರವೂ ಏರಿದೆ. ಇದರಿಂದ ಅಲ್ಲಿ ಪ್ರಸ್ತುತ ಒಂದು ಪ್ಯಾಕೇಟ್ ಕಾಂಡೋಮ್ ದರ. 60 ಸಾವಿರ ರೂಪಾಯಿ ಮೀರಿದೆ. ಕೇವಲ ಕಾಂಡೋಮ್ ಮಾತ್ರವಲ್ಲ ವೆನಿಜುವೆಲಾದಲ್ಲಿ ಸದ್ಯ ಆಹಾರ ಉತ್ಪನ್ನದ ದರವೂ ಏರಿಕೆ ಕಂಡಿದ್ದು, ಜನಸಾಮಾನ್ಯರು ಆಹಾರ ಪದಾರ್ಥವನ್ನು ಖರೀದಿಸಲಾಗದೇ ಪರದಾಟ ನಡೆಸಿದ್ದಾರೆ.

ವೆನೆಜುವೆಲಾದಂತಹ ಪುಟ್ಟ ರಾಷ್ಟ್ರದಿಂದ ಈಗಾಗಲೇ 60 ಲಕ್ಷಕ್ಕೂ ಅಧಿಕ ಜನರು ಬೇರೆ ರಾಷ್ಟ್ರಗಳಿಗೆ ಉದ್ಯೋಗ, ಆಹಾರ ಅರಸಿ ವಲಸೆ ಹೋಗಿದ್ದಾರೆ. 1970 ರ ದಶಕದಲ್ಲಿ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ವೆನೆಜುವೆಲಾ ಈಗ ಈ ದಟ್ಟ ದರಿದ್ರ ಸ್ಥಿತಿಯನ್ನು ತಲುಪೋದಿಕ್ಕೆ ದೇಶದ ಆರ್ಥಿಕ ನೀತಿಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ವೆನೆಝುವೆಲಾ ವಿಶ್ವದ ಅತ್ಯಂತ ಸುಂದರ ಹಾಗೂ ರಮಣೀಯವಾದ ಪ್ರವಾಸಿ ತಾಣಗಳನ್ನು ಹೊಂದಿದ್ದು ಜನರನ್ನು ತನ್ನತ್ತ ಸೆಳೆದು ಮನೋರಂಜನೆ ನೀಡುತ್ತಿತ್ತು. ಆದರೆ ಈಗ ರಾಜಕೀಯ ದಂಗೆ‌ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಹೀಗಾಗಿ ಅಲ್ಲಿಯ ಜನರು ಊಟ, ತಿಂಡಿ ಹಾಗೂ ದಿನಬಳಕೆ ವಸ್ತುಗಳಿಗಾಗಿಯೂ ದುಬಾರಿ ಬೆಲೆ ತೆರುವ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ : Hardik Pandya Captain : ಕೊಹ್ಲಿ, ರಾಹುಲ್‌, ರೋಹಿತ್‌ ಶರ್ಮಾಗೆ ಕೋಕ್‌ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾ ನಾಯಕ

ಇದನ್ನೂ ಓದಿ : Shilpa Halli Mane Rooties : ಈ ಹೆಣ್ಣು ಅಬಲೆಯಲ್ಲ ಸಬಲೆ

Condoms are more expensive than gold in venezuela country Here Is the Reason

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular