ಕೊರೊನಾ ಹುಟ್ಟಿದ್ದು ಚೀನಾದಲ್ಲಲ್ಲ, ಭಾರತದಲ್ಲಿ !!! ಚೀನಾ ಕೊಟ್ಟ ಶಾಕಿಂಗ್ ಕಾರಣ ಏನು ಗೊತ್ತಾ ??

ಬೀಜಿಂಗ್ : ವಿಶ್ವವನ್ನೇ ನಡುಗಿಸಿರುವ ಮಹಾಮಾರಿ ಕೊರೊನಾ ಹುಟ್ಟಿನ ಬಗ್ಗೆಯೇ ಜಗತ್ತಿನಾದ್ಯಂತ ಚರ್ಚೆಗಳು ನಡೆಯುತ್ತಿವೆ. ಅಮೇರಿಕಾ, ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳೇ ಕೊರೊನಾವನ್ನು ಚೀನಾ ವೈರಸ್ ಅಂತಾನೂ ಕರೆಯುತ್ತಿದ್ದಾರೆ. ಆದರೆ ಚೀನಾ ಮಾತ್ರ ಕೊರೊನಾ ಹುಟ್ಟಿದ್ದು ನಮ್ಮಲ್ಲಲ್ಲ, ಬದಲಾಗಿ ಭಾರತದಲ್ಲಿ ಅಂತಾ ಹೇಳಿದೆ.

ಚೀನಾದ ವುಹಾನ್ ನಗರದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದ ಕೊರೊನಾ ವೈರಸ್ ಅನ್ನೋ ಹೆಮ್ಮಾರಿ ಸ್ವಲ್ಪ ಸಮಯದಲ್ಲಿಯೇ ವಿಶ್ವದಾದ್ಯಂತ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತ್ತು. ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆಯುವ ಮೂಲಕ ಕೊರೊನಾ ವಿಶ್ವದ ಮುಂದುವರಿದ ರಾಷ್ಟ್ರಗಳಿಗೆ ಸವಾಲೊಡ್ಡಿತ್ತು.

ಕೊರೊನಾ ವೈರಸ್ ಇದೊಂದು ಚೀನಾದ ಜೈವಿಕ ಅಸ್ತ್ರ ಅಂತಾನೂ ಹೇಳಲಾಗುತ್ತಿತ್ತು. ಅಲ್ಲದೇ ಚೀನಾ ಸೃಷ್ಟಿಸಿದ ವೈರಸ್ ಅಂತಾ ಅಮೇರಿಕಾ ನೇರ ಆರೋಪ ಮಾಡಿತ್ತು. ಆದರೆ ಚೀನಾ ಈ ಹಿಂದೆ ಕೊರೊನಾ ಹುಟ್ಟಿಗೆ ಅಮೇರಿಕಾ ಕಾರಣವೆಂದಿತ್ತು. ಆದ್ರೀಗ ಕೊರೊನಾ ಹುಟ್ಟಿದ್ದು ಭಾರತದಲ್ಲಿ ಅನ್ನೋ ಮೂಲಕ ಹೊಸ ಕ್ಯಾತೆ ತೆಗೆದಿದೆ.

ಚೀನಾದ ಸಂಶೋಧಕರು ಕೊರೊನಾ ವೈರಸ್  ಹುಟ್ಟಿಗೆ ಭಾರತ ಕಾರಣ ಅನ್ನೋ ಕುರಿತು ಹೊಸ ವಾದವನ್ನು ಮಂಡಿಸಿದ್ದಾರೆ. ಚೀನಾದ ಗಡಿಯಿಂದಾಚೆಗೆ ಸೋಂಕು ಹುಟ್ಟಿ ಚೀನಾಕ್ಕೆ ಬಂದಿದೆ ಅಂತಿದ್ದಾರೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ಕೊರೊನಾ ವೈರಸ್ ಭಾರತದಲ್ಲಿ ಹುಟ್ಟಿದೆ.

ಕಲುಷಿತ ನೀರಿನ ಮೂಲಕ ಸೃಷ್ಟಿಯಾದ ಈ ಹೆಮ್ಮಾರಿ ವೈರಸ್ ಪ್ರಾಣಿಗಳಿಂದ ಮಾನವನಿಗೆ ಹರಡಿದೆ.  ನಂತರದಲ್ಲಿ ವುಹಾನ್ ಪ್ರಾಂತ್ಯದ ವ್ಯಕ್ತಿಯೋರ್ವ ಪ್ರಯಾಣದ ಮೂಲಕ ವೈರಸ್ ಚೀನಾಕ್ಕೆ ಬಂದಿದೆ. ಇದನ್ನು ಮೊದಲಿಗೆ ಪತ್ತೆ ಹಚ್ಚಲಾಗಿದೆ ಅಂತಾ ಹೇಳುತ್ತಿದ್ದಾರೆ.

ಚೀನಾ ಸಂಶೋಧಕರ ವಾದವನ್ನ ಸ್ಕಾಟ್ಲೆಂಡ್ನ ಗ್ಲಾಸ್ಗೋ ಯೂನಿವರ್ಸಿಟಿಯ ಪರಿಣಿತ ಸಂಶೋಧಕ ಡೇವಿಡ್ ರಾಬರ್ಟ್ಸನ್ ಅಲ್ಲಗೆಳೆದಿದ್ದಾರೆ. ಸಂಶೋಧನೆ ದೋಷಪೂರಿತವಾಗಿದೆ ಎಂದಿರುವ ಡೇವಿಡ್, ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ಚೀನಾ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಲಕ್ಷಾಂತರ ಮಂದಿಯ ಮಾರಣ ಹೋಮಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಚೀನಾದಲ್ಲಿಯೇ ಹುಟ್ಟಿದೆ ಅನ್ನೋದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಕೊರೊನಾ ಹೆಸರಲ್ಲಿ ಚೀನಾ ವಿಶ್ವಕ್ಕೆ ಮಾಡಿದ ಮೋಸವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಒಪ್ಪಿಕೊಂಡಿದೆ. ಆದ್ರೀಗ ಚೀನಾ ಮಾತ್ರ ಕೊರೊನಾ ಹುಟ್ಟಿನ ಬಗ್ಗೆಯೇ ತಗಾದೆ ತೆಗೆದಿದೆ.   

Comments are closed.