ಚಿರು ನೆನಪು ಚಿರಕಾಲ….! ಮೇಘನಾ ನೆನಪಲ್ಲಿ ಪತಿ ಎಂದಿಗೂ ಅಮರ….!!

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಹಾಗೂ ನಟಿ ಮೇಘನಾ ರಾಜ್ ಪ್ರೀತಿಯ ಪತಿ ಚಿರು ಇನ್ನಿಲ್ಲವಾಗಿದ್ದಾರೆ. ಈ ಅಕಾಲಿಕ ಸಾವು ಮೇಘನಾರನ್ನು ಸದಾ ಕಾಡುತ್ತಲೇ ಇದೆ. ಹೀಗಾಗಿ ಮೇಘನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಿರು ನೆನಪು ಚಿರಕಾಲ ಎಂಬಂತೆ ನೆನಪುಗಳನ್ನು ಶೇರ್ ಮಾಡುತ್ತಲೇ ಇದ್ದಾರೆ.

ಚಿರು ನಿಧನದ ಒಂದಿಷ್ಟು ದಿನಗಳ ಬಳಿಕ ಇನ್ ಸ್ಟಾ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾ ಫ್ಯಾಟ್ಫಾರ್ಂಗೆ ಮರಳಿದ ಮೇಘನಾ ರಾಜ್ ಪತಿ ಗಾಗಿ ಭಾವುಕ ಪತ್ರವೊಂದನ್ನು ಬರೆದಿದ್ದರು. ಅದಾದ ಮೇಲೂ ಸದಾ ಒಂದಿಲ್ಲೊಂದು ಪತಿಯ ನೆನಪಿನ ಪೋಟೋಗಳನ್ನು ಹಂಚಿಕೊಳ್ಳುತ್ತ ತಮ್ಮ ಬೇಸರ ಮರೆಯುವ ಸರ್ಕಸ್ ನಡೆಸಿದ್ದರು. ಚಿರು ಅಭಿನಯದ ಕೊನೆ ಚಿತ್ ಶಿವಾರ್ಜುನ್ ರೀ ರಿಲೀಸ್ ವೇಳೆಯಲ್ಲೂ ಪತಿಯನ್ನು ನೆನಪಿಸಿಕೊಂಡ ಮೇಘನಾ ಚಿತ್ರತಂಡಕ್ಕೆ ಶುಭಹಾರೈಸಿದ್ಧರು.

ಇದೀಗ ನವೆಂಬರ್ 26 ರಂದು ಮೇಘನಾ ತಮ್ಮ ಹಾಗೂ ಚಿರುವಿನ ಒಂದು ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಸಖತ್ತಾಗಿ ಅಲಂಕರಿಸಿಕೊಂಡು ರೆಡಿ ಆಗಿರೋ ಈ ಪೋಟೋ ಚಿರು ತಮ್ಮ ಧ್ರುವ್ ಸರ್ಜಾ ಮದುವೆಯಲ್ಲಿ ತೆಗೆದಿದ್ದು.

ಈ ಪೋಟೋದ ಜೊತೆ ಹಿನ್ನೆಲೆಯಲ್ಲಿ ಪ್ರಭಾಸ್ ಅಭಿನಯದ ಡಾರ್ಲಿಂಗ್ ಸಿನಿಮಾದ ಗೀತೆಯೊಂದು ಹಿನ್ನೆಲೆಯಲ್ಲಿ ಮೊಳಗುತ್ತಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಧ್ರುವ್ ಸರ್ಜಾ ಹಾಗೂ ಪ್ರೇರಣಾ ಮದುವೆಯಲ್ಲಿ ಚಿರು ಹಾಗೂ ಮೇಘನಾ ಜೋಡಿಹಕ್ಕಿಗಳಂತೆ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದರು.

ಅಷ್ಟೇ ಅಲ್ಲ ಇಬ್ಬರೂ ವಧು-ವರರಂತೆ ಅಲಂಕರಿಸಿಕೊಂಡು ಅತಿಥಿಗಳನ್ನು ಅಟೆಂಡ್ ಮಾಡುತ್ತ ಅಕ್ಷರಷಃ ಸಂಭ್ರಮದಲ್ಲಿ ಮುಳುಗಿ ಹೋಗಿದ್ದರು. ಆದರೇ ಧ್ರುವ್ ಸರ್ಜಾ ಹಾಗೂ ಪ್ರೇರಣಾ ಮೊದಲ ಆನ್ಯಿವರ್ಸರಿ ಹೊತ್ತಿಗೆ ಚಿರು ಮೇಘನಾರನ್ನು ಅಗಲಿದ್ದಾರೆ.

ಚಿರುವನ್ನು ಜ್ಯೂನಿಯರ್ ಚಿರುವಿನಲ್ಲೇ ಕಾಣ್ತಿರೋ ಮೇಘನಾ ಈಗ ತಮ್ಮ ಎಲ್ಲ ನೆನಪುಗಳನ್ನು ಮತ್ತೆ ಮತ್ತೆ ರೀ ಕಾಲ್ ಮಾಡಿಕೊಳ್ಳು ತ್ತಿದ್ದು, ಪತಿಯ ನೆನಪುಗಳ ಜೊತೆಗೆ ಬದುಕಿನ ಬಂಡಿ ಸಾಗಿಸುತ್ತ ಮಗನ ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ.

Comments are closed.