ಸೋಮವಾರ, ಏಪ್ರಿಲ್ 28, 2025
HomeBreakingಭಾರತದ ವಿಮಾನಗಳಿಗೆ ನೋ ಎಂಟ್ರಿ...! ನಿರ್ಬಂಧ ಹೇರಿದ ಕೆನಡಾ ಸರ್ಕಾರ...!!

ಭಾರತದ ವಿಮಾನಗಳಿಗೆ ನೋ ಎಂಟ್ರಿ…! ನಿರ್ಬಂಧ ಹೇರಿದ ಕೆನಡಾ ಸರ್ಕಾರ…!!

- Advertisement -

ಕೆನಡಾ : ಅಮೇರಿಕಾ ತನ್ನ ನಾಗರೀಕರಿಗೆ ಭಾರತ ಪ್ರವಾಸ ಮುಂದೂಡುವಂತೆ ಸೂಚಿಸಿದ ಬೆನ್ನಲ್ಲೇ ಇದೀಗ ಕೆನಡಾ ಭಾರತ ಮತ್ತು ಪಾಕ್ ವಿಮಾನದ ಮೇಲೆ ನಿರ್ಬಂಧ ಹೇರಿದೆ.

ಭಾರತ ಹಾಗೂ ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿನ ಪ್ರಮಾಣ ವಿಪರೀತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನಗಳನ್ನು ನಿಷೇಧಿಸಿ ಕೆನಡಾ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೇ ಒಂದೇ ದಿನ ಭಾರತದಲ್ಲಿ 3.14 ಲಕ್ಷ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದು ವಿಶ್ವದಲ್ಲೇ ಒಂದು ದಿನದ ಹೈಯೆಸ್ಟ್ ಪ್ರಕರಣವಾಗಿದೆ. ಹೀಗಾಗಿ ವಿಶ್ವ ಮಟ್ಟದಲ್ಲಿ ಭಾರತದ ವಿಮಾನಗಳಿಗೆ ತಡೆ ಹೇರಲಾಗುತ್ತಿದೆ.

ಕೆನಡಾದ ವಿಮಾನಯಾನ ಸಚಿವ ಓಮರ್ ಅಲ್ಘಾಬ್ರಾ ಈ ಬಗ್ಗೆ ವಿವರಣೆ ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಭಾರತ ಹಾಗೂ ಪಾಕ್ ನ ವಿಮಾನಗಳಿಗೆ 30 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ.

ಆದರೆ ಈ ನಿರ್ಬಂಧ ಕೇವಲ ಪ್ರಯಾಣಿಕರಿಗೆ ಮಾತ್ರವಾಗಿದ್ದು, ಸರಕು ವಿಮಾನಗಳಿಗೆ ಅನ್ವಯವಾಗುತ್ತಿಲ್ಲ. ಲಸಿಕೆ, ಪಿಪಿಇ ಕಿಟ್ ಹಾಗೂ ಅಗತ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆ ಯಾಗಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಎರಡನೇ ಅಲೆ ಭಾರತದಲ್ಲಿ ಆತಂಕವನ್ನೇ ಸೃಷ್ಟಿಸಿದ್ದು, ಏರುತ್ತಲೇ ಇರುವ ಸೋಂಕಿತರ ಸಂಖ್ಯೆ ಆತಂಕ ಹೆಚ್ಚಿಸಿದೆ.

RELATED ARTICLES

Most Popular