ಅಗಲಿದ ತಾಯಿಗೆ ಭಾವುಕ‌ಪತ್ರ….! ವಿಜಯ ಲಕ್ಷ್ಮೀಸಿಂಗ್ ಬರೆದಿದ್ದೇನು ಗೊತ್ತಾ…?!

ಕನ್ನಡ ಚಲನಚಿತ್ರ‌ರಂಗದ ಹಿರಿಯ ನಟಿ ಪ್ರತಿಮಾದೇವಿ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 88 ವರ್ಷಗಳ ತುಂಬು ಜೀವನ ನಡೆಸಿದ ಪ್ರತಿಮಾ ದೇವಿ ನಿಧನಕ್ಕೆ ಪುತ್ರಿ ವಿಜಯಲಕ್ಷ್ಮೀ ಸಿಂಗ್ ಭಾವುಕ ಸಾಲುಗಳ ವಿದಾಯ ಪತ್ರ ಬರೆದಿದ್ದಾರೆ.

88 ವರ್ಷಗಳ ಕಾಲ ಬದುಕಿದ್ದು ತಮ್ಮನ್ನು ಅಗಲಿ ಹೋದ ತಾಯಿ ಯನ್ನು ನೆನಪಿಸಿಕೊಂಡು ಸುಧೀರ್ಘ ಪತ್ರ ಬರೆದಿರುವ ವಿಜಯಲಕ್ಷ್ಮಿ ಸಿಂಗ್ ಎಲ್ಲವನ್ನು ಕಲಿಸಿದ ನೀನು ನಿನ್ನನ್ನು ಬಿಟ್ಟು ಬದುಕುವುದನ್ನು ಯಾಕೆ ಕಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅತ್ಯಂತ ಸಹಜವಾದ ಯಾತನೆಯಿಲ್ಲದ ಸಾವು ಪಡೆದುಕೊಂಡ ಪ್ರತಿಮಾದೇವಿಯವರ ಸಾವು ಹೇಗಿತ್ತು ಎಂಬುದನ್ನು ವಿಜಯಲಕ್ಷ್ಮೀ ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಮುಂಜಾನೆ ಕಾಫಿ ಸವಿಯುತ್ತ ಮೊಮ್ಮಕ್ಕಳೊಂದಿಗೆ ನಿನ್ನ ಬರ್ತಡೇ ಪಾರ್ಟಿಯ ಮೆನು ಡಿಸೈಡ್ ಮಾಡಿದ್ದು ಕಣ್ಣಿಗೆ ಕಟ್ಟಿದಂತಿದೆ. ಬಳಿಕ ಸ್ನಾನ ಮಾಡಿ ಪೂಜೆ ಮಾಡಿ ಮಂತ್ರ ‌ಜಪಿಸಿದೆ. ಅಡುಗೆ ಮಾಡಿದೆ. ಒಗ್ಗರಣೆ ಹಾಕುತ್ತ ಹರಿಣಿ ಆಂಟಿಗೆ ಪೋನ್ ಮಾಡುವ ಎಂದೇ, ಅದಕ್ಕೆ ನಾನು ಸಂಜೆ ಟೀ ಕುಡಿಯುವ ವೇಳೆಗೆ ಮಾಡೋಣ ಎಂದೆ. ಅದಕ್ಕೆ ನೀನು ಒಪ್ಪಿದೆ. ಆದರೇ ಅದೇ ನನ್ನ ನಿನ್ನ ಕೊನೆಯ ಮಾತುಕತೆ ಎಂಬ ಕಲ್ಪನೆ ಇರಲಿಲ್ಲ.

ನಾನು‌ಕೆಲಸ ಮುಗಿಸಿ ಬರುವಾಗ ನೀನು ಹಾಲಿನಲ್ಲಿ ಮಲಗಿದ್ದೆ. ಆದರೆ ನೀನು ಅವಾಗಲೇ ನಿನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದೆ ಎನ್ನಿಸು ತ್ತದೆ ಎಂದು ಬರೆದಿದ್ದು ಓದಿದವರ ಕಣ್ಣಲ್ಲಿ ನೀರು ತರಿಸುವಂತಿದೆ. ನಿನ್ನಷ್ಟು ಡಿಸಿಪ್ಲಿನ್ ಉತ್ಸಾಹ ನನ್ನಲ್ಲಿಲ್ಲ. ಆದರೆ ಇನ್ಮುಂದೆ ಕಲಿಯು ತ್ತೀನಿ. ನಿನ್ನನ್ನು ನನ್ನಲ್ಲಿ ಕಾಣುವಂತೆ ಮಾಡ್ತಿನಿ. ಓಂಶಾಂತಿ ಪ್ರತಿಮಾ ದೇವಿ ಶಂಕರ್ ಸಿಂಗ್ 9-4-1933 ರಿಂದ 6-4-2021 ಎಂದು ಬರೆದಿದ್ದಾರೆ.

https://www.instagram.com/p/CN6trEvg5TI/?igshid=1itqewuks375l

ಒಟ್ಟಿನಲ್ಲಿ ವಿಜಯಲಕ್ಷ್ಮಿ ಸಿಂಗ್ ತಾಯಿಗೆ ಕೋರಿದ ವಿದಾಯ ಪತ್ರ ಹೃದಯಮಿಡಿಯುವಂತಿದ್ದು, ಅಗಲಿದ ತಾಯಿಯನ್ನು ನೆನಪಿಸಿ ಕೊಳ್ಳುವ ಮಗಳ ತಲ್ಲಣ ಕಾಪಿಡುವಂತಿದೆ.

Comments are closed.