ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಕೋವಿಡ್ ಡೆಲ್ಟಾ ಪ್ರಕರಣ ಹೆಚ್ಚಳವಾಗಿದೆ. ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿಆಗಸ್ಟ್ 28 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ರಾಜ್ಯ ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ಹೇಳಿದ್ದಾರೆ.
ಆರಂಭದಲ್ಲಿ ಸಿಡ್ನಿಯಲ್ಲಿ 12 ಹೊಸ ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್ 26 ರಂದು ಹಲವು ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ ನಂತರ ದಲ್ಲಿ ಕೊರೊನಾ ರುಪಾಂತರಿ ಡೆಲ್ಟಾ ಅಬ್ಬರ ಜೋರಾಗಿದೆ. ಅಲ್ಲದೇ ಇಂದು 177 ಹೊಸ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲೀಗ ಒಂದು ತಿಂಗಳ ಕಾಲ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ದಿನೇ ದಿನೇ ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕು ಆರ್ಭಟಿಸಿದ್ದು, ಇದೀಗ ಡೆಲ್ಟಾ ಆರ್ಭಟ ಶುರುವಾಗಿದೆ. ಡೆಲ್ಟಾ ಪತ್ತೆಯಾಗುತ್ತಲೇ ಆಸ್ಟ್ರೇಲಿಯಾ ಎಚ್ಚೆತ್ತುಕೊಂಡಿದೆ. ಸದ್ಯ ನಾಲ್ಕು ವಾರಗಳ ಕಾಲ ನಿರ್ಬಂಧ ಹೇರಿಕೆ ಮಾಡಲಾಗಿದ್ದು, ಲಾಕ್ ಡೌನ್ ಇನ್ನಷ್ಟು ದಿನಗಳ ಕಾಲ ಮುಂದುವರಿಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.