ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ಧ್ವಂಸಗೊಂಡ ಮನೆಗಳ ನಡುವೆ ನಾಯಿ ತನ್ನ ಕುಟುಂಬವನ್ನು ಹುಡುಕುತ್ತಿರುವ ಫೋಟೋ ಟ್ವಿಟ್ಟರಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಇದನ್ನು ಸಮಿರಾ ಎಸ್‌ಆರ್ ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಪ್ರಾಣಿ ಪ್ರಿಯರು ಸಾಕಷ್ಟು ಅಭಿಪ್ರಾಯವನ್ನು ಟ್ವಿಟ್ಟರಲ್ಲಿ ಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಈ ನಾಯಿಗೆ ಸಂಬಂಧಪಟ್ಟ ಮಾಲೀಕರು ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ.ಇನ್ನು ನಾಯಿಯನ್ನು ಕಂಡ ಜನರು ಸದ್ಯ ಈಗ ಅವ್ರೆ ಆರೈಕೆ ಮಾಡುತ್ತಿದ್ದಾರೆ. ಸ್ವಲ್ಪ ದಿನಗಳ ನಂತರ ಮತ್ತೆ ನಾಯಿ ಇದ್ದ ಜಾಗಕ್ಕೆ ಕರೆದೊಯ್ದಾಗ, ಮನೆಯವರನ್ನು ಹುಡುಕುತ್ತಾ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ನಾಯಿಗೆ ಮಾಲಿಕರ ಮೇಲೆ ಇರುವ ಪ್ರೀತಿಯನ್ನು (Dog Searches for family) ಕಂಡು ಟ್ವಿಟ್ಟರಲ್ಲಿ ಟ್ವೀಟ್ ಮಾಡಿದ್ದಾರೆ.
ಪೋಸ್ಟ್ ಪ್ರಕಾರ, ಅಫ್ಘಾನಿಸ್ತಾನದ ಗಯಾನ್, ಪಕ್ಟಿಕಾದ ಓಚ್ಕಿ ಗ್ರಾಮದಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ತನ್ನ ಮಾಲೀಕರಿಗಾಗಿ ಹತಾಶವಾಗಿ ಹುಡುಕುತ್ತಿರುವ ಹೃದಯ ವಿದ್ರಾವಕ ಚಿತ್ರದಿಂದ ಟ್ವಿಟರ್ ಬಳಕೆದಾರರು ಕಣ್ಣೀರು ಹಾಕಿದ್ದಾರೆ. ಹಾಗೂ ಈ ಸುದ್ದಿಯನ್ನು ನೋಡಿದ ಅನೇಕ ಮಂದಿ, ನಾಯಿಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
Every person in the house this dog belongs to was killed in the earthquake. Neighbours said they took him with them to feed/take care of. He keeps coming back to the destroyed house and wails.
— Samira SR (@SSamiraSR) June 26, 2022
Ochki village in Gayan, Paktika.#AfghanistanEarthquake #Afghanistan pic.twitter.com/A7oCoGIn2V
ಬಿಬಿಸಿ ಪ್ರಕಾರ, ಜನರು ಮಲಗಿದ್ದಾಗ ಖೋಸ್ಟ್ ನಗರದಿಂದ ಸರಿಸುಮಾರು 44 ಕಿಲೋಮೀಟರ್ ದೂರದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ . ಟ್ವಿಟ್ಟರಲ್ಲಿ ಈ ಪೋಸ್ಟನ್ನು ನೋಡಿ ಬಹಳಷ್ಟು ಮಂದಿ, ನಾಯಿಗೆ ಇರುವ ಪ್ರೀತಿ ಮನುಷ್ಯಗೆ ಇಲ್ಲ ಎಂದು ಹೇಳಿದ್ರು. ಅಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ ಬುಧವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಇದೇ ಕಂಪನ ಭಾರತ ಹಾಗೂ ಪಾಕಿಸ್ತಾನದಲ್ಲಿ ಅನುಭವವಾಗಿದೆ. ತೀವ್ರ 6.1 ಭೂಕಂಪನಿಂದ ಹತ್ತಾರು ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರ ಮನೆ ನಾಶವಾಗಿದೆ.
ಇದನ್ನೂ ಓದಿ : Uddhav Thackeray resigned : ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
ಇದನ್ನೂ ಓದಿ : Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್ ಭಾಗ್ಯ
ಇದನ್ನು ಓದಿ : Afghanistan earthquake : ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255ಕ್ಕೂ ಅಧಿಕ ಮಂದಿ ಸಾವು
ಇದನ್ನು ಓದಿ :Parvez Musharraf: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಕುರಿತು ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿಗಳು
Dog Searches for family lost in Afghanistan quake