Afghanistan earthquake : ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ : 255ಕ್ಕೂ ಅಧಿಕ ಮಂದಿ ಸಾವು

ಅಫ್ಘಾನಿಸ್ತಾನ / ಪಾಕಿಸ್ತಾನ : Afghanistan earthquake : ಅಫ್ಘಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು ನೀಡಿರುವ ವರದಿಯ ಪ್ರಕಾರ ದೇಶದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ 255ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿರುವ ಭೂಕಂಪವು ರಿಕ್ಟರ್​ ಮಾಪಕದಲ್ಲಿ 6ರಷ್ಟು ತೀವ್ರತೆಯನ್ನು ತೋರಿಸಿದೆ. ಕಳೆದ ವರ್ಷ ಅಫ್ಘಾನಿಸ್ತಾನವನ್ನು ತಾಲಿಬಾನ್​ ಸ್ವಾಧೀನಪಡಿಸಿಕೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಸಾಕಷ್ಟು ವಿದೇಶಿಗರು ತಾಯ್ನಾಡಿಗೆ ಮರಳಿದ ಬಳಿಕ ನಡೆದ ಅತ್ಯಂತ ದೊಡ್ಡ ಭೂಕಂಪ ಇದಾಗಿದೆ. ಈ ಭೂಕಂಪದಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್​ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್​ ನಾಸಿಮ್​ ಹಕ್ಕಾನಿ ಮಾಹಿತಿ ನೀಡಿದ್ದಾರೆ.

ಅಮೆರಿಕದಿಂದ ಮಿಲಿಟರಿ ಸವಲತ್ತುಗಳನ್ನು ಹಿಂಪಡೆದ ಬಳಿಕ ನಡೆದ ಪ್ರಕೃತಿ ವಿಕೋಪ ಇದಾಗಿದ್ದು ತಾಲಿಬಾನ್​ ಆಡಳಿತದಿಂದಾಗಿ ಅಪ್ಘನ್​ನಲ್ಲಿರುವ 38 ಮಿಲಿಯನ್​ ಜನತೆಗೆ ಇದೀಗ ನೆರೆಯ ರಾಷ್ಟ್ರಗಳಿಂದ ಪರಿಹಾರ ಸಿಗುವುದು ಕೂಡ ಕಷ್ಟ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ಬಖ್ತಾರ್ ಸುದ್ದಿ ಸಂಸ್ಥೆ ಸಾವಿನ ಸಂಖ್ಯೆಯನ್ನು ವರದಿ ಮಾಡಿದೆ ಮತ್ತು ರಕ್ಷಣಾ ಪಡೆಯು ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದೆ ಎಂದು ವರದಿ ಮಾಡಿದೆ. ಸುದ್ದಿ ಸಂಸ್ಥೆಯ ಮಹಾನಿರ್ದೇಶಕ ಅಬ್ದುಲ್ ವಾಹಿದ್ ರಾಯನ್ ಅವರು ಟ್ವಿಟ್ಟರ್‌ನಲ್ಲಿ ಪಕ್ಟಿಕಾದಲ್ಲಿ 90 ಮನೆಗಳು ನಾಶವಾಗಿವೆ ಮತ್ತು ಡಜನ್ಗಟ್ಟಲೆ ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೇವಲ ಅಪ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನದ ಹಲವೆಡೆಗಳಲ್ಲಿಯೂ ತೀವ್ರ ಭೂಕಂಪದ ಅನುಭವವಾಗಿದೆ. ಪಾಕ್​ನ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಇಸ್ಲಾಮಾಬಾದ್​, ಪೇಶಾವರ, ರಾವಲ್ಪಿಂಡಿ, ಮುಲ್ತಾನ್​ ಸೇರಿದಂತೆ ಹಲವಡೆಗೆಳಲ್ಲಿ ಭೂಕಂಪದ ಅನುಭವವಾಗಿದೆ. ಕೆಲವು ಸೆಕೆಂಡುಗಳ ಕಾಲ ಈ ಅನುಭವವಾಗಿದೆ ಎಂದು ಪಾಕ್​ನ ಜನತೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : BCCI warnings : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್‌

ಇದನ್ನೂ ಓದಿ : actor sathish vajra died : ಸ್ಯಾಂಡಲ್​ವುಡ್​ ಯುವ ನಟ ಸತೀಶ್​ ವಜ್ರ ಬರ್ಬರ ಹತ್ಯೆ

Eastern Afghanistan earthquake kills at least 255 people

Comments are closed.