Egyptian church : ಚರ್ಚ್​ನಲ್ಲಿ ಅಗ್ನಿ ಅವಘಡ : 41 ಮಂದಿ ದಾರುಣ ಸಾವು, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದ ಸಚಿವಾಲಯ

ಈಜಿಪ್ಟ್​ : Egyptian church : ಈಜಿಪ್ಟ್​​ನ ಕಾಪ್ಟಿಕ್​ ಕ್ರಿಶ್ಚಿಯನ್​ ಚರ್ಚ್​ವೊಂದರಲ್ಲಿ ಭಾನುವಾರ ವಿದ್ಯುತ್​ ಅವಘಡ ಸಂಭವಿಸಿದ ಪರಿಣಾಮ ಅಗ್ನಿ ಆವರಿಸಿದ್ದು ಪರಿಣಾಮ ಕಾಲ್ತುಳಿತ ಉಂಟಾಗಿದೆ. ಈ ಅವಘಡದಲ್ಲಿ ಕನಿಷ್ಟ 41 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಚರ್ಚ್​ನಲ್ಲಿದ್ದವರಲ್ಲಿ ಹೆಚ್ಚಿನವರು ಮಕ್ಕಳು ಎನ್ನಲಾಗಿದೆ. ಅನೇಕರು ದಟ್ಟವಾದ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.


ಗಿಜಾ ನಗರದ ಅಬುಸಿಫಿನ್​​ ಚರ್ಚ್​ನಲ್ಲಿ ಭಾನುವಾರ ಮುಂಜಾನೆ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಚರ್ಚ್​ನಲ್ಲಿ 1000ಕ್ಕೂ ಅಧಿಕ ಜನರು ಇದ್ದರು ಎನ್ನಲಾಗಿದೆ. ಅಗ್ನಿಯು ಚರ್ಚ್​ನ ಪ್ರವೇಶದ್ವಾರವನ್ನು ನಿರ್ಬಂಧಿಸಿತ್ತು. ಇದರಿಂದಾಗಿ ಅಲ್ಲಿ ಕಾಲ್ತುಳಿಕ ಸಂಭವಿಸಲು ಕಾರಣವಾಯ್ತು. ಎರಡು ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಚರ್ಚ್​ನಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದು ವರದಿಯಾಗಿದೆ.

ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಜನರು ಜಮಾಯಿಸಿದ್ದರು. ಎರಡನೇ ಮಹಡಿಯಿಂದ ಹೊಗೆ ಕಾಣಿಸಿಕೊಳ್ಳಲು ಆರಂಭವಾಯ್ತು. ಜನರು ಮೆಟ್ಟಿಲುಗಳ ಮೂಲಕ ಕೆಳಗೆ ಇಳಿದು ಬರಲು ಧಾವಿಸುತ್ತಿದ್ದ ಸಂದರ್ಭದಲ್ಲಿ ಒಬ್ಬರ ಮೇಲೋಬ್ಬರು ಬೀಳಲು ಆರಂಭಿಸಿದರು. ಇದು ಕಾಲ್ತುಳಿತಕ್ಕೆ ಕಾರಣವಾಯ್ತು. ಕೆಲವೇ ಕ್ಷಣಗಳಲ್ಲಿ ಚರ್ಚ್​ನ ಕಿಟಕಿಗಳಿಂದ ಬೆಂಕಿಯ ಕೆನ್ನಾಲಿಗೆ ಹೊರಗೆ ವ್ಯಾಪಿಸಲು ಆರಂಭವಾಯ್ತು. ನಾನು ಹಾಗೂ ನನ್ನ ಪುತ್ರಿ ಈ ಸಮಯದಲ್ಲಿ ನೆಲಮಹಡಿಯಲ್ಲೇ ಇದ್ದುದರಿಂದ ದುರಂತದಿಂದ ಪಾರಾಗಲು ಸಾಧ್ಯವಾಯ್ತು ಎಂದು ಚರ್ಚ್​ನ ಭಕ್ತರಲ್ಲಿ ಒಬ್ಬರಾದ ಯಾಸಿರ್​ ಮುನೀರ್​ ಹೇಳಿದ್ದಾರೆ.

ಈಜಿಪ್ಟ್​​ನಲ್ಲಿ ಈ ರೀತಿ ವಿದ್ಯುತ್​ ಅವಘಡ ಸಂಭವಿಸುವುದು ಅಪರೂಪವಲ್ಲ. 2020ರ ಅಂತ್ಯದಲ್ಲಿ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲಿಯೂ ಅಗ್ನಿ ಅವಘಡ ಸಂಭವಿಸಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದರು.


ಈ ಘಟನೆ ಸಂಬಂಧ ಈಜಿಪ್ಟ್​ನ ಆಂತರಿಕ ಸಚಿವಾಲಯವು ಈ ವಿಚಾರವಾಗಿ ಅಧಿಕೃತ ಹೇಳಿಕೆ ಪ್ರಕಟಿಸಿದ್ದು ಎರಡನೇ ಮಹಡಿಯಲ್ಲಿ ವಿದ್ಯುತ್​ ಅಸಮರ್ಪಕವಾಗಿ ಹರಿದ ಪರಿಣಾಮವಾಗಿ ಎಸಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿದೆ ಎಂದು ಹೇಳಿದೆ.

ಇದನ್ನು ಓದಿ : Eidgah Maidan Chamrajpet :ವಿವಾದಿತ ಈದ್ಗಾ ಮೈದಾನದಲ್ಲಿ ಕೊನೆಗೂ ತ್ರಿವರ್ಣ ಧ್ವಜದ ಹಾರಾಟ : ಖಾಕಿ ಸರ್ಪಗಾವಲು

ಇದನ್ನೂ ಓದಿ : independence day flag hoisting : ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ₹25 ಲಕ್ಷ ಪರಿಹಾರ : ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

Egyptian church fire kills at least 41, most of them children

Comments are closed.