India Tour of Zimbabwe : ಜಿಂಬಾಬ್ವೆಯಲ್ಲಿ ಅಭ್ಯಾಸ ಆರಂಭಿಸಿದ ಕೆ.ಎಲ್ ರಾಹುಲ್ ಬಳಗ

ಹರಾರೆ: (KL Rahul Team Start Practice) ಆತಿಥೇಯ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನಾಡಲು ಜಿಂಬಾಬ್ವೆ ತಲುಪಿರುವ ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಅಭ್ಯಾಸ ಅರಂಭಿಸಿದೆ. ಟೀಮ್ ಇಂಡಿಯಾ ಅಭ್ಯಾಸದ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಶನಿವಾರ ಮುಂಬೈನಿಂದ ಹೊರಟಿದ್ದ ಕೆ.ಎಲ್ ರಾಹುಲ್ ಭಾನುವಾರ ಬೆಳಗ್ಗಿನ ಜಾವ ಜಿಂಬಾಬ್ವೆ ರಾಜಧಾನಿ ಹರಾರೆ ತಲುಪಿತ್ತು. ನಂತರ ಕೆಲ ಗಂಟೆಗಳ ವಿಶ್ರಾಂತಿಯ ನಂತರ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ (Harare Sports Club) ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದ್ದಾರೆ. ಭಾರತ ತಂಡ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಆಗಸ್ಟ್ 18ರಂದು (ಗುರುವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಎರಡು ಹಾಗೂ ಮೂರನೇ ಪಂದ್ಯ ಕ್ರಮವಾಗಿ ಆಗಸ್ಟ್ 20 ಹಾಗೂ 22 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲೇ ನಡೆಯಲಿವೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ದೀಪಕ್ ಹೂಡ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.

ಭಾರತ Vs ಜಿಂಬಾಬ್ವೆ ಏಕದಿನ ಸರಣಿಯ ವೇಳಾಪಟ್ಟಿ
ಆಗಸ್ಟ್ 18: ಮೊದಲ ಏಕದಿನ ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಆಗಸ್ಟ್ 20: ಎರಡನೇ ಏಕದಿನ ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)
ಆಗಸ್ಟ್ 22: ಮೂರನೇ ಏಕದಿನ ಪಂದ್ಯ (ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ)

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ನಾಯಕ ರಾಹುಲ್ ಅವರಿಗೆ ಟೀಮ್ ಇಂಡಿಯಾ ಕಂಬ್ಯಾಕ್ ಸರಣಿ. ಕಳೆದ ಐಪಿಎಲ್ ನಂತರ ಕೆ.ಎಲ್ ರಾಹುಲ್ (KL Rahul) ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಗಾಯ ಹಾಗೂ ಕೋವಿಡ್-19 ಕಾರಣದಿಂದ ರಾಹುಲ್ ಕಳೆದ ಮೂರು ತಿಂಗಳುಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ, ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ, ಇಂಗ್ಲೆಂಡ್ ವಿರುದ್ಧದ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಲಿರುವ ರಾಹುಲ್, ಬಳಿಕ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಹೆಗಲೇರಿದೆ. ಕಾಯಂ ಕೋಚ್ ರಾಹುಲ್ ದ್ರಾವಿಡ್ (Rahul Dravid) ವಿಶ್ರಾಂತಿ ಬಯಸಿರುವುದರಿಂದ ಜಿಂಬಾಬ್ವೆಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ : Lucky man of India Deepak Hooda: ಈತ ಟೀಮ್ ಇಂಡಿಯಾದ ಲಕ್ಕಿ ಸ್ಟಾರ್.. ಈತ ಆಡಿದಾಗ ತಂಡದ ಸೋತದ್ದೇ ಇಲ್ಲ

ಇದನ್ನೂ ಓದಿ : Cheteshwar Pujara hits 73 ball Century : ಒಂದೇ ಓವರ್‌ನಲ್ಲಿ 22 ರನ್.. 73 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್

India Tour of Zimbabwe KL Rahul Team Start Practice

Comments are closed.