Elon Musk : ಸಾಮಾಜಿಕ ಜಾಲತಾಣದ ದೈತ್ಯ ವೇದಿಕೆ ಟ್ವಿಟರ್ ಖರೀದಿ ಪ್ರಕ್ರಿಯೆಯನ್ನು ನಡೆಸುತ್ತಿರುವ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯ ಮೇಲೆ ವಿಧಿಸಲಾಗಿರುವ ಶಾಶ್ವತ ನಿಷೇಧದಿಂದ ಮುಕ್ತಿ ನೀಡುವುದಾಗಿ ಹೇಳಿದ್ದಾರೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿಗೆ ಆಸಕ್ತಿ ತೋರಿದ ಆರಂಭದ ದಿನಗಳಲ್ಲಿಯೇ ಟ್ವಿಟರ್ ಎಲಾನ್ ಮಸ್ಕ್ ತೆಕ್ಕೆಗೆ ಬಿದ್ದರೆ ಡೊನಾಲ್ಡ್ ಟ್ರಂಪ್ಗೆ ಟ್ವಿಟರ್ ಬ್ಯಾನ್ನಿಂದ ಮುಕ್ತಿ ಸಿಗಬಹುದು ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಅದರಂತೆ ಇದೀಗ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಗೆ ಮರು ಜೀವ ನೀಡುವ ಮಾತುಗಳನ್ನಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ಟ್ವಿಟರ್ ಅನ್ನು $44 ಮಿಲಿಯನ್ (€41 ಮಿಲಿಯನ್) ಗೆ ಖರೀದಿಸಲು ಮುಂದಾಗಿದ್ದಾರೆ, ಆದರೆ ಒಪ್ಪಂದವು ಇನ್ನೂ ಷೇರುದಾರರು ಮತ್ತು ಹಣಕಾಸು ನಿಯಂತ್ರಕರ ಬೆಂಬಲವನ್ನು ಪಡೆಯಬೇಕಾಗಿದೆ.
ಫೈನಾನ್ಶಿಯಲ್ ಟೈಮ್ಸ್ ಆಯೋಜಿಸಿದ್ದ ಫ್ಯೂಚರ್ ಆಫ್ ದಿ ಕಾರ್ ಶೃಂಗಸಭೆಯ ಸಂದರ್ಭದಲ್ಲಿ, ಮಸ್ಕ್ ನಿಷೇಧವನ್ನು “ನೈತಿಕವಾಗಿ ಕೆಟ್ಟ ನಿರ್ಧಾರ” ಮತ್ತು “ತೀವ್ರವಾಗಿ ಮೂರ್ಖತನ” ಎಂದು ಜರಿದಿದ್ದಾರೆ .
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಟ್ವಿಟರ್ ಖಾತೆಯ ಮೇಲೆ ಶಾಶ್ವತ ನಿಷೇಧವನ್ನು ಹೇರಿರುವ ನಿರ್ಧಾರವನ್ನು ನಾನು ತಪ್ಪು ಎಂದು ಭಾವಿಸಿದ್ದೇನೆ. ಡೊನಾಲ್ಡ್ ಟ್ರಂಪ್ ಟ್ವಿಟರ್ನಲ್ಲಿ 80 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಶಾಶ್ವತ ನಿಷೇಧದಿಂದಾಗಿ ದೇಶದ ಬಹುಪಾಲು ಭಾಗವನ್ನು ದೂರವಿಟ್ಟಂತಾಗಿದೆ. ಇದೊಂದು ಚರ್ಚೆ ನಡೆಸುವ ವೇದಿಕೆ.ಹೀಗಾಗಿ ಟ್ರಂಪ್ ಖಾತೆ ಮೇಲಿನ ಶಾಶ್ವತ ನಿರ್ಬಂಧವನ್ನು ನಾನು ಹಿಂಪಡೆಯುತ್ತೇನೆ ಎಂದು ಹೇಳಿದರು.
2021 ರ ಜನವರಿಯಲ್ಲಿ ಅಮೆರಿಕದ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆಯ ನಂತರ ಟ್ವಿಟರ್ನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಶಾಶ್ವತ ನಿರ್ಬಂಧ ಹೇರಲಾಗಿತ್ತು. ಟ್ರಂಪ್ ಬೆಂಬಲಿಗರು 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಪ್ರಮಾಣೀಕರಿಸುವುದನ್ನು ತಡೆಯಲು ಕೊನೆಯ ಪ್ರಯತ್ನ ಎಂಬಂತೆ ಕಟ್ಟಡದ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದ್ದರು.
ಇದನ್ನು ಓದಿ : woman kills 4-year-old girl : ಕಾಲ್ಗೆಜ್ಜೆ ಕದ್ದಳೆಂದು ನೆರೆಮನೆಯ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಪಾಪಿ ಮಹಿಳೆ
ಇದನ್ನೂ ಓದಿ : Gold Silver Prices Today : ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್ : ಚಿನ್ನ, ಬೆಳ್ಳಿ ದರಗಳಲ್ಲಿ ಇಳಿಕೆ
Elon Musk Pledges to Reverse Donald Trump’s Permanent Twitter Ban