Chariot Washes Ashore  : ಅಸಾನಿ ಅಬ್ಬರ : ಸಮುದ್ರದ ಅಲೆಯಲ್ಲಿ ತೇಲಿಬಂತು ಬಂಗಾರ ಬಣ್ಣದ ರಥ

Chariot Washes Ashore  : ಮ್ಯಾನ್ಮಾರ್​, ಮಲೇಷ್ಯಾ ಅಥವಾ ಥಾಯ್ಲೆಂಡ್​ನದ್ದಿರಬಹುದು ಎಂದು ಅಂದಾಜಿಸಲಾದ ಚಿನ್ನದ ಬಣ್ಣದ ರಥವೊಂದು ಆಂಧ್ರ ಪ್ರದೇಶ ಶ್ರೀಕಾಕುಳಂ ಜಿಲ್ಲೆಯ ಸಮೀಪದ ಸುನ್ನಪಲ್ಲಿ ಸಮುದ್ರ ತೀರದ ದಡವನ್ನು ಸೇರಿದೆ. ಸ್ಥಳೀಯ ಮೀನುಗಾರರು ನೀಡಿರುವ ಮಾಹಿತಿಯ ಪ್ರಕಾರ, ಅಸಾನಿ ಚಂಡಮಾರುತದ ಅಬ್ಬರದಿಂದಾಗಿ ಸಮುದ್ರದ ಅಲೆಗಳ ವೇಗವು ಹೆಚ್ಚಾಗಿದ್ದು ಪರಿಣಾಮವಾಗಿ ಈ ರಥವು ಕೊಚ್ಚಿಕೊಂಡು ಬಂದಿದೆ ಎಂದು ಹೇಳಿದ್ದಾರೆ.


ಆಶ್ರಮದ ಭಾಗವನ್ನು ಹೋಲುವ ರಥವು ಅಸಾನಿ ಚಂಡಮಾರುತದ ಪ್ರಭಾವದಿಂದಾಗಿ ದೂರದ ಆಗ್ನೇಯ ಏಷ್ಯಾದ ದೇಶದಿಂದ ಕೊಚ್ಚಿಕೊಂಡು ಬಂದಿರುವ ಶಂಕೆ ಇದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಆದರೆ ಈ ವಿಚಾರವನ್ನು ತಳ್ಳಿ ಹಾಕಿರುವ ಸಂತಬೊಮ್ಮಾಳಿ ತಹಸೀಲ್ದಾರ್​ ಜೆ. ಚಲಮಯ್ಯ,ಈ ರಥವನ್ನು ಕರಾವಳಿ ಭಾಗದಲ್ಲಿ ಸಿನಿಮಾ ಶೂಟಿಂಗ್​ಗಾಗಿ ಬಳಕೆ ಮಾಡಿದ್ದಾಗಿರಬಹುದು. ಸಮುದ್ರದ ಅಲೆಯ ರಭಸವು ಈ ರಥವನ್ನು ಶ್ರೀಕಾಕುಳಂಗೆ ತಂದಿದೆ ಎಂದು ಹೇಳಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.


ಈ ನಡುವೆ, ಚಿನ್ನದ ಬಣ್ಣದ ರಥವು ದಡಕ್ಕೆ ಕೊಚ್ಚಿಕೊಂಡು ಬಂದ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆಯೇ ಈ ರಥವನ್ನು ವೀಕ್ಷಿಸಿಲು ಅನೇಕರು ಶ್ರೀಕಾಕುಳಂನತ್ತ ಧಾವಿಸಿದ್ದಾರೆ.


ಅಸಾನಿ ಚಂಡಮಾರುತವು ಕರಾವಳಿ ತೀರಕ್ಕೆ ಸಮೀಪಿಸುತ್ತಿದ್ದಂತೆ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮುಂದಿನ ಕೆಲವು ಗಂಟೆಗಳ ಕಾಲ ಚಂಡಮಾರುತವು ವಾಯುವ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಆಂಧ್ರ ಪ್ರದೇಶ ಕರಾವಳಿಯ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಅಸಾನಿ ಚಂಡಮಾರುತದ ನಿರೀಕ್ಷಿತ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಕಾಕಿನಾಡದಲ್ಲಿ ಸಮುದ್ರವೂ ಪ್ರಕ್ಷುಬ್ಧವಾಗಿದೆ.ಗುಂಟೂರು, ಕೃಷ್ಣಾ, ವಿಶಾಖಪಟ್ಟಣಂ, ಪಶ್ಚಿಮ ಮತ್ತು ಪೂರ್ವ ಗೋದಾವರಿ ಕರಾವಳಿ ಸೇರಿದಂತೆ ಸ್ಥಳಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಇದನ್ನು ಓದಿ : Gold Silver Prices Today : ಚಿನ್ನಾಭರಣ ಪ್ರಿಯರಿಗೆ ಬಿಗ್​ ರಿಲೀಫ್​ : ಚಿನ್ನ, ಬೆಳ್ಳಿ ದರಗಳಲ್ಲಿ ಇಳಿಕೆ

ಇದನ್ನೂ ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

Monastery Remains Or Movie Set? Chariot Washes Ashore Amid Cyclone Asani Leaving Andhra Village Confused

Comments are closed.