Gold Silver Prices Today : ಚಿನ್ನಾಭರಣ ಪ್ರಿಯರಿಗೆ ಬಿಗ್​ ರಿಲೀಫ್​ : ಚಿನ್ನ, ಬೆಳ್ಳಿ ದರಗಳಲ್ಲಿ ಇಳಿಕೆ

Gold Silver Prices Today : ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಆಭರಣ ಪ್ರಿಯರಿಗೆ ಇಂದು ಗುಡ್​ ನ್ಯೂಸ್​ ಸಿಕ್ಕಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ದರವು ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಇದು 380 ರೂಪಾಯಿ ಇಳಿಕೆ ಕಂಡಿದ್ದು 10 ಗ್ರಾಂಗೆ 51 ಸಾವಿರ ರೂಪಾಯಿ ಮೌಲ್ಯದಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಯಲ್ಲಿ 1 ಕೆಜಿ ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡು ಬಂದಿದ್ದು ಪ್ರತಿ ಕೆಜಿ ಬೆಳ್ಳಿಯು 60, 400 ರೂಪಾಯಿ ಮೌಲ್ಯಕ್ಕೆ ಮಾರಾಟವಾಗುತ್ತಿದೆ. ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ 22 ಕ್ಯಾರಟ್​ 10 ಗ್ರಾಂ ಚಿನ್ನದ ದರವು 46,750 ರೂಪಾಯಿ ಆಗಿದ್ದರೆ ಚೆನ್ನೈನಲ್ಲಿ 47,870 ರೂಪಾಯಿ ಹಾಗೂ ಲಕ್ನೋದಲ್ಲಿ 46,900 ರೂಪಾಯಿ ಆಗಿದೆ.


ಇನ್ನುಳಿದಂತೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ಗಳನ್ನು ಹೊರತುಪಡಿಸಿ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಹಾಗೂ ಪುಣೆಯಲ್ಲಿ ಇಂದು 1 ಕೆಜಿ ಬೆಳ್ಳಿಯ ದರವು 60,400 ರೂಪಾಯಿ ಆಗಿದೆ. ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ನಲ್ಲಿ ಪ್ರತಿ ಕೆಜಿ ಬೆಳ್ಳಿಯು 64,800 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.


ಇಂದು ಬೆಳಗ್ಗೆ 1 ಗ್ರಾಂ 22 ಕ್ಯಾರಟ್​ ಚುನ್ನದ ಬೆಲೆಯು 4675 ರೂಪಾಯಿ ಆಗಿದ್ದರೆ ಎಂಟು ಗ್ರಾಂ ಚಿನ್ನದ ಬೆಲೆಯು 37,400 ರೂಪಾಯಿ ಆಗಿದೆ.
ರಾಜ್ಯಗಳು ವಿಧಿಸುವ ತೆರಿಗೆಗಳು, ಅಬಕಾರಿ ಸುಂಕ ಮತ್ತು ವಿವಿಧ ಮೇಕಿಂಗ್ ಶುಲ್ಕಗಳಿಂದಾಗಿ ಚಿನ್ನದ ಆಭರಣಗಳ ದರವು ದೇಶಾದ್ಯಂತ ಭಿನ್ನವಾಗಿರುತ್ತದೆ. ಹಳದಿ ಲೋಹವು ಹಣದುಬ್ಬರದ ವಿರುದ್ಧ ಉತ್ತಮ ಅಸ್ತ್ರವಾಗಿದ್ದು ಅನೇಕ ಹೂಡಿಕೆದಾರರು ಇದನ್ನು ಅಮೂಲ್ಯ ಆಸ್ತಿ ಎಂಬಂತೆ ಪರಿಗಣಿಸಿ ಹೆಚ್ಚಿನ ಹೂಡಿಕೆ ಚಿನ್ನಗಳ ಮೇಲೆಯೇ ಮಾಡುತ್ತಾರೆ.


ಭಾರತದಲ್ಲಿ ಬೆಳ್ಳಿಯ ಬೆಲೆಯನ್ನು ಅಂತರಾಷ್ಟ್ರೀಯ ಬೆಲೆಗಳ ಬದಲಾವಣೆಯಿಂದ ನಿರ್ಧರಿಸಲಾಗುತ್ತದೆ; ಇದು ಡಾಲರ್ ವಿರುದ್ಧ ರೂಪಾಯಿಯ ಚಲನೆಯನ್ನು ಅವಲಂಬಿಸಿರುತ್ತದೆ. ರೂಪಾಯಿ ತನ್ನ ಅಂತರಾಷ್ಟ್ರೀಯ ಪ್ರತಿರೂಪದ ವಿರುದ್ಧ ಕುಸಿದರೆ ಮತ್ತು ಬೆಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾಗಿ ಉಳಿದರೆ, ಬೆಳ್ಳಿಯು ಬೆಲೆಯು ಬದಲಾಗುತ್ತದೆ.

ಇದನ್ನು ಓದಿ : School Reopen : ಮೇ 16 ರಿಂದ ಶಾಲೆಗಳು ಆರಂಭವಾಗುತ್ತಾ ? ಖಾಸಗಿ ಒತ್ತಡಕ್ಕೆ ಮಣಿಯುತ್ತಾ ಸರಕಾರ

ಇದನ್ನೂ ಓದಿ : woman kills 4-year-old girl : ಕಾಲ್ಗೆಜ್ಜೆ ಕದ್ದಳೆಂದು ನೆರೆಮನೆಯ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಪಾಪಿ ಮಹಿಳೆ

Gold, Silver Prices Today on May 11: Gold and silver decline; check latest prices

Comments are closed.