elon musk : ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ. ಸಾಮಾಜಿಕ ಜಾಲತಾಣದ ದೈತ್ಯ ವೇದಿಕೆಯಾದ ಟ್ವಿಟರ್ನ್ನು 44 ಬಿಲಿಯನ್ ಡಾಲರ್ ಒಪ್ಪಂದದ ಮೂಲಕ ಖರೀದಿ ಮಾಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಇದೀಗ ಈ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ .
ತನ್ನ ದೈನಂದಿನ ಸಕ್ರಿಯ ಬಳಕೆಗಾರರಲ್ಲಿ ನಕಲಿ ಅಥವಾ ಸ್ಪ್ಯಾಮ್ ಖಾತೆಗಳು 5 ಪ್ರತಿಶತಕ್ಕಿಂತ ಕಡಿಮೆಯಿದೆ ಎಂದು ಟ್ವಿಟರ್ ವರದಿ ಮಾಡಿದ ಬಳಿಕ ಟ್ವಿಟರ್ ಖರೀದಿಸುವ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಟ್ವಿಟರ್ ವರದಿ ಬಳಿಕ ಎಲಾನ್ ಮಸ್ಕ್ ಈ ರೀತಿಯಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 44 ಶತಕೋಟಿ ಡಾಲರ್ಗೆ ಟ್ವಿಟರ್ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದ ಎಲಾನ್ ಮಸ್ಕ್ ಈ ಘೋಷಣೆಯು ಚರ್ಚೆಗೆ ಕಾರಣವಾಗಿದೆ.
ಟ್ವಿಟರ್ ಮೊದಲ ತ್ರೈಮಾಸಿಕದಲ್ಲಿ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಅದರ ಹಣಗಳಿಸಬಹುದಾದ 5 ಪ್ರತಿಶತಕ್ಕಿಂತ ಕಡಿಮೆ ಇರುವ ನಕಲಿ ಖಾತೆಗಳನ್ನು ಪ್ರತಿನಿಧಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಾಕಷ್ಟು ದಿನಗಳ ಹಗ್ಗ ಜಗ್ಗಾಟಗಳ ಬಳಿಕ ಟ್ವಿಟರ್ ಖರೀದಿಸುವಲ್ಲಿ ಎಲಾನ್ ಮಸ್ಕ್ ಯಶಸ್ವಿಯಾಗಿದ್ದರು.
ಇದನ್ನು ಓದಿ : Air Fryer Cleaning: ನೀವು ಏರ್ ಫ್ರೈಯರ್ ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್ ಅನುಸರಿಸಿ!!
ಇದನ್ನೂ ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್ ಧೋನಿ
elon musk said twitter deal temporarily on hold