Air Fryer Cleaning: ನೀವು ಏರ್‌ ಫ್ರೈಯರ್ ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ!!

ಅಡುಗೆ ಮನೆ(Kitchen)ಲ್ಲಿಯ ಹಲವಾರು ವಸ್ತುಗಳು ನಮ್ಮ ಜೀವನವನ್ನು ಸುಲಭವಾಗಿಸಿವೆ. ಅದು ಆಟೋಮೆಟಿಕ್‌ ರೈಸ್‌ ಕುಕ್ಕರ್‌, ಬೇರೆ ಬೇರೆ ಆಕಾರದ ಗ್ರೇಟರ್‍ಸಗಳು, ಅಥವಾ ತರಕಾರಿ ಕತ್ತರಿಸುವ ಚಾಪಿಂಗ್‌ ಬಾಕ್ಸ್‌ ಯಾವುದೇ ಆಗಿರಬಹುದು ಅವುಗಳು ಅಡುಗೆಯಲ್ಲಿ ನಮ್ಮ ಕೆಲಸದ ಸಮಯವನ್ನು ಉಳಿತಾಯ ಮಾಡುತ್ತವೆ. ಆದರೆ ಇವೆಲ್ಲವುಗಳಲ್ಲಿ ಕೆಲವು ನಮಗೆ ಬಹಳ ಇಷ್ಟವಾಗುತ್ತದೆ. ಅದರಲ್ಲಿ ಏರ್‌ ಫ್ರೈಯರ್‌ (Air Fryer Cleaning) ಕೂಡಾ ಒಂದು.

ಇದು ನಮಗೆ ಕರಿಯುವ ಅಥವಾ ಹುರಿಯುವ ಕೆಲಸವನ್ನಷ್ಟೇ ಸುಲಭವಾಗಿಸುವುದಿಲ್ಲ ಬದಲಿಗೆ ಅಡುಗೆಯ ಕಿರಿಕಿರಿಯನ್ನೂ ತಪ್ಪಿಸುತ್ತದೆ. ಮತ್ತು ವ್ಯಂಜನಗಳ ತಯಾರಿಕೆಯಲ್ಲಿ ಕಡಿಮೆ ಎಣ್ಣೆಯ ಬಳಕೆಯು ನಮ್ಮ ಆಹಾರ ಆರೋಗ್ಯಕರವಾಗಿಯೂ ಇರುವಂತೆ ಮಾಡುತ್ತದೆ. ಆದರೆ, ಏರ್‌ ಫ್ರೈಯರ್‌ ಅನ್ನು ಉಪಯೊಗಿಸಿದ ನಂತರ ಅದನ್ನು ಹೇಗೆ ಸ್ವಚ್ಛಗೊಳಿಸುವುದು ಎನ್ನುವ ಸಣ್ಣ ಸವಾಲನ್ನು ನಾವು ಎದುರಿಸ ಬೇಕಾಗುತ್ತದೆ. ನೀವೂ ಈ ರೀತಿಯ ಸಂದರ್ಭ ಎದುರಿಸುತ್ತದ್ದರೆ ಚಿಂತಿಸ ಬೇಡಿ. ನಾವು ಇಲ್ಲಿ ನಿಮಗಾಗಿ ಏರ್‌ ಫ್ರೈಯರ್‌ ಸ್ವಚ್ಛಗೊಳಿಸುವ ಕೆಲವು ಸರಳ ಟಿಪ್ಸ್‌ ಹೇಳಿದ್ದೇವೆ.

ಇದನ್ನೂ ಓದಿ : Fruits For Healthy Skin: ಈ ಹಣ್ಣುಗಳನ್ನು ತಿನ್ನಿ, ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ!

ಏರ್‌ ಫ್ರೈಯರ್‌ ಸ್ವಚ್ಛಗೊಳಿಸುವುದು (Air Fryer Cleaning) ಹೇಗೆ?

  1. ಬಾಸ್ಕೆಟ್‌ ಅನ್ನು ಸ್ವಚ್ಛಗೊಳಿಸಿ :
    ಏರ್‌ ಫ್ರೈಯರ್‌ನಲ್ಲಿ ಪ್ರತಿಯೊಂದು ಕೆಲಸವೂ ಬಾಸ್ಕೆಟ್‌ ನಲ್ಲೇ ಆಗುವುದು. ಎಲ್ಲಾ ವಸ್ತುಗಳು ಹೆಚ್ಚಾಗಿ ಸೇರಿಕೊಳ್ಳುವುದು ಕೂಡಾ ಇದರಲ್ಲಿಯೇ. ಆದ್ದರಿಂದ ನೀವು ಅಡುಗೆ ಮಾಡಿದ ನಂತರ ಅದನ್ನು ತಣ್ಣಗಾಗಲು ಬಿಡಿ. ಅಲ್ಲಿಯೇ ಉಳಿದ ಆಹಾರದ ಕಣಗಳನ್ನು ಹೊರ ತೆಗೆಯಿರಿ. ಸೋಪು ಮತ್ತು ನೀರಿನಿಂದ ಸ್ವಚ್ಛಗೊಳಿಸಿ, ಒಣಗಲು ಬಿಡಿ. ಒಂದು ವೇಳೆ ಬಾಸ್ಕೆಟ್‌ ಬಹಳ ಕೊಳೆಯಾಗಿದೆ ಅನಿಸಿದರೆ ಮೊದ‌ಲು ಅದನ್ನು ನೀರಿನಲ್ಲಿ ನೆನೆಸಿಡಿ ನಂತರ ಸೋಪ್‌ನಿಂದ ಸ್ವಚ್ಛಗಗೊಳಿಸಿ.
  1. ಬಟ್ಟೆಯಿಂದ ಒರೆಸಿ :
    ಏರ್ ಫ್ರೈಯರ್‌ ನ ಒಳಗಡೆ ಮೈಕ್ರೋಫೈಬರ್‌ ಬಟ್ಟೆ ಅಥವಾ ಸ್ಪಾಂಜ್‌ ಅನ್ನು ಪಾತ್ರ ತೊಳೆಯುವ ಸೋಪ್‌ನಲ್ಲಿ ಒದ್ದೆಯಾಗಿಸಿ ನಂತರ ಸ್ವಚ್ಛಗೊಳಿಸಿ.ನಂತರ ಸ್ವಚ್ಛ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಒರೆಸಿ. ಇದರಿಂದ ಒಂದು ವೇಳೆ ಸೋಪು ಉಳಿದಿದ್ದರೆ ಸ್ವಚ್ಛವಾಗುವುದು.
  2. ಹೀಟಿಂಗ್‌ ಎಲಿಮೆಂಟ್‌ಗಳನ್ನು ಚೆಕ್‌ ಮಾಡಿ :
    ಕೆಲವೊಮ್ಮೆ ಹಗುರವಾದ ಆಹಾರಗಳು ಏರ್‌ ಫ್ರೈಯರ್‌ನ ಒಳಗಡೆ ಹಾರುವುದರಿಂದ ಹೀಟಿಂಗ್‌ ಎಲಿಮೆಂಟ್‌ ಮೇಲೆ ಸಿಕ್ಕಿ ಹಾಕಿಕೊಳ್ಳುವುದು. ಅಂತಹ ಸಂದರ್ಭದಲ್ಲಿ ಏರ್‌ ಫ್ರೈಯರ್‌ ಅನ್ನು ಡಿಸ್‌ಕನೆಕ್ಟ್‌ ಮಾಡಿ ಮತ್ತು ಯಾವುದೇ ಘನ ವಸ್ತುಗಳನ್ನು ಬ್ರಶ್‌ ಮಾಡುವು ಮೊದಲು ಸಂಪೂರ್ಣವಾಗಿ ಕೂಲ್‌ ಆಗಲು ಬಿಡಿ.
  3. ಪರ್ಚಮೆಂಟ್‌ ಪೇಪರ್‌ನ ಬಳಕೆ ಮಾಡಿ :
    ಚಿಕ್ಕ ಚಿಕ್ಕ ಹೋಲ್‌ಗಳಿರುವ ನಾನ್‌–ಸ್ಟಿಕ್‌ ಪೇಪರ್‌ಗಳು ಫ್ರೈ ಮಾಡಲು ಅನುಕೂಲ. ಅದರ ನಿಜವಾದ ಉಪಯೊಗವೇನು ಎಂದು ಯೊಚಿಸುತ್ತಿದ್ದೀರಾ? ಅದು ಸ್ವಚ್ಛಗೊಳಿಸುವ ಕಾರ್ಯವನ್ನು ಸುಲಭವಾಗಿಸುತ್ತದೆ. ಬಾಸ್ಕೆಟ್‌ ಒಳಗಡೆ ಪರ್ಚಮೆಂಟ್‌ ಪೇಪರ್‌ ಅನ್ನು ಹಾಕಿ, ನಂತರ ಫ್ರೈ ಮಾಡಿ. ಕೆಲಸವೆಲ್ಲಾ ಮುಗಿದ ಮೇಲೆ ಆ ಪೇಪರ್‌ ತೆಗೆಯಿರಿ. ನೀರಿನಿಂದ ಸುಲಭವಾಗಿ ಸ್ವಚ್ಛಗೊಳಿಸಿ.
  4. ಸಂಪೂರ್ಣವಾಗಿ ಒಣಗಲು ಬಿಡಿ :
    ಏರ್‌ ಫ್ರೈಯರ್‌ ಅನ್ನು ಬಟ್ಟೆಯಿಂದ ಒಮ್ಮೆ ಸ್ವಚ್ಛಗೊಳಿಸಿದ ನಂತರ ಅದರ ಎಲ್ಲಾ ಭಾಗಗಳು ಸಂಪೂರ್ಣವಾಗಿ ಒಣಗಲು ಬಿಡಿ. ಆಮೇಲೆ ಅದನ್ನು ಜೋಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಅಡುಗೆಯೂ ತಾಜಾವಾಗಿರುವುದು ಮತ್ತು ವಾಸನೆಯೂ ಬರುವುದಿಲ್ಲ.

ಇದನ್ನೂ ಓದಿ : Apricot Health Benefits: ಈ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ? ಒಮ್ಮೆ ತಿಳಿದರೆ ನೀವು ಸೇವಿಸದೇ ಇರಲು ಸಾಧ್ಯವೇ ಇಲ್ಲ!

(Air Fryer Cleaning Tips use these tips make your life easier)

Comments are closed.