ರೈಲು, ಬಸ್‌ಗಳಂತೆ ವಿಮಾನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಇಂಟರ್‌ನೆಟ್ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೂ ಕೆಲವೇ ಕೆಲವು ವಿಮಾನ ವೈಫೈ ಸೇವೆಯನ್ನು ನೀಡುತ್ತಿವೆ. ಆದ್ರೆ ಇದೀಗ ಎಲೋನ್ ಮಸ್ಕ್ (Elon Musks)ಮಾಲೀಕತ್ವದ ಸ್ಟೇಸ್ ಎಕ್ಸ್ (SpaceX) ಕತಾರ್ ಏರ್‌ವೇಸ್ Qatar Airways) ಪ್ರಯಾಣಿಕರಿಗೆ ವೈಫೈ (starlink Wifi) ಸೌಲಭ್ಯ ನೀಡಲು ಮುಂದಾಗಿದೆ

ಅರಬ್ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಅತ್ಯುತ್ತಮ ದರ್ಜೆಯ ವಿಮಾನಯಾನ ಸೇವೆಯನ್ನು ಕತಾರ್ ಏರ್‌ವೇಸ್ ಒದಗಿಸುತ್ತಿದೆ. ಈಗಾಗಲೇ ಸುಮಾರು 150 ಭಾಗಗಳಿಗೆ ಕತಾರ್ ಏರ್‌ವೇಸ್‌ನ ಸುಮಾರು 200 ಕ್ಕೂ ಅಧಿಕ ವಿಮಾನಗಳು ನಿತ್ಯವೂ ಸಂಚರಿಸುತ್ತಿವೆ. ಇನ್ಮುಂದೆ ಪ್ರಯಾಣಿಕರಿಗೆ ಹೈಸ್ಪೀಡ್ ವೈಫೈ ಸೇವೆಯನ್ನು ಒದಗಿಸಲಿದೆ.
ಕತಾರ್ ಏರ್‌ವೇಸ್ ಇದೀಗ ಎಲೋನ್ ಮಸ್ಕ್‌ನ ಸ್ಪೇಸ್ ಎಕ್ಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸ್ಟಾರ್ ಲಿಂಗ್ ವೈಫ್ ವಿಮಾನದ ಮೂಲಕ ಆಕಾಶದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಒಪ್ಪಂದದ ಉದ್ದೇಶ.
ಇದನ್ನೂ ಓದಿ : ಸೂರ್ಯ ಮುಳುಗದ ವಿಶ್ವದ 8 ದೇಶಗಳು ! ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು
ಕತಾರ್ ಏರ್‌ವೇಸ್‌ನಲ್ಲಿ ಅಳವಡಿಸಲಾಗುತ್ತಿರುವ ಸ್ಪೇಸ್ ಎಕ್ಸ್ ಸಹಭಾಗಿತ್ವದಲ್ಲಿ ಸ್ಟಾರ್ ಲಿಂಗ್ ವೈಫೈ ಅತೀ ವೇಗದ ವೈಫೈ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರತೀ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವ ವೇಳೆಯಲ್ಲಿ 350 Mbps ವರೆಗೆ ವೇಗದ ಇಂಟರ್‌ನೆಟ್ ಸೇವೆಯನ್ನು ಪಡೆಯಬಹುದಾಗಿದೆ.
BREAKING: Qatar Airways has inked an agreement with @SpaceX to make Starlink WiFi in the sky available at no cost to every passenger with speeds up to 350Mbps.
Qatar Airways is now the largest airline to collaborate with Starlink.
The partnership promises to not only to ditch… pic.twitter.com/nw2VtqLh8b
— Sawyer Merritt (@SawyerMerritt) October 15, 2023
ಮುಂದಿನ ಕೆಲವೇ ದಿನಗಳಲ್ಲಿ ಕತಾರ್ ಏರ್‌ವೇಸ್ ತನ್ನ ಮಾಲೀಕತ್ವದ ವಿಮಾನಗಳಲ್ಲಿ ಸ್ಪಾರ್ ಲಿಂಗ್ ವೈಫೈ ಸೇವೆಯನ್ನು ಅಳವಡಿಸಿಕೊಳ್ಳಲಿದೆ. ಪ್ರಯಾಣಿಕರು ಈ ವೈಫೈ ಸೇವೆಯನ್ನು ಪಡೆದುಕೊಳ್ಳಲು ಯಾವುದೇ ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ : ಅರಬ್ ನಾಡಲ್ಲಿ ಕೆಎಂಎಫ್ ನಂದಿನಿ, ದುಬೈನಲ್ಲಿ ನೂತನ ನಂದಿನಿ ಕಫೆ ಮೂ ಆರಂಭ
ಕತಾರ್ ಏರ್‌ವೇಸ್ ವಿಶ್ವದ ಅತೀ ದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಮಾನದಲ್ಲಿ ಅಳವಡಿಸಲಾಗಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲ ಅತ್ಯುತ್ತಮ ಸೂಪರ್ ವೈಫೈ ಸೇವೆಯಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ವಿಮಾನದಲ್ಲಿ ಪ್ರತೀ ಪ್ರಯಾಣಿಕರು ಕನಿಷ್ಠ 10Mbps ವೇಗದಲ್ಲಿ ಇಂಟರ್‌ನೆಟ್ ಬಳಕೆ ಮಾಡಬಹುದು. ಅಲ್ಲದೇ ಪ್ರಯಾಣಿಕರ ಮೊಬೈಲ್ ಸಾಮರ್ಥ್ಯಕ್ಕೆ ತಕ್ಕಂತೆ 350Mbps ಬ್ರಾಡ್‌ಬ್ಯಾಂಡ್ ಬಳಕೆ ಮಾಡಬಹುದಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆಯಲ್ಲಿ ಗೇಮಿಂಗ್, ವಿಪಿಎನ್ ಬಳಕೆ, ಸಿನಿಮಾ, ಕ್ರಿಕೆಟ್, ಕ್ರೀಡೆಗಳ ಲೈವ್ ಸ್ಟ್ರೀಮಿಂಗ್ ಬಳಕೆ ಮಾಡಬಹುದಾಗಿದೆ.ಅಲ್ಲದೇ 350 ಮೆಗಾಬಿಟ್‌ಗಳವರೆಗಿನ ಅಲ್ಟ್ರಾ-ಫಾಸ್ಟ್ ವೈಫೈ ವೇಗವನ್ನು ಆನಂದಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್ ಗಿಫ್ಟ್
ವಿಶ್ವದಲ್ಲಿ ಈಗಾಗಲೇ ಬ್ರಿಟಿಷ್ ಏರ್‌ವೇಸ್ (ಉಚಿತವಲ್ಲ), ಎಮಿರೇಟ್ಸ್ ಹಾಗೂ ಟರ್ಕಿಶ್ ಏರ್‌ಲೈನ್ಸ್ ಉಚಿತ ವೈಫ್ ಸೇವೆಯನ್ನು ಒದಗಿಸುತ್ತಿವೆ. ಅಲ್ಲದೇ ಸದ್ಯದಲ್ಲಿಯೇ ಶ್ರೀಲಂಕನ್ ಏರ್‌ಲೈನ್ಸ್, ಕುವೈತ್ ಏರ್‌ಲೈನ್ಸ್, ವೆಸ್ಟ್ ಜೆಟ್, ಟಾಗ್ ಆಂಗೋಲಾ ಏರ್‌ಲೈನ್ಸ್ ಗಳು ಶೀಘ್ರದಲ್ಲಿಯೇ ವೈಫೈ ಸೇವೆಯನ್ನು ಅಳವಡಿಸಿಕೊಳ್ಳಲಿವೆ.
Elon Musk’s SpaceX deal with free 350Mbps Starlink Wifi for Qatar Airways passengers