ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ : ಇದೇ ತಿಂಗಳು ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳ, ವೇತನದಲ್ಲಿ ಬಾರಿ ಏರಿಕೆ

7th Pay Commission ಪ್ರಕಾರ 4% DA Hike ಮಾಡಲು ಸರಕಾರ ಮುಂದಾಗಿದ್ದು, ಪ್ರಸ್ತುತ ಡಿಎಯಲ್ಲಿ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳು ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ ಸಿಗಲಿದೆ.

ದಸರಾ, ದೀಪಾವಳಿ ಹಬ್ಬದ ಹೊತ್ತಲ್ಲೇ ಸರಕಾರಿ ನೌಕರರಿಗೆ (Government Employess Good News) ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ತಿಂಗಳು ಸರಕಾರಿ ನೌಕರರ ವೇತನದಲ್ಲಿ ಬಾರೀ ಏರಿಕೆ ಆಗಲಿದೆ. 7 ನೇ ವೇತನ ಆಯೋಗದ ( 7th Pay Commission) ಅನ್ವಯ 4% ರಷ್ಟು ಡಿಎ (DA Hike) ಹೆಚ್ಚಳವಾಗಲಿದೆ. ಇದರಿಂದಾಗಿ ನೌಕರರ ಮಾಸಿಕ ವೇತನವು (Monthly Salary)  ಕನಿಷ್ಠ 8,280 ರೂ. ಏರಿಕೆಯಾಗಲಿದೆ.

ದೇಶದಲ್ಲಿ ಸದ್ಯ 7ನೇ ವೇತನ ಆಯೋಗದನಿಯಮಗಳು ಜಾರಿಯಲ್ಲಿವೆ ಇದರಂತೆಯೇ ಈ ಬಾರಿ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಭಾರೀ ಏರಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಸಿಎನ್‌ಬಿಸಿ ಮಾಡಿರುವ ವರದಿಯ ಆಧಾರದ ಮೇಲೆ ಇಂಡಿಯಾ ಡಾಟ್‌ ಕಾಂ ವರದಿ ಮಾಡಿದೆ. ಈ ವರದಿಯ ಪ್ರಕಾರ ಕೇಂದ್ರ ಸರಕಾರ ಈ ಬಾರಿ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

7th pay commission Good News for Government Employees 4 pecent DA Hike for this month
Image Credit to Original Source

ಒಂದೊಮ್ಮೆ ಶೇಕಡಾ 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ್ರೆ, ಕೇಂದ್ರ ಸರಕಾರಿ ನೌಕರರ ವೇತನದಲ್ಲಿ ಬಾರಿ ಏರಿಕೆಯಾಗುತ್ತಿದೆ. ಪ್ರಸ್ತುತ ತುಟ್ಟಿಭತ್ಯೆಯಲ್ಲಿ ಶೇಕಡಾ 42 ರಿಂದ ಶೇಕಡಾ 46ಕ್ಕೆ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ದಸರಾ ಹಬ್ಬದ ಸಂಭ್ರಮ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ದೀಪಾವಳಿ ಎದುರಾಗಲಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ ? ಈ ಕೆಲಸ ಮಾಡಿದ್ರೆ ಇಂದೇ ಜಮೆ ಆಗುತ್ತೆ

ದೀಪಾವಳಿ ಹಾಗೂ ದಸರಾ ಹಬ್ಬದ ನಡುವಲ್ಲಿ ಅಂದ್ರೆ ಅಕ್ಟೋಬರ್‌ ತಿಂಗಳಿನಲ್ಲಿಯೇ ಸರಕಾರಿ ನೌಕರರಿಗೆ ಭರ್ಜರಿ ಸುದ್ದಿಯೊಂದು ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸರಕಾರ ಈ ಬಾರಿ ನೌಕರರಿಗೆ ಭರ್ಜರಿ ಗಿಫ್ಟ್‌ ನೀಡಲಿದೆ ಎನ್ನಲಾಗುತ್ತಿದೆ.

ಕೇಂದ್ರ ಸರಕಾರವು ಜನವರಿ 1, 2023 ರಿಂದ ಜಾರಿಗೆ ಬರುವಂತೆ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ಡಿಎ ಏರಿಕೆ ಮಾಡಿತ್ತು. ಇದೀಗ ಆರು ತಿಂಗಳ ನಂತರ ಕೇಂದ್ರ ಸರಕಾರ ಮತ್ತೊಮ್ಮೆ ಡಿಎ ಹೆಚ್ಚಳ ಮಾಡುತ್ತಿದೆ.

ತುಟ್ಟಿಭತ್ಯೆ ಎಂದರೇನು ?

ಸಾಮಾನ್ಯವಾಗಿ ಸಾರ್ವಜನಿಕ ವಲಯ ನೌಕರರು ಮತ್ತು ಪಿಂಚಣಿದಾರರಿಗೆ ಸರಕಾರ ನೀಡುವ ಜೀವನ ವೆಚ್ಚವನ್ನು ತುಟ್ಟಿಭತ್ಯೆ ಎಂದು ಕರೆಯುತ್ತಾರೆ. ಇದನ್ನು ಹೊಂದಾಣಿಕೆ ಭತ್ಯೆ ಎಂದು ಪರಿಗಣಿಸಲಾಗುತ್ತದೆ. ಸರಕಾರಿ ನೌಕರರಿಗೆ ಡಿಎ ನೀಡಿದ್ರೆ, ನಿವೃತ್ತ ನೌಕರರಿಗೆ ನೀಡುವ ತುಟ್ಟಿಭತ್ಯೆಯನ್ನು ಡಿಆರ್‌ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ : PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್‌ ಪಡೆಯುವುದು ಹೇಗೆ ?

ಕೇಂದ್ರ ಸರಕಾರ ವರ್ಷದಲ್ಲಿ ಎಷ್ಟು ಬಾರಿ ತುಟ್ಟಿಭತ್ಯೆ ಪರಿಷ್ಕರಿಸುತ್ತದೆ ?

ಕೇಂದ್ರ ಹಾಗೂ ರಾಜ್ಯ ಸರಕಾರ ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ನೀಡುತ್ತವೆ. ಇದೀಗ ಕೇಂದ್ರ ಸರಕಾರ ಮಾಸಿಕ ವೇತನ ಹಾಗೂ ಪಿಂಚಣಿಯ ಆಧಾರದ ಮೇಲೆ ಪ್ರತೀ ಆರು ತಿಂಗಳಿಗೊಮ್ಮೆ ಡಿಎ ಹಾಗೂ ಡಿಆರ್‌ ಹೆಚ್ಚಳ ಮಾಡುತ್ತದೆ.

7th pay commission Good News for Government Employees 4 pecent DA Hike for this month
Image Credit to Original Source

ತುಟ್ಟಿಭತ್ಯೆ ಏರಿಕೆಯಿಂದ ಎಷ್ಟು ವೇತನ ಹೆಚ್ಚಲಿದೆ ?

ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರಕಾರಿ ನೌಕರರು ಕಾಯುತ್ತಿದ್ದಾರೆ. ಆದರೆ ಶೇ.೪ ರಷ್ಟು ಡಿಎ ಹೆಚ್ಚಳದಿಂದ ಸರಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಅನ್ನೋ ಲೆಕ್ಕಾಚಾರವನ್ನು ಹಾಕುವುದಾದ್ರೆ, ಸರಕಾರಿ ನೌಕರನ ಕನಿಷ್ಠ ಮೂಲ ವೇತನ ರೂ 18,000 ಇದ್ದರೆ, ಡಿಎ 42% ಮಾಸಿಕ ರೂ 7,560 ಹೆಚ್ಚಳವನ್ನು ನೀಡುತ್ತದೆ.

ಇದನ್ನೂ ಓದಿ : ದಸರಾ ರಜೆಯಲ್ಲಿದ್ದ ಮಕ್ಕಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಒಂದೊಮ್ಮೆ 46% ರಷ್ಟು ಹೊಸ DA ರಷ್ಟು ಹೆಚ್ಚಳವಾದ್ರೆ ಮಾಸಿಕ ವೇತನದಲ್ಲಿ 8,280 ರೂ.ವರೆಗೆ ಹೆಚ್ಚಳವಾಗುತ್ತದೆ. 56,900 ರೂ.ಗಳ ಗರಿಷ್ಠ ಮೂಲ ವೇತನವನ್ನು ಹೊಂದಿರುವ ಉದ್ಯೋಗಿ ಪ್ರಸ್ತುತ ಡಿಎ 42% ಅವರ ಮಾಸಿಕ ಗಳಿಕೆಗೆ ರೂ 23,898 ನೀಡುತ್ತದೆ, 46% ಗೆ ಡಿಎ ಹೆಚ್ಚಳದ ನಂತರ, ಈ ಮಾಸಿಕ ಹೆಚ್ಚಳವು ರೂ 26,174ರಷ್ಟು ಏರಿಕೆ ಆಗಲಿದೆ.

7th pay commission Good News for Government Employees 4 pecent DA Hike for this month

Comments are closed.