Fire accident in slum town: ದಕ್ಷಿಣ ಕೊರಿಯಾದ ಸ್ಲಂ ಟೌನ್‌ ನಲ್ಲಿ ಬೆಂಕಿ ಅವಘಡ: 500 ಮಂದಿ ಸ್ಥಳಾಂತರ

ಸಿಯೋಲ್‌ : (Fire accident in slum town) ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ ನ ಸ್ಲಂ ಟೌನ್‌ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 500 ಮಂದಿಯನ್ನು ಸ್ಥಳಾಂತರಿಸಲಾಗಿದೆ. 660 ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ದಕ್ಷಿಣ ಸಿಯೋಲ್‌ನ ಗುರಿಯೋಂಗ್ ಗ್ರಾಮದಲ್ಲಿ ಬೆಳಿಗ್ಗೆ 6:27 ಗಂಟೆಗೆ (0927 GMT) ಬೆಂಕಿ ಕಾಣಿಸಿಕೊಂಡಿದೆ.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ ನ ಸ್ಲಂ ಟೌನ್‌ ನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, 1,700 ಚದರ ಮೀಟರ್ ಪ್ರದೇಶದಲ್ಲಿ ಸುಮಾರು 40 ಮನೆಗಳು ನಾಶವಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಸುಮಾರು 290 ಅಗ್ನಿಶಾಮಕ ಸಿಬ್ಬಂದಿ, 10 ಹೆಲಿಕಾಪ್ಟರ್‌ಗಳು ಮತ್ತು ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ಬೆಂಕಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿರುವ ಅಧ್ಯಕ್ಷ ಯೂನ್ ಸುಕ್ ಯೆಲ್, ಬೆಂಕಿಯಿಂದಾದ ಹಾನಿಯನ್ನು ತಡೆಗಟ್ಟಲು ಲಭ್ಯವಿರುವ ಎಲ್ಲಾ ಅಗ್ನಿಶಾಮಕ ದಳ ಮತ್ತು ಉಪಕರಣಗಳನ್ನು ಸಜ್ಜುಗೊಳಿಸಲು ಕರೆ ನೀಡಿದ್ದು, ಬೆಂಕಿ ಅವಘಡ ಸಂಭವಿಸಿದ ಹತ್ತಿರದ ಪ್ರದೇಶಗಳಲ್ಲಿನ ನಿವಾಸಿಗಳನ್ನು ರಕ್ಷಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆರ್ಥಿಕತೆಯಲ್ಲಿ ಅಸಮಾನತೆಯನ್ನು ಹೊಂದಿದ ಏಷ್ಯಾದ ನಾಲ್ಕನೇ ಅತಿದೊಡ್ಡ ಗ್ರಾಮವಿದಾಗಿದ್ದು, ಇಲ್ಲಿ ಮರ ಹಾಗೂ ರಟ್ಟಿನಿಂದ ಮನೆಗಳನ್ನು ನಿರ್ಮಿಸಿ ಜನರು ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅನೇಕ ಬಾರಿ ಈ ಪ್ರದೇಶವು ಬೆಂಕಿ, ಪ್ರವಾಹ ಹಾಗೂ ಇನ್ನೀತರ ವಿಪತ್ತುಗಳಿಗೆ ಗುರಿಯಾಗುತ್ತಿರುತ್ತವೆ. ಈ ಬಾರಿಯೂ ಈ ಪ್ರದೇಶ ಬೆಂಕಿಗಾಹುತಿಯಾಗಿದ್ದು, ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಇದನ್ನೂ ಓದಿ : ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು

ಇದನ್ನೂ ಓದಿ : Firing at the house: ಮನೆಯ ಮೇಲೆ ಗುಂಡಿನ ದಾಳಿ: ತಾಯಿ ಮಗು ಸೇರಿ 6 ಮಂದಿಯ ಭೀಕರ ಹತ್ಯೆ

ಇದನ್ನೂ ಓದಿ : Young Professionals Scheme : ವೃತ್ತಿಪರರಿಗಾಗಿ ಪ್ರಾರಂಭವಾಗಲಿದೆ ಹೊಸ ಯೋಜನೆ; ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸ ಮತ್ತು ಕೆಲಸ

Fire accident in slum town: Fire accident in South Korea’s slum town: 500 people evacuated

Comments are closed.