ಬ್ಲಾಕ್‌ ಕೋಬ್ರಾ ದುನಿಯಾ ವಿಜಯ್‌ ಗೆ 49ನೇ ಹುಟ್ಟುಹಬ್ಬ : ಹುಟ್ಟೂರಿನಲ್ಲೇ ಸಂಭ್ರಮ ಆಚರಿಸಿಕೊಂಡ ನಟ

ನಟ ದುನಿಯಾ ವಿಜಯ್ ಅವರಿಗೆ ಇಂದು ( ಜನವರಿ 20 ) 49ನೇ ಹುಟ್ಟುಹಬ್ಬದ (Actor Duniya Vijay’s birthday) ಸಂಭ್ರಮ. ಸ್ಯಾಂಡಲ್‌ವುಡ್‌ಗೆ ಖಳನಾಯಕನಾಗಿ ಎಂಟ್ರಿ ಕೊಟ್ಟ ದುನಿಯಾ ವಿಜಯ್‌, ನಿರ್ದೇಶಕ ಸೂರಿ ಅವರ ದುನಿಯಾ ಸಿನಿಮಾದ ಮೂಲಕ ನಾಯಕ ನಟನಾಗಿ ಪ್ರಖ್ಯಾತಿಯನ್ನು ಪಡೆದರು. ಈಗ ಕನ್ನಡ ಸಿನಿರಂಗದಲ್ಲಿ ಮಾತ್ರವಲ್ಲದೇ ಪರ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟ ದುನಿಯಾ ವಿಜಯ್‌ ಅವರಿಗೆ ಸಿನಿಗಣ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಅನೇಕರು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ನಟ ದುನಿಯಾ ವಿಜಯ್‌ 1974ರ ಜನವರಿ 20ರಂದು ಆನೇಕಲ್ ತಾಲೂಕಿನ ಕುಂಬಾರನಹಳ್ಳಿ ಗ್ರಾಮದಲ್ಲಿ ಜನಿಸಿದರು. ಆರಂಭಿಕ ದಿನಗಳಲ್ಲಿ ವಿಜಯ್ ಕುಮಾರ್ ಬಿ ಆರ್ ನಾಯಕ ನಟನಾಗಿ ಬಡ್ತಿ ಪಡೆದುಕೊಂಡು ನಟಿಸಿದ ಮೊದಲ ಸಿನಿಮಾ ದುನಿಯಾ ಭರ್ಜರಿ ಯಶಸ್ಸು ಗಳಿಸಿದ ಕಾರಣ ಇವರಿಗೆ ದುನಿಯಾ ವಿಜಯ್ ಎಂದೇ ಕರೆಯಲ್ಪಡುತ್ತಿದ್ದಾರೆ. ಕಳೆದ ಸುಮಾರು ವರ್ಷಗಳ ಕಾಲ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ನಟ ದುನಿಯಾ ವಿಜಯ್ ಈ ಬಾರಿ ತನ್ನ ಹುಟ್ಟೂರಾದ ಆನೇಕಲ್‌ನ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ತಂದೆ ತಾಯಿಯರ ಸಮಾಧಿ ನಿರ್ಮಿಸಿ ಅದರ ಮೇಲೆ ಅವರ ಪುಟ್ಟ ಪುತ್ಥಳಿಯನ್ನು ವಿಜಯ್ ಸ್ಥಾಪಿಸಿದ್ದು, ಆ ಜಾಗಕ್ಕೆ ‘ದುನಿಯಾ ರುಣ’ ಎಂಬ ಹೆಸರನ್ನು ಇಟ್ಟಿದ್ದಾರೆ.

ಇದೇ ಜಾಗದಲ್ಲಿ ದುನಿಯಾ ವಿಜಯ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೂ ಸಹ ಇಲ್ಲಿಗೆ ಭೇಟಿ ನೀಡಲು ಅವಕಾಶ ನೀಡಿದ್ದಾರೆ. ಇನ್ನು ಹುಟ್ಟುಹಬ್ಬದ ಪ್ರಯುಕ್ತ ತಾವೇ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರ ಭೀಮದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದ್ದು, ದುನಿಯಾ ವಿಜಯ್ ಮತ್ತೊಮ್ಮೆ ರಗಡ್ ರೌಡಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2004ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ನಟನೆಯ ರಂಗ ಎಸ್ಎಸ್ಎಲ್‌ಸಿ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದುನಿಯಾ ವಿಜಯ್ ನಂತರ ಶಿವ ರಾಜ್‌ಕುಮಾರ್ ನಟನೆಯ ರಿಷಿ, ಜೋಗಿ, ರಾಕ್ಷಸ ಹಾಗೂ ಇತರೆ ನಟರ ಹಲವು ಸಿನಿಮಾಗಳಲ್ಲಿ ಪುಟ್ಟ ಖಳನಟನಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : ವಾರಿಸು ಸಿನಿಮಾದ ಭರ್ಜರಿ ಯಶಸ್ಸು : ಖುಷಿಯಲ್ಲಿ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Actress Prema : ಕಂಕಣಭಾಗ್ಯ ಕರುಣಿಸುವಂತೆ ಕೊರಗಜ್ಜನಿಗೆ ಮೊರೆಹೋದ ನಟಿ ಪ್ರೇಮ

ಇದನ್ನೂ ಓದಿ : ನಟ ದರ್ಶನ್‌ ತೂಗುದೀಪ್ ಫ್ಯಾನ್‌ ಗೆ ಫಿದಾ ಆದ ಆರ್‌ಜೆ ಮಯೂರ ರಾಘವೇಂದ್ರ‌

ಬಳಿಕ 2007ರಲ್ಲಿ ತೆರೆಕಂಡ ಸೂರಿ ನಿರ್ದೇಶನದ ದುನಿಯಾ ಸಿನಿಮಾದಲ್ಲಿ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ ದುನಿಯಾ ವಿಜಯ್ ಫಸ್ಟ್ ಬಾಲ್ ಸಿಕ್ಸರ್ ಬಾರಿಸಿ ಅಭಿಮಾನಿಗಳ ಮನಸ್ಸಿನಲ್ಲಿ ತನ್ನ ಅದ್ಭುತ ನಟನೆಯಿಂದ ಖಾಯಂ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ದುನಿಯಾ ವಿಜಯ್ ಇಂದು ಸ್ವತಃ ತಾವೇ ನಿರ್ದೇಶನ ಮಾಡಿ ಸಲಗ ರೀತಿಯ ಸೂಪರ್ ಹಿಟ್ ಸಿನಿಮಾವನ್ನೂ ಸಹ ನೀಡಿದ್ದಾರೆ ಹಾಗೂ ಪರಭಾಷಾ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ.

Actor Duniya Vijay’s birthday: Black Cobra Duniya Vijay’s 49th birthday: The actor celebrated in his hometown

Comments are closed.