Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ

Kantara God invoked : ಸ್ಯಾಂಡಲ್‌ ವುಡ್‌ನಲ್ಲಿ ಈಗ ಕಾಂತಾರ ಚಿತ್ರದ್ದೇ ಮಾತು ಓಡಾಡುತ್ತಿದೆ. ಸೆ.30 ರಂದು ರಿಲೀಸ್‌ ಆದ ಕಾಂತಾರ(Kantara) ಸಿನಿಮಾವನ್ನು ಪ್ರೇಕ್ಷಕ ಮೆಚ್ಚಿದ್ದಾನೆ. ರಿಲೀಸ್‌ ಗೂ ಒಂದು ದಿನ ಮೊದಲೇ ಕೆಲ ಭಾಗಗಳಲ್ಲಿ ಸಿನಿಮಾವನ್ನು ಫ್ರೀ ರಿಲೀಸ್‌ ಮಾಡಿದ್ದ ಚಿತ್ರತಂಡ ಎಲ್ಲೆಡೆ ಸಿನಿಮಾದ ಕುರಿತಂತೆ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಸಿನಿಮಾದ ಕಡೆಯ 20 ನಿಮಿಷದಲ್ಲಿ ರಿಷಬ್‌ ಶೆಟ್ಟಿ ಅಭಿನಯವನ್ನು ನೋಡಿದ ಸಿನಿಪ್ರಿಯರು ಮನಸೋತಿದ್ದಾರೆ.

ಸಿನಿಮಾದ ಕೊನೆಯಲ್ಲಿ ರಿಷಬ್‌ ಶೆಟ್ಟಿ ಅವರ ಮೈನವಿರೇಳಿಸುವ ಅಭಿನಯಕ್ಕೆ ನಟ ಭಯಂಕರ ಎಂದು ಹೊಗಳುವ ಮೂಲಕ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಇನ್ನೂ ಸಿನಿಮಾವನ್ನು ನೋಡಿದ್ದ ಚಿತ್ರರಂಗದವರೂ ಕೂಡ ಸಿನಿಮಾ ಕುರಿತಂತೆ ಹಾಗೂ ರಿಷಬ್‌ ಶೆಟ್ಟಿಯವರ ಮನೋಜ್ಞ ಅಭಿನಯಕ್ಕೆ ಮನಸೋತಿದ್ದಾರೆ. ನಟ ರಕ್ಷಿತ್‌ ಶೆಟ್ಟಿ, ನಟಿ ರಮ್ಯ, ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ವಿನಯ್‌ ರಾಜ್‌ ಕುಮಾರ್‌, ಸಂತೋಷ್‌ ಆನಂದ್‌ರಾಮ್‌, ಆಂಕರ್‌ ಅನುಶ್ರೀ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಚಿತ್ರವನ್ನು ನೋಡಿ ಬಹಳಷ್ಟು ಮೆಚ್ಚುಗೆಯನ್ನು ನೀಡಿದ್ದಲ್ಲದೆ, ಎವರ್‌ ಸೀನಡ್‌ ಕ್ಲೈ ಮ್ಯಾಕ್ಸ್‌ ಎಂದು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ನೋಡಿದ್ದ ಪ್ರಭಾಸ್‌ ಸಿನಿಮಾ ಕುರಿತಂತೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಸ್ಟೋರಿ ಹಾಕಿಕೊಂಡಿದ್ದರು.

ಸಿನಿಮಾ ಕುರಿತಂತೆ ಇಷ್ಟೊಂದು ಪಾಸಿಟಿವ್‌ ರೆಸ್ಪಾನ್ಸ್‌ ಬರುತ್ತಿರುವ ಬೆನ್ನಲ್ಲೇ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆಯಾಗಿದೆ ಎಂದು ಕೇಳಿಬರುತ್ತಿದೆ. ಹೌದು, ಕಾಂತಾರ(Kantara) ಸಿನಿಮಾವನ್ನು ನೋಡಲು ಹೋಗಿದ್ದ ಮಹಿಳೆಯ ಮೇಲೆ ದೈವ ಆವಾಹನೆಯಾದಂತೆ ವರ್ತಿಸಿದ್ದಾರೆ. ಮಂಗಳೂರಿನ ಪಿ ವಿ ಆರ್‌ ಮಾಲ್‌ ನಲ್ಲಿ ಸಿನಿಮಾವನ್ನು ವೀಕ್ಷಿಸುತ್ತಿದ್ದ ಮಹಿಳೆಗೆ ಸಿನಿಮಾದ ಕ್ಲೈ ಮ್ಯಾಕ್ಸ್‌ ನಡೆಯುತ್ತಿರುವ ಸಮಯದಲ್ಲಿ ದೈವ ಆವಾಹನೆಯಾಗಿದೆ ಎಂದು ಕೇಳಿಬರುತ್ತಿದೆ.

ಇದನ್ನೂ ಓದಿ : Zaid Khan : ನನಗೂ ನನ್ನ ಅಪ್ಪನಿಗೆ ಸಂಬಂಧವಿಲ್ಲ ಎಂದ ಝೈದ್ ಖಾನ್‌ : ಟ್ರೋಲ್‌ ಆದ ಜಮೀರ್‌ ಖಾನ್ ಪುತ್ರ

ಇದನ್ನೂ ಓದಿ :Prerana Sarja baby girl : ಸರ್ಜಾ ಮನೆಗೆ ಮಹಾಲಕ್ಷ್ಮಿ: ಹೆಣ್ಣುಮಗುವಿಗೆ ಜನ್ಮನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

ಇದನ್ನೂ ಓದಿ : Madhunandan : 20 ವರ್ಷಗಳ ಕನಸು ಕೊನೆಗೂ ನನಸು – ನಟನಾಗಿ ಬಣ್ಣ ಹಚ್ಚಿದ ಪಶು ವೈದ್ಯ ಮಧುನಂದನ್

ಕರಾವಳಿಯ ಕಂಬಳ, ದೈವರಾದನೆ ಹಾಗೂ ಸಂಸ್ಕೃತಿಯ ಕುರಿತಂತೆ ಸಿನಿಮಾದಲ್ಲಿ ತಿಳಿಸಲಾಗಿತ್ತು. ಇನ್ನೂ ಸಿನಿಮಾ ಕುರಿತಂತೆ ಕೇವಲ ಕರಾವಳಿ ಭಾಗ ಮಾತ್ರವಲ್ಲದೇ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು. ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಸಿನಿಮಾಕ್ಕೆ ಸ್ಯಾಂಡಲ್ವುಡ್‌ ಮಾತ್ರವಲ್ಲದೆ ಇತರ ಚಿತ್ರರಂಗದ ಗಣ್ಯರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

God invoked the woman who was watching Kantara movie

Comments are closed.