ಕಾಬೂಲ್ : ತಾಲಿಬಾನ್ ಕೈವಶವಾದ ಅಪ್ಘಾನಿಸ್ತಾನ್ ಅಕ್ಷರಷಃ ನರಕವಾಗಿದೆ. ಬದುಕಿ ಉಳಿದರೇ ಸಾಕೆಂದು ಜನ ಕಾಬೂಲ್ ಏರ್ಪೋರ್ಟ್ ನತ್ತ ಮುಖಮಾಡಿದ್ದಾರೆ. ಹೀಗಾಗಿ ಕಾಬೂಲ್ ಏರ್ಪೋರ್ಟ್ ಈಗ ಜೀವಉಳಿಸುವ ಮಾರ್ಗವಾಗಿದೆ. ಹೀಗಾಗಿ ಕಾಬೂಲ್ ಏರ್ಪೋರ್ಟ್ ನಲ್ಲಿ ಜೀವ ಉಳಿಸುವ ನೀರು ಹಾಗೂ ಅನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಅನ್ನ ನೀರಿಗಾಗಿ ಜನರು ಸಾವಿರಾರು ರೂಪಾಯಿ ವ್ಯಯಿಸಬೇಕಾದ ಸ್ಥಿತಿ ಇದೆ.
ಅಪ್ಘಾನಿಸ್ತಾನ್ ದ ಜನರು ಸೇರಿದಂತೆ ವಿದೇಶಿಗರು ಎಲ್ಲರೂ ಜೀವ ಉಳಿಸಿಕೊಳ್ಳಲು ಅಪ್ಘಾನಿಸ್ತಾನ ತೊರೆಯಲು ಮುಂದಾಗಿದ್ದಾರೆ. ಯಾವ ದೇಶಕ್ಕಾದರೂ ಸರಿ ಅಫ್ಘಾನಿಸ್ತಾನದಿಂದ ಹೊರಬಿದ್ದರೆ ಸಾಕು ಎಂಬ ಕಾರಣಕ್ಕೆ ಕಾಬೂಲ್ ಏರ್ಪೋರ್ಟ್ ನತ್ತ ಮುಖಮಾಡಿದ್ದಾರೆ.
ಹೀಗಾಗಿ ಕಾಬೂಲ್ ಏರ್ಪೋರ್ಟ್ ನಲ್ಲಿ ಸಾವಿರಾರು ಜನರು ನೆರೆದಿದ್ದು, ಇದಕ್ಕೆ ತಕ್ಕಂತೆ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಕಾಬೂಲ್ ಏರ್ಪೋರ್ಟ್ ನಲ್ಲಿ ಒಂದು ಬಾಟಲ್ ನೀರಿನ ಬೆಲೆ 3 ಸಾವಿರ ರೂಪಾಯಿಗಳಿದ್ದರೇ, ಒಂದು ಪ್ಲೇಟ್ ಅನ್ನದ ಬೆಲೆ 7 ಸಾವಿರ ರೂಪಾಯಿಗಳಷ್ಟಿದೆ.
ಮಾಧ್ಯಮಗಳ ವರದಿ ಪ್ರಕಾರ ಕಾಬೂಲ ಏರ್ಪೋರ್ಟ್ ನ ಹೊರಗೆ ಅಂದಾಜು 50 ಸಾವಿರ ಜನರು ನೆರೆದಿದ್ದು, ಹಗಲು ರಾತ್ರಿ ಕಾಬೂಲ್ ಏರ್ಪೋರ್ಟ್ ನಿಂದ ಜನರನ್ನು ಹೊತ್ತೊಯ್ಯುವ ಕಾರ್ಯ ನಡೆಯುತ್ತಿದೆಯಂತೆ.
ಇದನ್ನೂ ಓದಿ : US Airlift :ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ ! 24 ಗಂಟೆಗಳಲ್ಲಿ 19,000 ಜನರ ಏರ್ ಲಿಫ್ಟ್
ಇದನ್ನೂ ಓದಿ : ಯುವತಿಯ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟ ಕಾಮುಕರು : ಮೊಬೈಲ್ ಟವರ್ ಆಧರಿಸಿ ತನಿಖೆ