US Airlift : ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ ! 24 ಗಂಟೆಗಳಲ್ಲಿ 19,000 ಜನರ ಏರ್ ಲಿಫ್ಟ್

ವಾಷಿಂಗ್ಟನ್ : ಅಫ಼್ಘನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ಬೆನ್ನಲ್ಲೇ, ಅಲ್ಲಿನ ಜನರು ಅಫ಼್ಗಾನಿಸ್ತಾನ ಬಿಟ್ಟು ತೆರಳಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ನಿವಾಸಿಗಳ ನೆರವಿಗೆ ಅಮೇರಿಕಾ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಲಿಫ್ಟ್‌ ನಡೆಯುತ್ತಿದ್ದು, ಇದು ಜಗತ್ತಿನ ಇತಿಹಾಸದಲ್ಲೇ ಅತಿದೊಡ್ಡ ಏರ್​ಲಿಫ್ಟ್​ ಎನ್ನಲಾಗುತ್ತಿದೆ.

ನಿನ್ನೆ ಒಂದೇ ದಿನ ಅಫ್ಘಾನಿಸ್ತಾನದಲ್ಲಿದ್ದ 19,000 ಜನರನ್ನು ಕಾಬೂಲ್‌ ವಿಮಾನ ನಿಲ್ದಾಣದಿಂದ ಯುಎಸ್​ಗೆ (US) ಕರೆತರಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 82,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ (evacuated) ಎಂದು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.

ಇದನ್ನೂ ಓದಿ: ಮುಂದುವರೆದ ಅಪ್ಘಾನ್ ಭಾರತೀಯ ರಕ್ಷಣೆಯ “ಆಫರೇಶನ್ ದೇವಿಶಕ್ತಿ” ಕಾರ್ಯಾಚರಣೆ

ತಾಲಿಬಾನಿಗಳ ಅಟ್ಟಾಹಾಸ ಶುರುವಾಗುತ್ತಲೇ ಎಚ್ಚೆತ್ತುಕೊಂಡಿದ್ದ ಅಮೇರಿಕಾ ಏರ್‌ಲಿಫ್ಟ್‌ ಕಾರ್ಯಾಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಆಗಸ್ಟ್ 14 ರಿಂದ 82,300ಕ್ಕೂ ಹೆಚ್ಚು ಜನರನ್ನು ಕಾಬೂಲ್‌ನಿಂದ ಕರೆತರಲಾಗಿದೆ. ಅದೇ ರೀತಿ ಕೇವಲ 24 ಗಂಟೆಗಳ ಅವಧಿಯಲ್ಲಿ 90 ಯುಎಸ್ ಮಿಲಿಟರಿ ಮತ್ತು ಒಕ್ಕೂಟದ ವಿಮಾನಗಳಲ್ಲಿ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ. ಇದು ಇಲ್ಲಿವರೆಗಿನ ಅತಿ ದೊಡ್ಡ ಏರ್ ಲಿಫ್ಟ್ ಆಗಿದೆ.

ಇದನ್ನೂ ಓದಿ: ಅಮೆರಿಕ ಯುದ್ಧ ವಿಮಾನದಲ್ಲಿ ಡೆಲಿವರಿ ! ಮಗುವಿಗೆ ಜನ್ಮ ನೀಡಿದ ಅಫ್ಘನ್ ಮಹಿಳೆ

Comments are closed.