ಯುವತಿಯ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟ ಕಾಮುಕರು : ಮೊಬೈಲ್‌ ಟವರ್‌ ಆಧರಿಸಿ ತನಿಖೆ

ಮೈಸೂರು : ಲಲಿತಾದ್ರಿಪುರದಲ್ಲಿ ನಡೆದಿದ್ದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಗ್ಯಾಂಗ್‌ರೇಪ್‌ ಮಾಡಿದ್ದ ಆರೋಪಿ ಗಳು ಯುವತಿಯ ವಿಡಿಯೋವನ್ನು ಸೆರೆ ಹಿಡಿದು, ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಿದೇ ಇದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ಚಾಮುಂಡಿಯ ತಪ್ಪಲಿನಲ್ಲಿ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿಯೋರ್ವಳು ತನ್ನ ಸ್ನೇಹಿತನ ಜೊತೆಗೆಯಲ್ಲಿ ಕುಳಿತಿದ್ದ ವೇಳೆಯಲ್ಲಿ ಬಂದಿದ್ದ ಆರು ಮಂದಿ ಕಾಮುಕರು, ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಅಲ್ಲದೇ ಕಾಮುಕರ ಅಟ್ಟಹಾಸವನ್ನು ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಕಾಮುಕರು ಸ್ಥಳದಿಂದ ಪರಾರಿಯಾಗುತ್ತಿದ್ದಂತೆಯೇ ಯುವತಿ ಹಾಗೂ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯಿಂದಾಗಿ ಯುವತಿ ಭಯಗೊಂಡಿದ್ದಾಳೆ. ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತ ಹಲವು ಮಾಹಿತಿಯನ್ನು ನೀಡಿದ್ದಾಳೆ. ನಂತರ ಯುವತಿಯ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಪೊಲೀಸರು ಈಗಾಗಲೇ ಘಟನಾ ಸ್ಥಳದ ಮಹಜರು ಕಾರ್ಯವನ್ನು ನಡೆಸಿದ್ದಾರೆ. ಸ್ಥಳದಲ್ಲಿ ಯಾವುದಾದರೂ ಸಾಕ್ಷ್ಯಗಳು ಸಿಗುತ್ತವೆಯೇ ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದೆ.

ದೇಶದಾದ್ಯಂತ ಸುದ್ದಿಯಾಗಿರುವ ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ. ಪ್ರಮುಖವಾಗಿ ಕತ್ತಲ ರಾತ್ರಿಯಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೊಬೈಲ್‌ ಟವರ್‌ ಆಧರಿಸಿ, ಅತ್ಯಾಚಾರ ನಡೆದ ವೇಳೆಯಲ್ಲಿ ಈ ಲೊಕೇಷನ್‌ನಲ್ಲಿ ಯಾವೆಲ್ಲಾ ಮೊಬೈಲ್‌ ಗಳು ಕಾರ್ಯಚರಿಸಿವೆ ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಘಟನೆ ನಡೆದಿರುವ ಪ್ರದೇಶ ಸಂಪೂರ್ಣವಾಗಿ ನಿರ್ಜನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಪಾರ್ಟಿಗಳು ನಡೆಯುತ್ತಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :  ಮೈಸೂರಿನ ಜನರನ್ನ ಬೆಚ್ಚಿ ಬೀಳಿಸಿದೆ  ಗ್ಯಾಂಗ್‌ ರೇಪ್‌ ಪ್ರಕರಣ

ಇದನ್ನೂ ಓದಿ : ಅಮಲು ಪದಾರ್ಥ ನೀಡಿ ವಿವಾಹಿತ ಮಹಿಳೆಯ ಅತ್ಯಾಚಾರ : ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ಜಿಮ್‌ ಮಾಲೀಕ

Comments are closed.