ಲಂಡನ್: (Kannada flag in London) ಲಂಡನ್ ನಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಬೀದರ್ ಮೂಲದ ಕನ್ನಡಿರೋರ್ವರು ನಮ್ಮ ನಾಡಧ್ವಜವನ್ನು ಹಾರಿಸುವ ಮೂಲಕ ತಮಗಿರುವ ಕನ್ನಡ ಹಾಗೂ ನಾಡಪ್ರೇಮವನ್ನು ಮೆರೆದಿದ್ದಾರೆ.
ಅನೇಕ ಮಂದಿ ನಾಡನ್ನು ಬಿಟ್ಟು ಬೇರೆ ಕಡೆ ಹೋದಾಗ ಆ ನಾಡಿನ ಆಚಾರ ವಿಚಾರಗಳಿಗೆ ಒಗ್ಗಿಕೊಂಡು ತಮ್ಮ ನಾಡಿನ ಸಂಸ್ಕೃತಿಯನ್ನು ಮರೆತುಬಿಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಾಗಲ್ಲ. ತಾನೂ ವಿದೇಶದಲ್ಲಿದ್ದರೂ ವಿದೇಶದಲ್ಲೇ ಓದಿ ಪದವಿ ಪಡೆದರೂ ತನ್ನ ನಾಡು ನುಡಿಯನ್ನು ಮರೆಯದೇ ಅಲ್ಲಿಯೂ ಕೂಡ ತನ್ನ ನಾಡಪ್ರೇಮವನ್ನು ಎತ್ತಿಹಿಡಿದಿದ್ದಾರೆ. ಹೌದು..! ಬೇಯ್ಸ್ ಬಿ ಸ್ಕೂಲ್ ನಲ್ಲಿ ಮ್ಯಾನೇಜ್ ಮೆಂಟ್ ಮಾಸ್ಟರ್ಸ್‌ನಲ್ಲಿ ಎಂಎಸ್ ಪದವಿ ಪಡೆದಿದ್ದ ಆದೀಶ್ ಆರ್.ವಾಲಿ , ಪದವಿ ಸ್ವೀಕರಿಸಲು ವೇದಿಕೆಗೆ ಹೋಗಿದ್ದ ವೇಳೆ ನಮ್ಮ ನಾಡಧ್ವಜವನ್ನು ಹಾರಿಸಿ ತಮಗೆ ಕನ್ನಡದ ಮೇಲಿರುವ ಅಭಿಮಾನವನ್ನು ತೋರಿದ್ದಾರೆ. ಈ ವೇಳೆ ಅವರ ಸ್ನೇಹಿತರು ಸೇರಿದಂತೆ ಅಲ್ಲಿ ನೆರೆದಿದ್ದ ಜನ ಇವರ ನಾಡಪ್ರೇಮಕ್ಕೆ, ಕನ್ನಡ ಅಭಿಮಾನಕ್ಕೆ ಚಪ್ಪಾಳೆಯ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಕುರಿತಂತೆ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ, “ನಾನು @CityUniLondon- @BayesBSchool ನಿಂದ ಮ್ಯಾನೇಜ್ ಮೆಂಟ್‌ನಲ್ಲಿ ಮಾಸ್ಟರ್ಸ್ ಎಂ.ಎಸ್ ಪದವಿ ಪಡೆದಿದ್ದೇನೆ. ಲಂಡನ್ ಬ್ರಿಟನ್ ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯದ ಧ್ವಜವನ್ನು ಹಾರಿಸುರುವುದು ಹೆಮ್ಮೆಯ ಕ್ಷಣ.” ಎಂದು ಆದೀಶ್ ಆರ್. ವಾಲಿ ಬರೆದುಕೊಂಡಿದ್ದಾರೆ.
ನಮ್ಮ ಕನ್ನಡ ನಾಡಿನ ಬಗ್ಗೆ ಅನೇಕರು ಅಭಿಮಾನವನ್ನು ಹೊಂದಿದ್ದು, ಈ ವ್ಯಕ್ತಿ ವಿದೇಶದಲ್ಲೂ ಕೂಡ ನಮ್ಮ ಹೆಮ್ಮೆಯ ಕನ್ನಡ ಭಾವುಟವನ್ನು ಹಿಡಿದು ತಮಗೆ ನಾಡಿನ ಮೇಲೆ, ಭಾಷೆಯ ಮೇಲಿರುವ ಅಪಾರ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಅಲ್ಲದೇ ಆದೀಶ್ ಎಲ್ಲರ ಪ್ರಶಂಸೆಗೂ ಒಳಗಾಗಿದ್ದಾರೆ. ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರೇ ಮೂಖವಿಸ್ಮಿತರಾಗುವಂತೆ ಮಾಡಿದ್ದಾರೆ.
ಇದನ್ನೂ ಓದಿ : Fire accident in slum town: ದಕ್ಷಿಣ ಕೊರಿಯಾದ ಸ್ಲಂ ಟೌನ್ ನಲ್ಲಿ ಬೆಂಕಿ ಅವಘಡ: 500 ಮಂದಿ ಸ್ಥಳಾಂತರ
ಇದನ್ನೂ ಓದಿ : ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು
Kannada flag in London: The Kannada flag is also popular in London