ಗೆಳಯನಿಂದಲೇ 44 ಲಕ್ಷ ರೂ. ವಂಚನೆಗೆ ಒಳಗಾದ ಟೀಮ್‌ ಇಂಡಿಯಾ ವೇಗಿ ಉಮೇಶ್ ಯಾದವ್

ನಾಗ್ಪುರ : ಭಾರತದ ಕ್ರಿಕೆಟ್‌ ತಂಡದ ವೇಗಿ ಉಮೇಶ್ ಯಾದವ್ (Umesh Yadav) ಅವರು ಭೂಮಿ ಖರೀದಿಸುವ ವಿಚಾರವಾಗಿ ತನ್ನ ಗೆಳಯನಿಂದಲೇ 44 ಲಕ್ಷ ರೂ. ವಂಚನೆಯಾಗಿದೆ. ಸ್ನೇಹಿತ ಹಾಗೂ ಮ್ಯಾನೇಜರ್‌ ಆಗಿದ್ದ ಶೈಲೇಶ್‌ ಠಾಕ್ರೆ ಅವರು ಭೂಮಿ ಖರೀದಿಸಿ ಕೊಡುವುದಾಗಿ ಹೇಳಿ ಉಮೇಶ್‌ ಯಾಧವ್‌ಯಿಂದ ಭಾರಿ ಮೊತ್ತವನ್ನು ಪಡೆದು ನಂತರ ಮೋಸ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಗ್ಪುರ ನಿವಾಸಿ ಉಮೇಶ್‌ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೈಲೇಶ್ ಠಾಕ್ರೆ (37) ಕೊರಾಡಿ ನಿವಾಸಿಯಾಗಿದ್ದು, ಉಮೇಶ ಯಾದವರ ಒಳ್ಳೆಯ ಸ್ನೇಹಿತರಾಗಿದ್ದರು. ಯಾದವ್ ಅವರು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ನಂತರ, ನಿರುದ್ಯೋಗಿಯಾಗಿದ್ದ ತಮ್ಮ ಸ್ನೇಹಿತ ಶೈಲೇಶ್ ಠಾಕ್ರೆ ಅವರನ್ನು ಜುಲೈ 15, 2014 ರಂದು ಮ್ಯಾನೇಜರ್ ಆಗಿ ನೇಮಿಸಿಕೊಂಡರು. ನಂತರ ಅವರು ತಮ್ಮ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವಂತೆ ಹೇಳಿದ್ದರು. ಆದರೆ ಇತ್ತೀಚೆಗೆ ನಾಗ್ಪುರದಲ್ಲಿ ಭೂಮಿ ಖರೀದಿಸುವ ವಿಚಾರವಾಗಿ ಉಮೇಶ್‌ ಯಾದವ್‌ಗೆ ಠಾಕ್ರೆ ಭಾರಿ ಮೊತ್ತದ ವಂಚನೆ ಮಾಡಿದ್ದಾರೆಂದು ಪೊಲೀಸ್‌ ಅಧಿಕಾರಿಗಳು ಎಫ್‌ಐಆರ್ ಉಲ್ಲೇಖಿಸಿ ತಿಳಿಸಿದ್ದಾರೆ.

“ಕಾಲಕ್ರಮೇಣ ಠಾಕ್ರೆ ಮೇಲೆ ಉಮೇಶ್‌ ಯಾದವ್‌ ತುಂಬಾ ವಿಶ್ವಾಸ ಇಟ್ಟಿದ್ದರು. ಹೀಗಾಗಿ ಠಾಕ್ರೆ ಉಮೇಶ್ ಯಾದವ್ ಅವರ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸಲು ಪ್ರಾರಂಭಿಸಿದರು. ಅವರು ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು, ಯಾದವ್ ನಾಗ್ಪುರದಲ್ಲಿ ಭೂಮಿಯನ್ನು ಖರೀದಿಸಲು ಹುಡುಕುತ್ತಿದ್ದಾಗ, ಠಾಕ್ರೆ ತಾನೇ ಭೂಮಿ ಖರೀದಿ ಮಾಡಿ ನಿಮಗೆ ಕೊಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಠಾಕ್ರೆ ಬಂಜರು ಪ್ರದೇಶದಲ್ಲಿ ನಿಮಗೆ ಒಂದು ಜಾಗ ನೋಡಿದ್ದೇನೆಂದು ಹೇಳಿ, ಉಮೇಶ್‌ ಯಾಧವ್‌ ಅವರಿಂದ 44 ಲಕ್ಷ ರೂ. ಠಾಕ್ರೆ ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ : India Split Captaincy: ವಿಶ್ವಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ, ಭಾರತಕ್ಕೆ ಇಬ್ಬರು ಕ್ಯಾಪ್ಟನ್ಸ್; ಬಿಸಿಸಿಐ ಮೆಗಾ ಪ್ಲಾನ್

ಇದನ್ನೂ ಓದಿ : ಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Virat Kohli 25000 Runs : ಇವತ್ತೇ 25 ಸಾವಿರದ ಮೈಲುಗಲ್ಲು ನೆಡ್ತಾರಾ ಕಿಂಗ್ ಕೊಹ್ಲಿ? 25000ಕ್ಕೆ ಬೇಕು 111 ರನ್

ಆದರೆ ನಂತರ ಠಾಕ್ರೆ ಖರೀದಿಸಿದ ಜಾಗವನ್ನು ಉಮೇಶ್‌ ಯಾದವ್‌ ಹೆಸರಿಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಉಮೇಶ್‌ ಯಾದವ್‌ ಸ್ನೇಹಿತನ ವಂಚನೆಯನ್ನು ಮನಗಂಡು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು” ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು. ಉಮೇಶ್‌ ಯಾದವ್ ಕೊರಾಡಿಯಲ್ಲಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ ಶಿಕ್ಷೆ ಮತ್ತು 420 ವಂಚನೆ ಮತ್ತು ಆ ಮೂಲಕ ಆಸ್ತಿಯನ್ನು ಅಪ್ರಾಮಾಣಿಕವಾಗಿ ವಿತರಣೆಗೆ ಪ್ರೇರೇಪಿಸುವುದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Team India cricketer Umesh Yadav was cheated of Rs 44 lakh by his friend.

Comments are closed.