ತಾಯಿ… ಎರಡಕ್ಷರ ಪದದಲ್ಲಿ ಅದೇನೋ ಪ್ರೀತಿ. ತಾಯಿ ಪ್ರೀತಿ, ತ್ಯಾಗ, ಮಮತೆಯ ಸಂಕೇತ. ಮಕ್ಕಳನ್ನು ಹೆತ್ತು, ಹೊತ್ತು ಸಾಕಿ ಸಲಹುವ ಈ ತಾಯಿಗೆ ಮಿಗಿಲಿಲ್ಲ. ಇಲ್ಲೊಬ್ಬಳು ಮಹಾತಾಯಿ ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾಳೆ.
ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ತಾಯಿಗೆ ಐದರಿಂದ 10 ಮಕ್ಕಳು ಇರುವುದು ಮಾಮೂಲು. ಆದ್ರೆ ಹೆಣ್ಣು ಒಂದು ಬಾರಿಗೆ 1 ಅಥವಾ ಎರಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಇನ್ನೂ ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರವೇ 5 ಮಕ್ಕಳಿಗೆ ಜನ್ಮ ನೀಡುತ್ತಾಳೆ. ಆದ್ರೆ ಈ ತಾಯಿ ಮಾತ್ರ ಎಲ್ಲರಿ ಗಿಂತಲೂ ವಿಶೇಷ, ವಿಭಿನ್ನ. ಇದೀ ಮಹಿಳೆಯೊಬ್ಬಳು ಏಕಕಾಲಕ್ಕೆ ಹತ್ತು ಕಂದಮ್ಮಗಳಿಗೆ ಜೀವ ನೀಡುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾಳೆ.

ಈ ಹಿಂದೆ ದಕ್ಷಿಣ ಆಫ್ರಿಕಾದ ಮೊರಕ್ಕಾದ ಈ ಮಹಾತಾಯಿಯ ಹೆಸರು ಮಲಿಯಾನ್ ಹಲೀಮಾ ಎಂಬ ಮೊರಕ್ಕೋದ ತಾಯಿ, ಒಂಭತ್ತು ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಳು. ಇದೀಗ ಹಲೀಮಾ ದಾಖಲೆಯನ್ನು ಕಿನ್ಯಾದ ಮಹಿಳೆ ಬ್ರೇಕ್ ಮಾಡಿದ್ದಾಳೆ.
ಹತ್ತು ಮಕ್ಕಳಿಗೆ ಜನ್ಮ ನೀಡಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ನೆಟ್ಟಿಗರು ಕುತೂಹಲದಿಂದ ಹಲವು ಪ್ರಶ್ನೆಗಳು ಕೇಳುತ್ತಿದ್ದಾರೆ.