Viral Video : 28 ಪತ್ನಿಯರ ಮುಂದೆ 37ನೇ ಮದುವೆಯಾದ ಭೂಪ ..!

ಒಂದಕ್ಕಿಂತ ಹೆಚ್ಚು ಮದುವೆಯಾಗೋದು ಕಾನೂನಿನ ಪ್ರಕಾರ ಅಪರಾಧ. ಇನ್ನೂ ಎರಡು ಮಕ್ಕಳನ್ನು ಈಗಿನ ಕಾಲ ಸಾಕಿ ಸಲಹೋದಕ್ಕೆ ಹೆಣಗಾಡು ತ್ತಾರೆ. ಆದ್ರೆಲ್ಲೆ ಇಲ್ಲೊಬ್ಬ ತನ್ನ 28 ಪತ್ನಿ, 35 ಮಕ್ಕಳು ಹಾಗೂ 126 ಮೊಮ್ಮಕಳ ಸಮ್ಮುಖದಲ್ಲಿ 37 ಮದುವೆಯಾಗಿದ್ದಾನೆ. 37ನೇ ಮದುವೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ 37ನೇ ಮದುವೆಯಾದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಬ್ರೇವೆಸ್ಟ್ ಮ್ಯಾನ್ …ಲೀವಿಂಗ್ ಎಂದು ಬರೆದುಕೊಂಡಿದ್ದಾರೆ. ರುಪಿನ್ ಶರ್ಮಾ ಅವರ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ತೈವಾನಿನಲ್ಲಿನ ವ್ಯಕ್ತಿಯೋರ್ವ ಮಹಿಳೆಯನ್ನು 37 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಮದುವೆಯಾಗಿ ಮೂರು ಬಾರಿ ವಿಚ್ಚೇದನ ಪಡೆದಿರೋದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ತೈಪೆಯಲ್ಲಿನ ಬ್ಯಾಂಕ್ ಸಿಬ್ಬಂದಿಯೋರ್ವ ಹೆಚ್ಚುವರಿ ರಜೆಯನ್ನು ಪಡೆಯುವ ಸಲುವಾಗಿ ವಿವಾಹವಾಗಿದ್ದಾನೆ. ವಿವಾಹದ ರಜೆ ಮುಗಿಯುತ್ತಿದ್ದಂತೆಯೇ ತನ್ನ ಹೆಂಡತಿಗೆ ವಿಚ್ಚೇದನ ನೀಡಿ ಮರು ದಿನ ಮತ್ತೆ ವಿವಾಹದ ರಜೆ ಪಡೆದಿದ್ದಾನೆ. ಹೀಗೆ ನಾಲ್ಕು ಬಾರಿ ಮದುವೆಯಾಗಿ ಮೂರು ಬಾರಿ ವಿಚ್ಚೇದನ ಪಡೆದಿದ್ದಾನೆ. ನಂತರದಲ್ಲಿ ಈತನ ಕಳ್ಳಾಟ ಬಯಲಾಗಿತ್ತು.

Comments are closed.