Karnataka : 4 ರಿಂದ 5 ಹಂತಗಳಲ್ಲಿ ಲಾಕ್ ಡೌನ್ ತೆರವು : ಸಚಿವ ಆರ್.ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4 ರಿಂದ 5 ಹಂತಗಳಲ್ಲಿ ಲಾಕ್ ಡೌನ್ ತೆರವು ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ನಿತ್ಯವೂ 2 ಸಾವಿರದ ಆಸುಪಾಸಿನಲ್ಲಿದೆ. ಲಾಕ್ ಡೌನ್ ತೆರವು ಮಾಡಲು ಈ ಪ್ರಮಾಣ 500ಕ್ಕೆ ಇಳಿಕೆಯ ಬೇಕು. ಆದ್ರೂ ರಾಜ್ಯದಲ್ಲಿ ನಾಲ್ಕರಿಂದ 5 ಹಂತಗಳಲ್ಲಿ ಲಾಕ್ ಡೌನ್ ತೆರವು ಮಾಡುತ್ತೇವೆ. ಆದರೆ ಒಮ್ಮೆಲೆ ಲಾಕ್ ಡೌನ್ ಆದೇಶ ತೆರವುಗೊಳಿಸಿ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವುದಿಲ್ಲ. ಇದಕ್ಕೆ ಸರಕಾರ ಮತ್ತು ಜನರು ಸಿದ್ದರಿಲ್ಲ ಎಂದಿದ್ದಾರೆ.

ಜೂನ್ 11 ಅಥವಾ 12ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಜ್ಞರ ಜೊತೆಯಲ್ಲಿ ಸಭೆಯನ್ನು ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಇದೀಗ 6 ರಿಂದ 10 ಗಂಟೆಯ ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇದೀಗ ಅಗತ್ಯ ವಸ್ತುಗಳ ಖರೀದಿಯ ಅವಧಿಯಲ್ಲಿ ಒಂದಿಷ್ಟು ವಿನಾಯಿತಿ ಸಿಗುವ ಸಾಧ್ಯತೆಯಿದೆ. ಕೈಗಾರಿಕಾ ಕ್ಷೇತ್ರಕ್ಕೆ ವಿನಾಯಿತಿ ನೀಡುವುದರ ಜೊತೆಗೆ ಜನರು ವಾಕಿಂಗ್ ಮಾಡಲು ಅವಕಾಶ ನೀಡಲು ಚಿಂತನೆಯಿದೆ ಎಂದಿದ್ದಾರೆ.

ಆದರೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶವನ್ನು ನೀಡುವುದಿಲ್ಲ. ಈಗಾಗಗಲೇ ಜಿಲ್ಲೆಯಿಂದ ಜಿಲ್ಲೆಗೆ ಜನರ ಓಡಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಅವರು ಸೂಚನೆಯನ್ನು ನೀಡಲಿದ್ದಾರೆ. ಆದರೆ ಸದ್ಯಕ್ಕೆ ಅಂತರ್ ಜಿಲ್ಲಾ ಓಡಾಟಕ್ಕೆ ಅನುಮತಿಯನ್ನು ನೀಡುವ ಯಾವುದೇ ಚಿಂತನೆಯೂ ಸರಕಾರ ಮುಂದೆಯಿಲ್ಲ ಎಂದಿದ್ದಾರೆ.

Comments are closed.