Kim Jong Un : 5 ನಿಮಿಷ ಸಿನಿಮಾ ನೋಡಿದ ಬಾಲಕನಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಕಿಮ್​ ಜಾಂಗ್​ ಉನ್​..!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ( Kim Jong Un)​ ವಿಚಿತ್ರ ಆದೇಶಗಳ ಮೂಲಕವೇ ಸದಾ ಸುದ್ದಿಯಲ್ಲಿತ್ತಾರೆ. ಕೆಲ ದಿನಗಳ ಹಿಂದಷ್ಟೇ ಯಾರೂ ಬೆಕ್ಕನ್ನು ಸಾಕಬಾರದು ಎಂದು ಹೇಳಿ ಸುದ್ದಿ ಮಾಡಿದ್ದರು. ಇದಾದ ಬಳಿಕ ತಾನು ಧರಿಸುವಂತಹ ಲೆದರ್​ ಕೋಟ್​ನ್ನು ಸಾರ್ವಜನಿಕರು ಧರಿಸುವಂತಿಲ್ಲ ಎಂಬ ಆದೇಶ ಹೊರತರಲಾಗಿತ್ತು. ಇದೀಗ 14 ವರ್ಷದ ಬಾಲಕನಿಗೆ ಕ್ಷುಲ್ಲಕ ಕಾರಣಕ್ಕೆ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

ಉತ್ತರ ಕೊರಿಯಾದ ಜನ ಸರ್ವಾಧಿಕಾರಿ ಕಿಮ್​ ಜಾಂಗ್​​ ಉನ್​​ ಹೆಸರು ಕೇಳಿದರೆ ಅಲ್ಲಿನ ಜನರು ನಡುಗುತ್ತಾರೆ. ಏಕೆಂದರೆ ಕಿಮ್​ ಜಾಂಗ್​​ ಉನ್​​ ವಿಧಿಸುವ ಶಿಕ್ಷೆ ಕೂಡ ಅಷ್ಟೇ ಭಯಾಕನವಾಗಿರುತ್ತೆ. ಇದೀಗ 14 ವರ್ಷದ ವಿದ್ಯಾರ್ಥಿಯೊಬ್ಬ ನಿಷೇಧ ಮಾಡಲಾಗಿದ್ದ ಸಿನಿಮಾ ವೀಕ್ಷಿಸಿದ್ದಾನೆ. ಇದೇ ಕಾರಣಕ್ಕೆ ಆತನಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಾಲಕನಿಗೆ ವಿಧಿಸಿರುವ ಶಿಕ್ಷೆಯನ್ನು ಕೇಳಿ ಕೋರಿಯಾದ ಜನರ ಬೆಚ್ಚಿಬಿದ್ದಿದ್ದಾರೆ.

ಅಷ್ಟಕ್ಕೂ ಬಾಲಕ ನೋಡಿರುವುದು ದಿ ಅಂಕಲ್​ ಎಂಬ ಹೆಸರಿನ ಸಿನಿಮಾ. ಈ ಸಿನಿಮಾ ದಕ್ಷಿಣ ಕೊರಿಯಾಗೆ ಸೇರಿದ್ದಾಗಿದೆ. ದಕ್ಷಿಣ ಕೊರಿಯಾ ಸಿನಿಮಾಗಳನ್ನು ವೀಕ್ಷಿಸಿದಂತೆ ಉತ್ತರ ಕೊರಿಯಾ ತನ್ನ ಜನತೆಯ ಮೇಲೆ ಕಿಮ್​ ಜಾಂಗ್​ ಉನ್​ ಸರ್ಕಾರ ಕಟ್ಟಪ್ಪಣೆಯನ್ನು ಹೊರಡಿಸಿಯತ್ತು. ಆದರೆ ಸರಕಾರದ ಈ ಆದೇಶವನ್ನು ಉಲ್ಲಂಘಿಸಿ ಸಿನಿಮಾ ವೀಕ್ಷಿಣೆ ಮಾಡಿದ ಕಾರಣಕ್ಕೆ ಹೂಸ್ಟನ್​ ನಗರದ ಶಾಲೆಯೊಂದರಲ್ಲಿ ಬಾಲಕನನ್ನು ಬಂಧಿಸಲಾಗಿತ್ತು.

ಅಂದಹಾಗೆ ಈ ಬಾಲಕ ಸಿನಿಮಾ ನೋಡಿದ್ದ ಕೇವಲ ಐದು ನಿಮಿಷ ಮಾತ್ರ..! ಇಷ್ಟು ಸಣ್ಣ ತಪ್ಪಿಗೆ ಬಾಲಕನಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರ ಕೊರಿಯಾದ ಕಾನೂನುಗಳೇ ಈ ರೀತಿಯಲ್ಲಿ ರಚನೆಯಾಗಿದೆ. ಇಲ್ಲಿ ಯಾವುದೇ ವ್ಯಕ್ತಿಯು ಸಾಂಸ್ಕೃತಿಕ ಅಪರಾಧವನ್ನು ಮಾಡಿದರೆ ಆತನಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ .

ಇದನ್ನು ಓದಿ :CHEESEBURGER FISH : ಸಮುದ್ರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಮೀನು: ಬರ್ಗರ್​ ಮಾದರಿಯ ಜಲಚರ ಕಂಡ ನೆಟ್ಟಿಗರು ಶಾಕ್​

ಇದನ್ನೂ ಓದಿ : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

​North Korea Kim Jong Un : Boy watches ban movie for 5 minutes; sentenced to 14 years rigorous imprisonment

Comments are closed.