Kim Jong-un : ಕೊರೊನಾ ಸಾಂಕ್ರಾಮಿಕ ಶುರುವಾಗಿ ಎರಡು ವರ್ಷಗಳೇ ಕಳೆದಿದ್ದರೂ ಸಹ ಉತ್ತರ ಕೊರಿಯಾ ಮಾತ್ರ ತನಗೂ ಕೋವಿಡ್ ಮಹಾಮಾರಿಗೂ ಸಂಬಂಧವೇ ಇಲ್ಲ ಎಂಬಂತೆ ಇತ್ತು. ಗಡಿಗಳನ್ನು ಬಂದ್ ಮಾಡುವುದರಿಂದ ಹಿಡಿದು ಕೊರೊನಾ ಸೋಂಕಿತರು ಪತ್ತೆಯಾದಲ್ಲಿ ಗುಂಡಿಕ್ಕುತ್ತೇವೆಂಬ ಕಠಿಣ ಆದೇಶಗಳ ಮೂಲಕವೇ ಉತ್ತರ ಕೊರಿಯಾ ಕಳೆದ 2 ವರ್ಷಗಳಿಂದ ಒಂದೇ ಒಂದು ಕೊರೊನಾ ಸೋಂಕನ್ನು ವರದಿ ಮಾಡದೆಯೇ ಹಾಯಾಗಿತ್ತು. ಆದರೆ ಇದೀಗ ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿದೆ. ಗುರುವಾರದಂದು ಉತ್ತರ ಕೊರಿಯಾದಲ್ಲಿ ಮೊಟ್ಟ ಮೊದಲ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದಂತೆಯೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಫುಲ್ ಅಲರ್ಟ್ ಆಗಿದ್ದಾರೆ.
ಕೊರೊನಾ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಸಭೆ ಕರೆದ ನಾಯಕ ಕಿಮ್ ಜಾಂಗ್ ಉನ್ ಮೊಟ್ಟ ಮೊದಲ ಬಾರಿಗೆ ಫೇಸ್ ಮಾಸ್ಕ್ ಧರಿಸಿದ್ದನ್ನು ಕಂಡು ಬಂದಿದೆ. ಕೊರೊನಾ ಸಾಂಕ್ರಾಮಿಕ ಆರಂಭವಾಗಿ ಎರಡು ವರ್ಷಗಳಲ್ಲಿ ಇಡೀ ವಿಶ್ವಕ್ಕೆ ನಲುಗಿದ್ದರೂ ಸಹ ನಮ್ಮಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.
ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ಕಿಮ್ ಜಾಂಗ್ ಉನ್ ದೇಶಾದ್ಯಂತ ಎಲ್ಲಾ ನಗರಗಳು ಹಾಗೂ ಕೌಂಟಿಗಳಲ್ಲಿ ಸಂಪೂರ್ಣ ಲಾಕ್ಡೌನ್ಗೆ ಕರೆ ನೀಡಿದ್ದಾರೆ. ವೈರಸ್ ಹರಡುವುದನ್ನು ತಡೆಯಲು ಕೆಲಸದ ಸ್ಥಳಗಳನ್ನು ಘಟಕಗಳಿಂದ ಪ್ರತ್ಯೇಕಿಸಬೇಕು ಎಂದು ಹೇಳಿದರು. ಉತ್ತರ ಕೊರಿಯಾದಲ್ಲಿ ಕೊರೊನಾ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಇನ್ನೂ ಸೂಕ್ತ ಮಾಹಿತಿ ದೊರಕಿಲ್ಲ. ಇಲ್ಲಿ 26ಕ್ಕೂ ಅಧಿಕ ಮಿಲಿಯನ್ ಜನರು ಇನ್ನೂ ಕೊರೊನಾ ಲಸಿಕೆಯನ್ನು ಸ್ವೀಕರಿಸಿಲ್ಲ. ಹಾಗೂ ಇಲ್ಲಿನ ಆರೋಗ್ಯ ವ್ಯವಸ್ಥೆ ಕೂಡ ಕಳಪೆ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತದೆ.
ರಾಜಧಾನಿ ಪ್ಯೋಂಗ್ಯಾಂಗ್ನಲ್ಲಿ ಜ್ವರದಿಂದ ಬಳಲುತ್ತಿರುವ ಅಸಂಖ್ಯಾತ ಜನಸಂಖ್ಯೆಯಿಂದ ಭಾನುವಾರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು ಇವರೆಲ್ಲ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೊರಿಯನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನು ಓದಿ : IPL 2022 AB de Villiers : ಆರ್‌ಸಿಬಿಗೆ ಮರಳಲಿದ್ದಾರೆ ಎಬಿ ಡಿವಿಲಿಯರ್ಸ್ : ವಿರಾಟ್ ಕೊಹ್ಲಿ ಹೇಳಿಕೆ
ಇದನ್ನೂ ಓದಿ : Brendon McCullum : ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ತಂಡಕ್ಕೆ ಕೋಚ್ : ಕೆಕೆಆರ್ ತೊರೆಯುತ್ತಾರಾ ನ್ಯೂಜಿಲೆಂಡ್ ಮಾಜಿ ನಾಯಕ
Kim Jong-un wears mask for 1st time after North Korea confirms Covid outbreak