Sunny Leone Birthday : ‘ಬೇಕರಿ ಕೆಲಸದಿಂದ ಬಾಲಿವುಡ್​ ನಟಿಯವರೆಗೆ…’ : ಇಲ್ಲಿದೆ ನೋಡಿ ನಟಿ ಸನ್ನಿ ಲಿಯೋನ್ ನಡೆದು ಬಂದ ಹಾದಿ

Sunny Leone Birthday : ಸನ್ನಿ ಲಿಯೋನ್​ ಬಾಲಿವುಡ್​ನ ಇಂಡಸ್ಟ್ರಿಯಲ್ಲಿ ಹಾಟೆಸ್ಟ್​​ ನಟಿ ಎಂದು ಹೇಳಿದರೆ ತಪ್ಪಾಗಲಾರದು. ತಮ್ಮ ನಟನಾ ಕೌಶಲ್ಯ , ಸುಂದರವಾದ ಮೈಮಾಟ, ನೃತ್ಯ ಕಲೆಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಿಗ್​ ಬಾಸ್​ ಸೀಸನ್​ 5 ಸ್ಪರ್ಧಿಯಾಗಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವುದರಿಂದ ಹಿಡಿದು ಮಹೇಶ್​ ಭಟ್​​​ ಮತ್ತು ಪೂಜಾ ಭಟ್​​ರ ಸಿನಿಮಾದಲ್ಲಿ ನಟಿಸುವವರೆಗೆ ನಟಿ ಸನ್ನಿ ಲಿಯೋನ್​ ಬಾಲಿವುಡ್​ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೀಲಿ ಚಿತ್ರಗಳ ನಟನೆಯ ಹಿನ್ನೆಲೆಯಿಂದ ಬಾಲಿವುಡ್​ಗೆ ಬಂದು ಉತ್ತಮ ಹೆಸರು ಸಂಪಾದಿಸಿದ ನಟಿ ಸನ್ನಿ ಲಿಯೋನ್​ ಅನೇಕ ಮಹಿಳೆಯರಿಗೆ ಮಾದರಿ ಎನಿಸಿದ್ದಾರೆ. ಇಂದು ಸನ್ನಿಲಿಯೋನ್​ ತಮ್ಮ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಇಂದು ನಟಿಯ ಬಗ್ಗೆ ನೀವು ಕೇಳಿರದ ಕೆಲವು ಮಹತ್ವದ ವಿಚಾರದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.


ಸನ್ನಿ ಲಿಯೋನ್​​ರ ಮೊದಲ ಹೆಸರು ಕರೆಣ್​ಜೀತ್​​ ಕೌರ್​ ವೋಹ್ರಾ, ಕೆನಡಾದ ಒಂಟಾರಿಯೋದಲ್ಲಿರುವ ಸರ್ನಿಯಾದಲ್ಲಿ ಸಿಖ್​ ಕುಟುಂಬದಲ್ಲಿ ಸನ್ನಿ ಸನ್ನಿ ಲಿಯೋನ್​ ಜನಿಸಿದ್ದರು.


ನೀಲಿ ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕೂ ಮುನ್ನ ಅವರು ಜರ್ಮನ್​ ಬೇಕರಿ ಹಾಗೂ ತೆರಿಗೆ ಮತ್ತು ನಿವೃತ್ತಿ ಸಂಸ್ಥೆಯಲ್ಲಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳ ನರ್ಸ್ ಆಗಲು ಅಧ್ಯಯನ ಮಾಡಿದ್ದ ಇವರು ಬಳಿಕ ನೀಲಿ ಚಿತ್ರಗಳಲ್ಲಿ ಕೆಲಸ ಮಾಡಲು ಆರಂಭಿಸಿದ ಬಳಿಕ ಸನ್ನಿ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು. ಕಾಲಾಂತರದಲ್ಲಿ ಇದಕ್ಕೆ ಲಿಯೋನ್​ ಎಂಬ ಅಡ್ಡ ಹೆಸರನ್ನೂ ಇವರೇ ಆಯ್ಕೆ ಮಾಡಿಕೊಂಡಿದ್ದರು.


ಸನ್ನಿ 2016 ರಲ್ಲಿ BBC ಯ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಗೂಗಲ್​ನಲ್ಲಿ 2ನೇ ಅತೀ ಹೆಚ್ಚು ಹುಡುಕಾಟ ನಡೆಸಿದ ಭಾರತೀಯ ಸೆಲೆಬ್ರಿಟಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ( ಜನವರಿ ಹಾಗೂ ಏಪ್ರಿಲ್​​ 2020ರ ಅವಧಿಯಲ್ಲಿ 31 ಲಕ್ಷ ಬಾರಿ ಇವರನ್ನು ಗೂಗಲ್​ನಲ್ಲಿ ಜನರು ಹುಡುಕಿದ್ದಾರೆ ).


ಸನ್ನಿ ಲಿಯೋನ್ NFT (ನಾನ್ ಫಂಗಬಲ್ ಟೋಕನ್) ಜಗತ್ತಿನಲ್ಲಿ ತೊಡಗಿಸಿಕೊಂಡ ಮೊದಲ ಭಾರತೀಯ ಮಹಿಳಾ ನಟಿ ಕೂಡ ಎನಿಸಿದ್ದಾರೆ .
2018 ರಲ್ಲಿ, ಸನ್ನಿ ಲಿಯೋನ್ ತನ್ನದೇ ಆದ ಸೌಂದರ್ಯವರ್ಧಕಗಳ ‘ಸ್ಟಾರ್ ಸ್ಟ್ರಕ್ ಕಾಸ್ಮೆಟಿಕ್ಸ್’ ಅನ್ನು ಪ್ರಾರಂಭಿಸಿದರು. ಬ್ರ್ಯಾಂಡ್‌ನ Instagram ಹ್ಯಾಂಡಲ್‌ನಲ್ಲಿರುವ ವಿವರಣೆಯ ಪ್ರಕಾರ, ಎಲ್ಲಾ ಉತ್ಪನ್ನಗಳು PETA ಪ್ರಮಾಣೀಕರಿಸಲ್ಪಟ್ಟಿವೆ.


2016 ರಲ್ಲಿ ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ಸನ್ನಿ ಪ್ರಾಣಿಗಳ ಹಕ್ಕುಗಳ ಚಾಂಪಿಯನ್ ಆಗಿದ್ದಾರೆ ಮತ್ತು ನಿರಾಶ್ರಿತ ಪ್ರಾಣಿಗಳಿಗೆ ಬೆಂಬಲವನ್ನು ನೀಡಲು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಟು ಅನಿಮಲ್ಸ್ (PETA) ನೊಂದಿಗೆ ಆಗಾಗ್ಗೆ ಸಹಕರಿಸುತ್ತಾರೆ.ನಟಿ, ನಿರ್ಮಾಪಕಿ, ಟ್ಯಾಲೆಂಟ್ ಮ್ಯಾನೇಜರ್ ಮತ್ತು ಕಾಸ್ಮೆಟಿಕ್ಸ್ ಬ್ರಾಂಡ್‌ನ ಮಾಲೀಕರಲ್ಲದೆ, ಸನ್ನಿ ಲೇಖಕಿಯೂ ಹೌದು. ಅವರ ಪುಸ್ತಕ ಸ್ವೀಟ್ ಡ್ರೀಮ್ಸ್ ರೋಮ್ಯಾಂಟಿಕ್ ಸಣ್ಣ ಕಥೆಗಳನ್ನು ಒಳಗೊಂಡಿದೆ.
ಸನ್ನಿ ಲಿಯೋನ್​ 2011 ರಲ್ಲಿ ಡೇನಿಯಲ್ ವೆಬರ್​​ನ್ನು ವಿವಾಹವಾದರು.ಇಬ್ಬರೂ 2015 ರಲ್ಲಿ ಸ್ಥಾಪನೆಯಾದ ಸನ್‌ಸಿಟಿ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ನಡೆಸುತ್ತಿದ್ದಾರೆ.
ಜುಲೈ 2017 ರಲ್ಲಿ, ಸನ್ನಿ ಮತ್ತು ಪತಿ ಡೇನಿಯಲ್ ವೆಬರ್ ತಮ್ಮ ಮೊದಲ ಮಗುವನ್ನು ದತ್ತು ಪಡೆದರು, ಅವರಿಗೆ ಅವರು ನಿಶಾ ಕೌರ್ ವೆಬರ್ ಎಂದು ಹೆಸರಿಸಿದರು. ನಂತರ, ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಆಶರ್ ಮತ್ತು ನೋವಾ ಎಂಬ ಇಬ್ಬರು ಪುತ್ರರನ್ನು ಸ್ವಾಗತಿಸಿದರು.

ಇದನ್ನು ಓದಿ : Brendon McCullum : ಬ್ರೆಂಡನ್‌ ಮೆಕಲಮ್‌ ಇಂಗ್ಲೆಂಡ್‌ ತಂಡಕ್ಕೆ ಕೋಚ್‌ : ಕೆಕೆಆರ್‌ ತೊರೆಯುತ್ತಾರಾ ನ್ಯೂಜಿಲೆಂಡ್‌ ಮಾಜಿ ನಾಯಕ

ಇದನ್ನೂ ಓದಿ : IPL 2022 AB de Villiers : ಆರ್‌ಸಿಬಿಗೆ ಮರಳಲಿದ್ದಾರೆ ಎಬಿ ಡಿವಿಲಿಯರ್ಸ್ : ವಿರಾಟ್‌ ಕೊಹ್ಲಿ ಹೇಳಿಕೆ

Sunny Leone Birthday: From working in bakery to being first Indian actress to mint NFT, few facts about diva

Comments are closed.