World Cadets Chess : ವಿಶ್ವ ಚೆಸ್‌ ಚಾಂಪಿಯನ್‌ ಶಿಪ್‌ ಗೆಲುವನ್ನು ಪುನೀತ್‌ ರಾಜ್‌ಕುಮಾರ್‌ಗೆ ಸಮರ್ಪಿಸಿದ ಪುಟ್ಟ ಪೋರಿ ಎ ಚಾರ್ವಿ

ಯೂರೋಪ್‌ನ ಜಾರ್ಜಿಯಾದಲ್ಲಿ ನಡೆದ FIDE‌ ವಿಶ್ವ ಕೆಡೆಟ್ಸ್‌ ಚೆಸ್‌ (World Cadets Chess) ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕ ಹಾಸನದ ಎ ಚಾರ್ವಿ ಚಾಂಪಿಯನ್‌ ಆಗಿದ್ದಾರೆ. ಎಂಟು ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಪುಟ್ಟ ಹುಡುಗಿ ಭಾರತದ ಕೀರ್ತಿ ಪಾತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ತನ್ನ ಈ ವಿಶ್ವ ಚಾಂಪಿಯನ್‌ ಶಿಪ್ ಗೆಲುವನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ಗೆ ಸಮರ್ಪಿಸಿದ್ದಾರೆ.

ಚೆಸ್‌ ಎನ್ನುವುದು ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿರುವ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟವಾಗಿರುತ್ತದೆ. ಇಲ್ಲಿ ಕೂಡ ಮಗುವಿನ ಶುದ್ಧ ಮನಸ್ಸಿನ ಅಭಿಮಾನ ಪ್ರಕಟಗೊಳುತ್ತದೆ. ಹಾಸನದ ಶ್ರವಣಬೆಳಗೊಳ ಮೂಲದ ಚಾರ್ವಿ ತನ್ನ ವಿಶ್ವ ಚಾಂಪಿಯನ್‌ ಶಿಪ್‌ ಗೆಲುವನ್ನು ತನ್ನ ಮೆಚ್ಚಿನ ನಟನಿಗೆ ಅರ್ಪಿಸಿದ್ದಾರೆ. ಇದು ತನ್ನ ಚಾಂಪಿಯನ್‌ ಶಿಪ್‌ಯೊಂದಿಗೆ ನಟ ಪುನೀತ್‌ ರಾಜಕುಮಾರ್‌ರವರಿಗೆ ಗೌರವನ್ನು ಸಲ್ಲಿಸಿದನ್ನು ಸೂಚಿಸುತ್ತದೆ.

(World Cadets Chess)ಈ ಸ್ಪರ್ಧೆಯಲ್ಲಿ ಚಾರ್ವಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ್ದು, ಒಟ್ಟು 11 ಸುತ್ತುಗಳಿಂದ 9.5 ಅಂಕ ಪಡೆದುಕೊಳ್ಳುವ ಮೂಲಕ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಚಾರ್ವಿ ಕೊನೆಯ ಮೂರು ಸುತ್ತಗಳನ್ನು ಇಂಗ್ಲೆಂಡ್‌ನ ಬೋಧನ ಶಿವಾನಂದನ್‌ ಜೊತೆ ಆಟವಾಡಿದರು. ಅದರಲ್ಲಿ ಇಬ್ಬರೂ ಕೂಡ 9.5 ಅಂಕಗಳೊಂದಿಗೆ ಚೆಸ್‌ ಆಟವನ್ನು ಮುಕ್ತಾಯಗೊಳಿಸಿದ್ದಾರೆ. ಆ ನಂತರ ನಡೆದ ಟೈ-ಬ್ರೇಕ್‌ನಲ್ಲಿ ಬೋಧನರವರನ್ನು ಹಿಮ್ಮೆಟ್ಟಿ ಚಾರ್ವಿ ಲಿಟನ್‌ ಚೆಸ್‌ ಚಾಂಪಿಯನ್‌ ಆಗಿದ್ದಾರೆ.

ವಿಶ್ವ ಕೆಡೆಟ್ಸ್‌ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ 12 ವರ್ಷದೊಳಗಿನವರ ಸ್ಪರ್ಧೆ ಕೂಡ ನಡೆದಿದ್ದು ಅದರಲ್ಲಿ ಗಾಜಿಯಾಬಾದ್‌ ಮೂಲದ ಶುಭಿ ಗುಪ್ತಾ ಕೂಡ ಭಾಗವಹಿಸಿದ್ದು, ಅವರು ಕೂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶುಭಿ ಗುಪ್ತಾ ಅವರು ನಡೆದ 11 ಸುತ್ತಗಳಲ್ಲಿ 8.5 ಅಂಕಗಳನ್ನು ಪಡೆದುಕೊಂಡು ಚಾಂಪಿಯನ್‌ ಆಗಿದ್ದಾರೆ.

ಇದನ್ನೂ ಓದಿ : ಇರಾನ್​​ನಲ್ಲಿ ಮುಂದುವರಿದ ಹಿಜಾಬ್ ವಿರುದ್ಧದ ಹೋರಾಟ: 20 ವರ್ಷದ ಯುವತಿಯನ್ನು ಕ್ರೂರವಾಗಿ ಕೊಂದ ಪೊಲೀಸರು

ಇದನ್ನೂ ಓದಿ : ಫೋನ್​ ಚಾರ್ಜರ್​ ಬಳಸಿ ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಅಂತಾರಾಷ್ಟ್ರಿಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪಾತಾಕೆಯನ್ನುಹಾರಿಸಿದ ಚಾರ್ವಿಗೆ ಚೆಸ್‌ ಆಟದಿಂದಲೇ ಭಾರತದಲ್ಲಿ ಅತ್ಯಂತ ಪ್ರಸಿದ್ಧಯಾದ ವಿಶ್ವನಾಥನ್‌ ಆನಂದ್‌ರವರು ಅಭಿನಂದಿಸಿದ್ದಾರೆ. ಕ್ರೀಡಾ ಸಚಿವರಾದ ನಾರಾಯಣ ಗೌಡರವರು ವಿಶ್ವ ಕೆಡೆಟ್‌ ಚೆಸ್‌ ಚಾಂಪಿಯನ್‌ ಶಿಪ್‌ನಲ್ಲಿ ಪ್ರಶಸ್ತಿಯನ್ನು ಪಡೆದ ಹಾಸನದ ಚಾರ್ವಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

Little Pori A Charvi dedicates World Chess Championship win to Puneeth Rajkumar

Comments are closed.