Puneeth Rajkumar :ಅಣ್ಣಾವ್ರ ಜೊತೆ ಅಪ್ಪು : ಅಪರೂಪದ ಪೋಟೋ ವೈರಲ್

(Puneeth Rajkumar )ಇವರಿಬ್ಬರು ಕನ್ನಡ ಚಿತ್ರರಂಗ ಕಂಡ ಅನರ್ಘ್ಯ ರತ್ನಗಳು. ಒಬ್ಬರು ಅಭಿಮಾನಿಗಳ ಪಾಲಿಗೆ ಅಣ್ಣಾವ್ರು. ಇನ್ನೊಬ್ಬರು ದೊಡ್ಮನೆ ಹುಡುಗ. ತಂದೆ ಮಗನಾಗಿದ್ದರೂ ಡಾ. ರಾಜ್‌ ಕುಮಾರ್‌ ಅವರು ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳ ಪಾಲಿಗೆ ದೇವರಂತಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇಬ್ಬರ ಕೊಡುಗೆ ಅಪಾರ. ಸ್ಯಾಂಡಲ್‌ವುಡ್‌ ನ್ನು ಜಗತ್ತಿಗೆ ಪರಿಚಯಿಸಿದ್ದು, ಅಣ್ಣಾವ್ರ, ಅವರ ಮಗನಾಗಿ ಜನಿಸಿದ(Puneeth Rajkumar ) ಪುನೀತ್‌ ರಾಜ್‌ ಕುಮಾರ್‌ ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಇಂತಹ ತಂದೆ ಮಗ ಜೋಡಿಯಾಗಿ ನಟಿಸಿ, ತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಇದೀಗ ಇಬ್ಬರು ಆಟೋದಲ್ಲಿ ಕುಳಿತ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚಿಕ್ಕ ವಯಸ್ಸಿನಲ್ಲಿಯೇ ಅಪ್ಪು ಬಣ್ಣದ ಲೋಕ್ಕೆ ಕಾಲಿಟ್ಟವರು. ತಂದೆ ಮಹಾನ್‌ ನಟ ಅನ್ನೋ ಹಮ್ಮಿಲ್ಲದೇ, ಸರಳತೆಯಿಂದಲೇ ಕೋಟ್ಯಾಂತರ ಜನರ ಮನಸನ್ನು ಗೆದ್ದವರು ಪುನೀತ್‌ ರಾಜ್‌ ಕುಮಾರ್.‌ ಡಾ.ರಾಜ್‌ ಕುಮಾರ್‌ ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್‌ ಬೆಟ್ಟದ ಹೂವು ಸಿನಿಮಾದ ರಾಮು ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಎಂದಿಗೂ ಅಣ್ಣಾವ್ರು ಅನಿಸಿಕೊಂಡಿರುವ ನಟಸಾರ್ವಭೌಮ ಡಾ.ರಾಜ್‌ ಕುಮಾರ್‌ ಹಾಗೂ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರು ಬಾರದ ಲೋಕಕ್ಕೆ ಪಯಣಿಸಿದ್ದರೂ ಕೂಡ ಅಭಿಮಾನಿಗಳ ಎದೆಯಲ್ಲಿ ಇಂದಿಗೂ ಅಜರಾಮರ. ಸಾಮಾಜಿಕ ಜಾಲತಾಣದಲ್ಲಿ ಹಳೆಯ ಪೋಟೋವನ್ನು ವೈರಲ್‌ ಆಗುತ್ತಿದ್ದಂತೆಯೇ ಲಕ್ಷಾಂತರ ಅಭಿಮಾನಿಗಳು ಪೋಟೋವನ್ನು ಇಷ್ಟಪಟ್ಟಿದ್ದಾರೆ. ಹಲವರು ಕಮೆಂಟ್‌ ಮಾಡುತ್ತಿದ್ರೆ, ಇನ್ನೂ ಬಹುತೇಕರು ಪೋಟೋಗೆ ಲೈಕ್‌ ಕೊಟ್ಟಿದ್ದಾರೆ. ಇನ್ನೂ ಕೆಲವರು ಪೋಟೋವನ್ನು ಶೇರ್‌ ಮಾಡುವ ಮೂಲಕ ನೆಚ್ಚಿನ ನಟರಿಗೆ ಅಭಿಮಾನವನ್ನು ತೋರಿಸುತ್ತಿದ್ದಾರೆ.

ಇದನ್ನೂ ಓದಿ: Galipata 2 : ದಸರಾ ಧಮಾಕ..ಜೀ5 ಒಟಿಟಿಗೆ ಬರ್ತಿದೆ ಭಟ್ರು-ಗಣೇಶ್ ಕಾಂಬಿನೇಶನ್‌ ಚಿತ್ರ “ಗಾಳಿಪಟ 2”

ಇದನ್ನೂ ಓದಿ:Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

ಇದನ್ನೂ ಓದಿ:Kireeti Reddy : ಕಿರೀಟಿ ಸಿನಿಮಾ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್- ಸೆಪ್ಟೆಂಬರ್ 29ಕ್ಕೆ ಟೈಟಲ್ ಅನಾವರಣ

ಅಭಿನಯ ಚಕ್ರವರ್ತಿ ಎಂದೆನಿಸಿಕೊಂಡಿರುವ ರಾಜ್‌ ಕುಮಾರ್‌ ಅವರಿಗೆ ಸರಿ ಸಮರಾಗಿ ನಟಿಸೋದಕ್ಕೆ ಹಲವು ನಟರೇ ಹಿಂಜರಿಯುತ್ತಾರೆ. ಆದರೆ ಪುನೀತ್‌ ರಾಜ್‌ ಕುಮಾರ್‌ ಅವರು ಬಾಲ್ಯದಲ್ಲಿಯೇ ತಂದೆಯ ಜೊತೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬಾಲ ನಟರಾಗಿ, ನಟರಾಗಿ ಪುನೀತ್‌ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಚಿಕ್ಕ ಮಗನನ್ನು ಮುದ್ದಿನಿಂದ ಸಾಕಿರುವ ಡಾ.ರಾಜ್‌ ಕುಮಾರ್‌ ಅವರು, ತಮ್ಮ ಮಗನ ನಟನಾ ಸಾಮರ್ಥ್ಯಕ್ಕೆ ಬೆರಗಾಗಿ ಹೋಗಿದ್ದರು. ಆದರೆ ಇಂತಹ ಶ್ರೇಷ್ಟ ನಟರು ಇಂದಿಗೆ ನಮ್ಮ ಜೊತೆಗಿಲ್ಲ ಅನ್ನೋ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ. ನಿಮಗೂ ಈ ಅಪರೂಪದ ಪೋಟೋ ಇಷ್ಟವಾಗುತ್ತೆ ಅಂತಾ ಭಾವಿಸಿಕೊಂಡಿದ್ದೇವೆ.

ಇದನ್ನೂ ಓದಿ:Dry Cough : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

ಇದನ್ನೂ ಓದಿ:Suryakumar Yadav Record : 3.7 ಎಸೆತಕ್ಕೊಂದು ಬೌಂಡರಿ, 8.9 ಎಸೆತಕ್ಕೊಂದು ಸಿಕ್ಸರ್; ಸೂರ್ಯನಿಗೆ Sky is the only limit

Dr. Rajkumar and Puneeth photos goes viral in social media

Comments are closed.