1161 Kg Pumpkin : 1161 ಕೆಜಿ ತೂಕದ ಕುಂಬಳಕಾಯಿ ಬೆಳೆದು ಪ್ರಶಸ್ತಿ ಗೆದ್ದ ರೈತ

1161 Kg Pumpkin : ಸಾಮಾನ್ಯವಾಗಿ ಕುಂಬಳಕಾಯಿ ಐದರಿಂದ ಹತ್ತು ಕೆಜಿ ಇರುತ್ತೆ. ಇನ್ನೂ ದೊಡ್ಡದು ಎಂದ್ರೆ ಇಪ್ಪತ್ತರಿಂದ ಮೂವತ್ತು ಕೆಜಿ ತೂಕ ಇರಬಹುದು. ಆದ್ರೆ ಇಲ್ಲೊಬ್ಬ ರೈತ ಬರೋಬ್ಬರಿ 1161 ಕೆಜಿ ತೂಕದ ಕುಂಬಳಕಾಯಿಯನ್ನು ಬೆಳೆದಿದ್ದಾನೆ. ಮಾತ್ರವಲ್ಲ ಬೃಹತ್ ಗಾತ್ರದ ಕುಂಬಳಕಾಯಿ ಬೆಳೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ. ಅಷ್ಟಕ್ಕೂ ಯಾರೀ ರೈತ, ಆತ ಬೆಳೆದಿರುವ ಕುಂಬಳಕಾಯಿಯ ವಿಶೇಷ ಏನು ಕುತೂಹಲವಿದ್ರೆ ಈ ಸ್ಟೋರಿ ಓದಿ.

ಭಾರತದ ರೈತರು ಸಾಮಾನ್ಯವಾಗಿ 7 ರಿಂದ 9 ಇಂಚು ವ್ಯಾಸದ ಕುಂಬಳಕಾಯಿಯನ್ನು ಬೆಳೆಯುತ್ತಾರೆ.ಆದರೆ ಅಮೇರಿಕಾದ ರೈತ ಸಾವಿರಾರು ಕೆಜಿ ತೂಕದ ಕುಂಬಳಕಾಯಿ ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅಮೆರಿಕದ ಕ್ಯಾಲಿಫೋರ್ನಿಯಾದ ಹಾಫ್‌ ಮೂನ್‌ ಬೇ ಎಂಬಲ್ಲಿ ನಡೆದ ಸೂಪರ್ ಬೌಲ್ ಸ್ಪರ್ಧೆಯಲ್ಲಿ ಟ್ರಾವಿಸ್‌ ಜಿನೆಗರ್ ಎಂಬ ರೈತ ಬರೋಬ್ಬರಿ 2,560 ಪೌಂಡ್‌ ಅಂದರೆ 1161 ಕೆಜಿ ತೂಕದ ಕುಂಬಳಕಾಯಿ ಬೆಳೆದು ವಿಶ್ವ ಚಾಂಪಿಯನ್‌ಶಿಪ್‌ ಪಂಪ್ಕಿನ್‌ ವೇ – ಆಫ್‌ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.

ಇನ್ನು ಈತನ ಮನೆಯಿಂದ ಸ್ಪರ್ಧೆ ನಡೆಯುವ ಸ್ಪರ್ಧೆ ನಡೆಯುವ ಸ್ಥಳಕ್ಕೆ ಕುಂಬಳಕಾಯಿಯನ್ನು ತೆಗೆದುಕೊಂಡು ಹೋಗಲು ಬರೋಬ್ಬರಿ 35 ಗಂಟೆಗಳ ಸಮಯವನ್ನು ತೆಗೆದುಕೊಂಡಿದ್ದಾನೆ. ಸಾವಿರಾರು ಕೆಜಿ ಕುಂಬಳ ಕಾಯಿ ಬೆಳೆಯುವುದಕ್ಕೆ ರೈತ ಸಾಕಷ್ಟು ಶ್ರಮವಹಿಸಿದ್ದ. ಅಲ್ಲದೇ ಕುಂಬಳ ಕಾಯಿಯನ್ನು ಸಾಗಾಟ ಮಾಡುವುದು ಕೂಡ ಈತನಿಗೆ ಸವಾಲಿನ ಕೆಲಸವಾಗಿತ್ತು. ಅಂತಿಮವಾಗಿ ಸ್ಪರ್ಧೆಯನ್ನು ಗೆದ್ದಿರುವುದು ಮಾತ್ರವಲ್ಲ ಅಮೇರಿಕಾದ ಅತೀ ದೊಡ್ಡ ಕುಂಬಳಕಾಯಿ ಅನ್ನೋ ಖ್ಯಾತಿಯನ್ನೂ ಪಡೆದುಕೊಂಡಿದ್ದಾನೆ.

ಟ್ರಾವಿಸ್‌ ಜಿನೆಗರ್ ಇಂತಹ ವಿಶಿಷ್ಟ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಇದೇ ಮೊದಲೇನಲ್ಲ.2020ರಲ್ಲಿ ಅಮೆರಿಕದ ಮಿನ್ನೆಸೋಟಾದ ವ್ಯಕ್ತಿ ಟ್ರಾವಿಸ್‌ ಜಿನೆಗರ್‌ 1065 ಕೆಜಿ ತೂಕದ ಕುಂಬಳಕಾಯಿ ಬೆಳೆದು, ಅದಕ್ಕೆ ಟೈಗರ್ ಕಿಂಗ್ ಅಂತ ಹೆಸರಿಟ್ಟಿದ್ದರು. ಅಲ್ಲದೇ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಅಮೇರಿಕಾದ ಬಹುತೇಕ ರೈತರು ತಮ್ಮ ಹೊಲ ಗಳಲ್ಲಿ ಯಥೇಚ್ಚವಾಗಿ ಕುಂಬಳಕಾಯಿಯನ್ನು ಬೆಳೆಯುತ್ತಾರೆ. ವರ್ಷದಲ್ಲೊಮ್ಮೆ ನಡೆಯುವ ಈ ಸ್ಪರ್ಧೆ ಅಮೇರಿಕಾದ ರೈತರ ಪಾಲಿಗೆ ಅವಿಸ್ಮರಣೀಯ. ಇದೇ ಕಾರಣಕ್ಕೆ ಪ್ರಶಸ್ತಿ ಯನ್ನು ಪಡೆದುಕೊಳ್ಳುವ ಸಲುವಾಗಿ ಬೃಹತ್ ಗಾತ್ರದ ತರಕಾರಿಗಳನ್ನು ಬೆಳೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ವಿನೇಗರ್, ಈ ಪ್ರಶಸ್ತಿ ಬಹುತೇಕರಿಗೆ ಒಮ್ಮೆ ಮಾತ್ರವೇ ಸಿಗುತ್ತದೆ. ಆದರೆ ನನಗೆ ಎರಡು ಬಾರಿ ಪ್ರಶಸ್ತಿ ಸಿಕ್ಕಿರುವುದು ಸಂತಸವನ್ನು ತಂದಿದೆ ಎಂದಿದ್ದಾರೆ.

ಇನ್ನು ಜಿನೆಗರ್ ಬೆಳೆದ ಕುಂಬಳಕಾಯಿಗೆ ಮ್ಯಾವೆರಿಕ್ ಎಂದು ಹೆಸರಿಟ್ಟಿದ್ದಾರೆ. ಮ್ಯಾವೆರಿಕ್ ಬೆಳೆದಿರುವ ಈ ಕುಂಬಳಕಾಯಿ ಇದೀಗ ಅಮೇರಿಕಾದ ಅತೀ ತೂಕದ ಕುಂಬಳಕಾಯಿ ಎನಿಸಿಕೊಂಡಿದೆ. ಆದರೆ ವಿಶ್ವದ ಅತೀ ತೂಕದ ಕುಂಬಳಕಾಯಿ ಬೆಳೆದ ದಾಖಲೆ ಸ್ಟೆಫಾನೋ ಕುಟ್ರಿಪಿ ಅವರ ಹೆಸರಿನಲ್ಲಿದೆ.

ಇದನ್ನೂ ಓದಿ : Flipkart Sale:ಲ್ಯಾಪ್​ಟಾಪ್​ ಬದಲು ಡಿಟರ್ಜಂಟ್​ ಸೋಪುಗಳನ್ನು ಕಳುಹಿಸಿಕೊಟ್ಟ ಫ್ಲಿಪ್​ಕಾರ್ಟ್​

ಇದನ್ನೂ ಓದಿ : Miracle about Babiya : ಬ್ರಿಟಿಷ್ ಅಧಿಕಾರಿಗಳಿಗೆ ಪವಾಡ ತೋರಿಸಿತ್ತು ಬಬಿಯಾ ಮೊಸಳೆ

man Grows giant 1161 Kg Pumpkin Maverick

Comments are closed.