Vladimir Putin : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಸತ್ತಿರಬಹುದು ಎಂದು ಹಿರಿಯ ಬ್ರಿಟಿಷ್ ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.ಪುಟಿನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಅವರು ಸತ್ತಿರಲೂಬಹುದು. ಕ್ರೆಮ್ಲಿನ್ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಕಾಲ ಈ ವಿಚಾರವನ್ನು ಮುಚ್ಚಿಡಲಿದೆ ಎಂದು ಎಂಐ 6 ಹೇಳಿದೆ. ಪುಟಿನ್ ಇತ್ತೀಚಿಗೆ ಭಾಗಿಯಾಗಿದ್ದಾರೆ ಎನ್ನಲಾದ ಮಾಧ್ಯಮಗೋಷ್ಠಿಯನ್ನು ಬಹುಶಃ ಮೊದಲೇ ರೆಕಾರ್ಡ್ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ನಡೆದ ಮಾಸ್ಕೋ ವಿಜಯ ದಿನೋತ್ಸವ ಕಾರ್ಯಕ್ರಮದಲ್ಲಿ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಸ್ಥಳದಲ್ಲಿ ತದ್ರೂಪವನ್ನು ಇರಿಸಿದ್ದರಬಹುದು ಎಂದು ಬ್ರಿಟೀಷ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುಪ್ತಚರ ಮೂಲವೊಂದು ತಿಳಿಸಿರುವ ಮಾಹಿತಿಯ ಪ್ರಕಾರ ಪುಟಿನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರು ಮೃತಪಟ್ಟರೆ ಅವರ ಸಾವನ್ನು ವಾರಗಟ್ಟಲೇ ಅಥವಾ ತಿಂಗಳುಗಟ್ಟಲೇ ರಹಸ್ಯವಾಗಿ ಇಡಲಾಗುತ್ತದೆ . ಅವರು ಈಗಾಗಲೇ ಮೃತಪಟ್ಟಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಿದರು.
ಇದು ತಿಳಿಯುವುದು ಅಸಾಧ್ಯ. ಪುಟಿನ್ ಅವರು ಹಿಂದೆ ಅಸ್ವಸ್ಥರಾಗಿದ್ದಾಗ ಬಾಡಿ ಡಬಲ್ಸ್ ಅನ್ನು ಬಳಸಿದ್ದಾರೆ ಮತ್ತು ಕ್ರೆಮ್ಲಿನ್ ಈಗ ಹಾಗೆ ಮಾಡಬಹುದು ಎಂದು ಹೇಳಲಾಗುತ್ತಿದೆ. .
“ಪುಟಿನ್ಗೆ ಸಂಪೂರ್ಣವಾಗಿ ನಿಷ್ಠರಾಗಿರುವ ಹಿರಿಯ ಅಧಿಕಾರಿಗಳ ಸಣ್ಣ ಗುಂಪಿನ ಮುಖ್ಯಸ್ಥರಾಗಿದ್ದಾರೆ.ಈ ಆಪ್ತರಿಗಿರುವ ಪ್ರಮುಖ ಭಯ ಏನೆಂದರೆ ವ್ಲಾಡಿಮಿರ್ ಪುಟಿನ್ (Vladimir Putin) ಮರಣವನ್ನು ಘೋಷಣೆ ಮಾಡಿದ ಬಳಿಕ ಕ್ರೆಮ್ಲಿನ್ನಲ್ಲಿ ದಂಗೆ ಸಂಭವಿಸಬಹುದು ಹಾಗೂ ರಷ್ಯಾದ ಜನರಲ್ಗಳು ಉಕ್ರೇನ್ನಿಂದ ಹಿಂದೆ ಸರಿಯಲು ಬಯಸಬಹುದು ಎಂಬುದಾಗಿದೆ.
ಪುಟಿನ್ರ ಸಾವು ಈ ಆಪ್ತರ ಗುಂಪನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಆದ್ದರಿಂದ ಪುಟಿನ್ ಜೀವಂತವಾಗಿದ್ದಾರೆ ಎಂದು ಹೇಳಲು ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪುಟಿನ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಪುಟಿನ್ ಸ್ಟಿರಾಯ್ಡ್ಗಳನ್ನು ಸ್ವೀಕರಿಸುತ್ತಿದ್ದಾರೆ ಅಥವಾ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಂಬಲಾಗಿದೆ. ಪುಟಿನ್ ಮುಖ ತೀವ್ರವಾಗಿ ಉಬ್ಬಿರುವುದನ್ನು ನೋಡಿದ ಬಳಿಕ ಕೆಲವರು ಅವರಿಗೆ ರಕ್ತದ ಕ್ಯಾನ್ಸರ್ ಇರಬೇಕು ಎಂದಿದ್ದರು.
ಇದನ್ನು ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
ಇದನ್ನೂ ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್ರೇಪ್ಗೆ ಸುಪಾರಿ ಕೊಟ್ಟ ಪತ್ನಿ
MI6 spies claim Vladimir Putin could be dead and a body double is taking his place at public events