BBMP Election ಗೆ ಮತ್ತೊಂದು ವಿಘ್ನ: ಡಿ ಲಿಮಿಟೇಶನ್ ವರದಿ ತಿರಸ್ಕರಿಸಿದ ಸರ್ಕಾರ

ಬೆಂಗಳೂರು : ಸುಪ್ರೀಂ ಆದೇಶದಂತೆ ತುರ್ತು ಚುನಾವಣೆಗೆ (BBMP Election) ಸಜ್ಜಾಗಿರುವ ಬಿಬಿಎಂಪಿ ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಿ ಡಿ ಲಿಮಿಟೇಶನ್ ಅರ್ಜಿ ಸಲ್ಲಿಸಿತ್ತು. ಆದರೆ ಈಗ ವಾರ್ಡ್ ಮರು ವಿಂಗಡಣೆ ಮಾಡುವಲ್ಲಿ ಬಿಬಿಎಂಪಿ ಮಹಾ ಎಡವಟ್ಟು ಎಸಗಿದ್ದು ಬಹಿರಂಗವಾಗಿದ್ದು ಇದೇ ಕಾರಣವನ್ನು ಮುಂದಿಟ್ಟುಕೊಂಡು ಸರ್ಕಾರ ಡಿ ಲಿಮಿಟೇಶನ್ ( D Limitation) ಕರಡನ್ನು ತಿರಸ್ಕರಸಿದೆ.

ಚುನಾವಣೆಗೆ ಸಿದ್ಧತೆ ನಡೆಸಿದ್ದ ಬಿಬಿಎಂಪಿ ನಗರದ ಒಟ್ಟು 193 ವಾರ್ಡ್ ಗಳನ್ನು 243 ಕ್ಕೆ ಏರಿಸಿ ಡಿ ಲಿಮಿಟೇಶನ್ ಪಟ್ಟಿ ತಯಾರಿಸಿ ಬುಧವಾರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಈಗ ಈ ಡಿ ಲಿಮಿಟೇಶನ್ ಪಟ್ಟಿ ತಯಾರಿಕೆಯಲ್ಲಿ 2020 ರ ನಿಯಮ ಉಲ್ಲಂಘನೆಯಾಗಿದೆ ಎಂದು ಸರ್ಕಾರ ವರದಿ ತಿರಸ್ಕರಿಸಿದೆ. ಹಾಗಿದ್ದರೇ ಬಿಬಿಎಂಪಿ ಸಲ್ಲಿಸಿದ ಡಿ ಲಿಮಿಟೇಶನ್ ಪಟ್ಟಿಯಲ್ಲಿ ಏನೆಲ್ಲ ತಪ್ಪುಗಳಾಗಿದೆ ಎಂಬುದನ್ನು ಗಮನಿಸೋದಾದರೇ, ನಿಯಮಾನುಸಾರ ಒಂದು ವಾರ್ಡ್ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಬರದಂತೆ ವಿಂಗಡಣೆ ಮಾಡಬೇಕಿತ್ತು.

ಅದ್ರೆ ಬಿಬಿಎಂಪಿ ಒಂದು ವಾರ್ಡ್ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಹಂಚಿಕೆ ಅಗುವಂತೆ ವಿಂಗಡಣೆ ಮಾಡಿದೆ. ಅಲ್ಲದೇ ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್ ಗಳನ್ನು ಚಿಕ್ಕದಾಗಿ ವಿಂಗಡಣೆ ಮಾಡಿದ್ದು, ಕಡಿಮೆ ಅದಾಯ ಬರುವ ವಾರ್ಡ್ ಗಳನ್ನೂ ದೊಡ್ಡದಾಗಿ ವಿಂಗಡಣೆ ಮಾಡಿದೆ. ಇದರಿಂದ ಅನುದಾನ ಹಂಚಿಕೆ ಹಾಗೂ ತೆರಿಗೆ ಸಂಗ್ರಹಕ್ಕೆ ಪೆಟ್ಟು ಬೀಳಲಿದೆ ಎಂಬ ವಾದ UD ಇಲಾಖೆಯದ್ದು. ಅಲ್ಲದೇ ಹೊಸ ವಾರ್ಡ್ ಗಳಿಗೆ ಬೆಂಗಳೂರಿನ ಇತಿಹಾಸ ಹಿನ್ನೆಲೆಯಲ್ಲಿ ಹೆಸರು ನಾಮಕರಣ ಮಾಡಬೇಕಿತ್ತು. ಆದರೆ ಬಿಬಿಎಂಪಿ ಬೇಕಾಬಿಟ್ಟಿ ರಾಜಕಾರಣಿಗಳ ಕುಟುಂಬಸ್ಥರ ಹೆಸರು ನಾಮಕರಣ ಮಾಡಿದೆ.

ಅಲ್ಲದೇ ವಾರ್ಡ್ ಕರಡು ಪಟ್ಟಿಯನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ರಚಿಸಿ ಸಲ್ಲಿಸಬೇಕಿತ್ತು. ಅದ್ರೆ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ 360 ಪುಟಗಳ ವರದಿಯನ್ನು ಪಾಲಿಕೆ ಸಿದ್ಧಪಡಿಸಿದೆ. ಈ ಎಲ್ಲ ಕಾರಣಗಳಿಗಾಗಿ ಡಿ ಲಿಮಿಟೇಶನ್ ಪಟ್ಟಿಯನ್ನು ರದ್ದುಗೊಳಿಸಿರುವ ಸರ್ಕಾರ ಕನ್ನಡದಲ್ಲೂ ಡಿ ಲಿಮಿಟೇಷನ್ ಕರಡು ಪಟ್ಟಿ ಸಿದ್ಧ ಪಡಿಸಿ ಸಲ್ಲಿಸುವಂತೆ ಸೂಚಿಸಿದೆ.

ಸುಪ್ರೀಂ ಎಂಟು ವಾರದಲ್ಲಿಯೇ ಚುನಾವಣೆ ನಡೆಸಲು ಸೂಚಿಸಿರೋದರಿಂದ ಮತ್ತೆ ಮೂರು ದಿನಗಳಲ್ಲಿ ಎಲ್ಲಾ ತಿದ್ದುಪಡಿಗಳನ್ನು ಮುಗಿಸಿ ಕರಡು ಪಟ್ಟಿ ಸಲ್ಲಿಸುವಂತೆ ಸರ್ಕಾರ ಬಿಬಿಎಂಪಿಗೆ ಸೂಚನೆಯನ್ನು ನೀಡಿದೆ. ಒಟ್ಟಿನಲ್ಲಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ‌ ಚುನಾವಣೆಗೆ ಕಾಲವೇನೋ ಕೂಡಿ ಬಂದಿದೆ. ಅದರೆ ವಿಘ್ನ ಗಳು ಸಾಕಷ್ಟು ಕಾಡುತ್ತಿರೋದು ಸುಳ್ಳಲ್ಲ.

ಇದನ್ನೂ ಓದಿ : ಕರಕುಶಲ ನಿಗಮದಲ್ಲಿ ಬೇಳೂರು ರಾಘವೇಂದ್ರ ಮತ್ತು ಡಿ.ರೂಪಾ ಫೈಟ್: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದೂರು

ಇದನ್ನೂ ಓದಿ : BBMP Election : ಕೊನೆಗೂ ಚುನಾವಣೆಗೆ ಸಿದ್ಧವಾದ ಬಿಬಿಎಂಪಿ: ಸರ್ಕಾರಕ್ಕೆ ಡಿ ಲಿಮಿಟೇಶನ್ ಪಟ್ಟಿ ಸಲ್ಲಿಕೆ

BBMP Election D limitation Reject Karnataka Government

Comments are closed.