ಕರಕುಶಲ ನಿಗಮದಲ್ಲಿ ಬೇಳೂರು ರಾಘವೇಂದ್ರ ಮತ್ತು ಡಿ.ರೂಪಾ ಫೈಟ್: ಸರ್ಕಾರಕ್ಕೆ ಸಲ್ಲಿಕೆಯಾಯ್ತು ದೂರು

ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (Karnataka State Handicrafts Development Corporation) ಕರಕುಶಲ ಅಭಿವೃದ್ಧಿಯ ಕಾರಣಕ್ಕೆ ಸದ್ದು ಮಾಡುವ ಬದಲು ಹೈಫ್ರೋಪೈಲ್ ಫೈಟ್ ನಿಂದ ಸುದ್ದಿಯಾಗಿದೆ. ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ವಿರುದ್ಧ ನಿಗಮದ ಎಂಡಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಸಮರ ಸಾರಿದ್ದು, ಇಬ್ಬರ ಆರೋಪ ಪ್ರತ್ಯಾರೋಪ ಜೋರಾಗಿದೆ. ಅಲ್ಲದೇ ಈಗ ಈ ಪ್ರಕರಣ ಸರ್ಕಾರದ ಅಂಗಳ ತಲುಪಿದೆ.

ಮೊದಲು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ವಿರುದ್ಧ ಡಿ.ರೂಪಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ವೇಳೆ ಬೇಳೂರು ರಾಘವೇಂದ್ರ ಎಂ.ಜಿ.ರಸ್ತೆಯಲ್ಲಿರುವ ನಿಗಮದ ಕಚೇರಿಯ ಸಿಸಿಟಿವಿ ಹಾಗೂ ಡಿವಿಆರ್ ನ್ನು ಉದ್ಧೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಮಾತ್ರವಲ್ಲ ಮೇ 27 ರಂದು ನಿಗಮದ ಕಚೇರಿಗೆ ಅಪರಿಚಿತ ವ್ಯಕ್ತಿ ಜೊತೆ ಬಂದ ಬೇಳೂರು ರಾಘವೇಂದ್ರ, ಅಟೆಂಡರ್ ಮೂರ್ತಿ ಅವರನ್ನು ಬಳಸಿಕೊಂಡು ಸಿಸಿಟಿವಿಯನ್ನು ಬಲವಂತವಾಗಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಬಳಿಕ ಈ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದ್ದರು. ಡಿ.ರೂಪಾ ಪ್ರತಿದಿನ ಕಚೇರಿಗೆ ಬರ್ತಿರಲಿಲ್ಲ.ಮನೆಗೆ ಕಡತಗಳನ್ನು ತರಿಸಿಕೊಳ್ಳುತ್ತಿದ್ದರು.ಹೀಗಾಗಿ ಪ್ರತಿದಿನ ಕಚೇರಿಗೆ ಹಾಜರಾಗುವಂತೆ ನಾನು ನೊಟೀಸ್ ನೀಡಿದ್ದೆ. ಅದಕ್ಕಾಗಿ ಈ ರೀತಿ ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಡಿ.ರೂಪಾ ಮೇಲೆ ಬೇಳೂರು ರಾಘವೇಂದ್ರ ಆರೋಪಿಸಿದ್ದರು. ಅಲ್ಲದೇ ಮೂರು ತಿಂಗಳಿನಿಂದ ನಿಗಮದ ಸಿಬ್ಬಂದಿಗೆ ಡಿ. ರೂಪಾ ಸಂಬಳ ನೀಡಿಲ್ಲ. ನಿಗಮದ ವೆಹಿಕಲ್ ಹಾಗೂ ಸಿಬ್ಬಂದಿಯನ್ನು ಸ್ವಂತ ಕೆಲಸಕ್ಕಾಗಿ ಬಳಸಿಕೊಳ್ತಿದ್ದಾರೆ ಎಂದು ಬೇಳೂರು ರೂಪಾ ವಿರುದ್ಧ ಆರೋಪಿಸಿದ್ದಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಹಂಪಿ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಡಿ.ರೂಪಾ 6 ಕೋಟಿ ರೂಪಾಯಿ ಅವ್ಯವಹಾರ ಎಸಗಿದ್ದಾರೆ ಎಂದು ಬೇಳೂರು ಆರೋಪಿಸಿದ್ದಾರೆ. ಇದಕ್ಕೆ ಉತ್ತರವಾಗಿ ಬೇಳೂರು ರಾಘವೇಂದ್ರ ವಿರುದ್ಧ ಮತ್ತೆ ಡಿ.ರೂಪಾ ಸರ್ಕಾರಕ್ಕೆ ವಿಸ್ಕೃತವಾದ ಪತ್ರ ಬರೆದಿದ್ದು ಅದರಲ್ಲಿ ಬೇಳೂರು ರಾಘವೇಂದ್ರ ವಿರುದ್ಧ ಹಣ ದುರ್ಬಳಕೆ, ವಾಹನ ಅಪಘಾತ ಮಾಡಿ ಚಾಲಕನನ್ನು ಹೊಣೆ‌ ಮಾಡಿದ್ದು, ಮಹಿಳಾ ಆಪ್ತ ಸಹಾಯಕ ಬೇಕೆಂದು ಬೇಡಿಕೆ ಇಟ್ಟಿದ್ದು, ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬಳಸಲು ಒತ್ತಾಯಿಸಿದ್ದು ಸೇರಿದಂತೆ 10 ಕ್ಕೂ ಹೆಚ್ಚು ಆರೋಪ ಮಾಡಿದ್ದಾರೆ.

Beloor Raghavendra Shetty vs Roopa D IPS war in Karnataka State Handicrafts Development Corporation

ಒಟ್ಟಿನಲ್ಲಿ ಸದ್ಯ ರಾಜ್ಯ ಕರಕುಶಲ ನಿಗಮ ಪತ್ರಯುದ್ಧದ ಮೂಲಕ ಸುದ್ದಿಯಲ್ಲಿದ್ದು ನಿಗಮದ ಎಂಡಿ ಮತ್ತು ಅಧ್ಯಕ್ಷರ ನಡುವಿನ ಈ ವಾರ್ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಜುಲೈ 1 ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ರೆ ದುಪ್ಪಟ್ಟು ದಂಡ : ಲಿಂಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : IDBI Bank Recruitment 2022 : ಪದವೀಧರರಿಗೆ ಐಡಿಬಿಐ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ : 1,544 ಹುದ್ದೆಗಳಿಗೆ ಅರ್ಜಿ ಆಹ್ವಾನ

Beloor Raghavendra Shetty vs Roopa D IPS war in Karnataka State Handicrafts Development Corporation

Comments are closed.